Tuesday, September 17, 2024
spot_img
spot_img
spot_img
spot_img
spot_img
spot_img
spot_img

ಚಹಾ ಪ್ರಿಯರಿಗೆ ಬಿಗ್ ಶಾಕ್ : ಶೀಘ್ರವೇ ಬ್ಯಾನ್ ಆಗಲಿದೆ tea ಪುಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕಬಾಬ್‌, ಬಣ್ಣದ ಕಾಟನ್‌ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಇವುಗಳ ಸಾಲಿಗೆ ಸದ್ಯ ಟೀ ಪುಡಿ ಕೂಡ ಸೇರ್ಪಡೆ ಆಗುವ ಸಾಧ್ಯತೆಯಿದೆ.

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕೃತಕ ಬಣ್ಣ, ರಾಸಾಯನಿಕ ಇರುವ ಟೀ ಪುಡಿ ಬ್ಯಾನ್‌ಗೆ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಇದನ್ನು ಓದಿ : PM ಆವಾಸ್ ಯೋಜನೆಯ ಹಣ ಬರ್ತಿದ್ದಂತೆ ಪ್ರಿಯಕರರೊಂದಿಗೆ ಓಡಿಹೋದ 11 ಮಹಿಳೆಯರು.?

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಶೀಘ್ರವೇ ಬ್ಯಾನ್ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಸಾಧ್ಯತೆ ಇದೆ.

ಇತ್ತೀಚೆಗೆ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಸೇರಿದಂತೆ ನಾನ್ ವೆಜ್ ಪ್ರಿಯರ ಕಬಾಬ್ ಮತ್ತು ಹೆಣ್ಣುಮಕ್ಕಳ ಫೆವರೇಟ್ ಪಾನಿಪುರಿ ಬ್ಯಾನ್​ ವಿಚಾರ ಸದ್ದು ಮಾಡಿತ್ತು, ಇದೀಗ ಟೀಗೆ ಕುತ್ತು ಬಂದಿದೆ.

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಟೀ ಪುಡಿ ಮಾದರಿ ಸಂಗ್ರಹಿಸಲಾಗಿತ್ತು. ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ 49 ಟೀ ಪುಡಿ ಸ್ಯಾಂಪಲ್ಸ್‌ ಪೈಕಿ 45 ಟೀ ಪುಡಿ ಸ್ಯಾಂಪಲ್ಸ್ ಅಸುರಕ್ಷಿತವೆಂಬುದು ಬಯಲಾಗಿದೆ.

ಪರಿಶೀಲನೆ ವೇಳೆ ಟೀ ಪೌಡರ್​ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖವಾಗಿ ಚಹಾದ ಪೌಡರ್ ಕಲರ್ ಹೆಚ್ಚಿಸಲು ಟೀ ಬಣ್ಣ ಬರಲು ಕೆಮಿಕಲ್ ಬಣ್ಣಗಳ ಬಳಕೆ ಮಾಡಲಾಗುತ್ತಿದೆ ಎಂಬ ಭಯಾನಕ ಅಂಶ ಪತ್ತೆ ಆಗಿದೆ. ಅಲ್ಲದೇ ಕೆಲವು ಚಹಾದ ಅಂಗಡಿಗಳಲ್ಲಿ ತೂಕ ಹೆಚ್ಚಿಸಲು ಟೀ ಪುಡಿಯಲ್ಲಿ ಕೆಲವು ಮರದ ಪುಡಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನು ಓದಿ : ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಚಾರವನ್ನ ಮನಸ್ಸಿಗೆ ತೆಗೆದುಕೊಳ್ಳುತ್ತಾರಾ? ಅವರನ್ನು ಹೀಗೆ ನಿಭಾಯಿಸಿ.!

ಇದು ಕೂಡ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಟೀ ಪುಡಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಒಂದೊಂದೇ ಅಪಾಯಕಾರಿ ತಿನಿಸು, ಆಹಾರ ಪದಾರ್ಥಗಳು ಬ್ಯಾನ್ ಆಗಿದ್ದವು. ಇವುಗಳ ಸಾಲಿಗೆ ಪಾನಿಪುರಿ ಕೂಡ ಸೇರ್ಪಡೆ ಆಗೋ ಸಾಧ್ಯತೆ ಇದೆ. ರಾಜ್ಯದಲ್ಲಿ ಪಾನಿಪುರಿ ಕುರಿತು ಅಧ್ಯಯನ ನಡೆಸಲಾಗಿದ್ದು, ಪಾನಿಪುರಿ ಆರೋಗ್ಯಕ್ಕೆ ಕಂಟಕ ಅನ್ನೋ ರಿಪೋರ್ಟ್‌ ಬಂದಿತ್ತು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img