Saturday, July 13, 2024
spot_img
spot_img
spot_img
spot_img
spot_img
spot_img

ಬೆಳ್ಳಂಬೆಳಗ್ಗೆ ವಾಟ್ಸ್ಆಪ್ ನೋಡಿ ಬೆಚ್ಚಿಬಿದ್ದ ದಂಪತಿ ; ಅಂಥದ್ದೇನಿತ್ತು ಅದರಲ್ಲಿ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿವಿಲ್ (Civil) ಪರೀಕ್ಷೆ ಬರೆದಿದ್ದ ಯುವಕನೋರ್ವ ತನ್ನ ಕನಸು ಈಡೇರಲಿಲ್ಲ ಅಂತ ಕೂರದೇ ಸುತ್ತ ಮುತ್ತಲಿನ ಮನೆಗಳಿಗೆ ಕಳ್ಳತನಕ್ಕೆ ಇಳಿದಿದ್ದಾನೆ.

ಛತ್ತೀಸ್’ಗಢದ ಈ ಯುವಕನ ಹೆಸರು ವಿನಯ್ ಕುಮಾರ್ ಸಾಹು. ವಯಸ್ಸು 28 ವರ್ಷ. ಈತ ಸರ್ಕಾರಿ ನೌಕರಿ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದ. ಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದ. ಆದ್ರೆ ಯಾವುದೇ ಕೆಲಸ ಈತನಿಗೆ ಸಿಗಲಿಲ್ಲ.

ಇದನ್ನು ಓದಿ : ಮೈಮೇಲೆ ದೆವ್ವ ಬಂದಂತೆ ವರ್ತಿಸಿದ ವಿದ್ಯಾರ್ಥಿನಿಯರ ಕಂಡು ಗಾಬರಿಯಾದ ಶಿಕ್ಷಕರು ; Video ನೋಡಿದ್ರೆ ಬೆಚ್ಚಿಬೀಳ್ತಿರಾ.!

ಹೀಗಾಗಿ ತನ್ನ ಸರ್ಕಾರಿ ಕೆಲಸದ ವಿಷಯಕ್ಕೆ ಎಳ್ಳುನೀರು ಬಿಟ್ಟು ತನ್ನ ಲೈನ್ ಚೇಂಜ್ ಮಾಡಿ ತರಕಾರಿ ಮಾರುಕಟ್ಟೆಗೆ ಬರ್ತಿದ್ದವರ ಮೊಬೈಲ್ ಕಳ್ಳತನ ಶುರು ಮಾಡಿದೆ. ನಿಧಾನವಾಗಿ ಸಣ್ಣಪುಟ್ಟ ವಸ್ತುಗಳನ್ನು ಕದಿಯಲು ಶುರು ಮಾಡಿದೆ. ರಾತ್ರಿ ತನ್ನ ಊರಿನಲ್ಲಿರುವ ಮನೆಗಳಿಗೆ ಹೋಗಿ ಕಳ್ಳತನ ಮಾಡ್ತಿದ್ದ.

ವಿಶೇಷ ಏನಂದ್ರೆ, ವಿನಯ್ ತನ್ನೂರು ಬಿಟ್ಟು ಮತ್ತೆಲ್ಲಿಯೂ ಕಳ್ಳತನ ಮಾಡುವ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ.

ಹೀಗೆ ಮೂರನೇ ಬಾರಿ ಒಂದೇ ಮನೆಗೆ ಕಳ್ಳತನಕ್ಕೆ ಬಂದಾಗ, ದಂಪತಿಗಳು ಬೆಡ್ ಮೇಲೆ ಏಕಾಂತದಲ್ಲಿರುವುದು ಯುವಕನ ಕಣ್ಣಿಗೆ ಬಿದ್ದಿದ್ದಾರೆ.

ಇದನ್ನು ಓದಿ : ಪ್ರೀತಿ ವಿಷಯದಲ್ಲಿ ಈ 5 ರಾಶಿಗಳ ಹುಡುಗರು ತುಂಬಾನೇ ಕ್ರೇಜಿ ; ನೀವೂ ಈ ರಾಶಿಯವರಾ.?

ಮನೆಯಲ್ಲಿ ಯಾವ ಪರಿವೆಯೂ ಇಲ್ಲದೆ ಶಾರೀರಿಕ ಸಂಬಂಧ (Physical Relationship) ಬೆಳೆಸುತ್ತಿದ್ದ ಜೋಡಿಯನ್ನು ನೋಡಿದ ವಿನಯ್, ತನ್ನ ಕದ್ದ ಮೊಬೈಲ್ ತೆಗೆದಿದ್ದಾನೆ. ಕಿಟಕಿ ಪಕ್ಕ ನಿಂತು ಅವರ ವಿಡಿಯೋ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಮರುದಿನ ಬೆಳಗ್ಗೆ ವಾಟ್ಸ್ ಆಯಪ್‌ನಲ್ಲಿ ದಂಪತಿಗೆ ವಿಡಿಯೋ ಬಂದಿದೆ. ಇದನ್ನು ನೋಡಿದ ದಂಪತಿ ದಂಗಾಗಿದ್ದಾರೆ. ವಿಡಿಯೋ ಜೊತೆ ವಿನಯ್ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇಲ್ಲವೆಂದ್ರೆ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕಿದ್ದಾನೆ.

ಇದನ್ನು ಓದಿ : ಇಂಡಿಯನ್ ಏವಿಯೇಷನ್ ಸರ್ವೀಸಸ್ 3,500 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಆಗ ದಂಪತಿ ಪೊಲೀಸ್ ಮೊರೆ ಹೋಗಿದ್ದಾರೆ. ವಿಚಾರಣೆ ಕೈಗೊಂಡ ಪೊಲೀಸರು, ಸೈಬರ್ ಕ್ರೈಂ ಪೊಲೀಸರ (Cyber Crime Police) ಸಹಾಯದಿಂದ ವಿನಯ್ ನಿವಾಸ ಪತ್ತೆ ಮಾಡಿದ್ದಾರೆ. ಪೊಲೀಸ್ ದಾಳಿಯವರೆಗೂ ವಿನಯ್ ಅದೇ ನಂಬರ್ ಬಳಕೆ ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫೋನ್ ಟ್ರ್ಯಾಕ್ ಮಾಡಿ ವಿನಯ್ ಹಿಡಿದ ಪೊಲೀಸರಿಗೆ ಎಲ್ಲ ವಿಷ್ಯ ಗೊತ್ತಾಗಿದೆ. ವಿನಯ್ ಫೋನ್ ನಲ್ಲಿದ್ದ ವಿಡಿಯೋ ಡಿಲಿಟ್ ಮಾಡಿ, ಆರೋಪಿಯನ್ನು ಒಳಗೆ ತಳ್ಳಿದ್ದಾರೆ.

spot_img
spot_img
- Advertisment -spot_img