Saturday, July 13, 2024
spot_img
spot_img
spot_img
spot_img
spot_img
spot_img

PM ಆವಾಸ್ ಯೋಜನೆಯ ಹಣ ಬರ್ತಿದ್ದಂತೆ ಪ್ರಿಯಕರರೊಂದಿಗೆ ಓಡಿಹೋದ 11 ಮಹಿಳೆಯರು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇರೆ ಬೇರೆ ಗ್ರಾಮಗಳ 11 ಮಹಿಳೆಯರು ಪರಾರಿಯಾದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ನಿಚ್ಲಾಲ್ ಬ್ಲಾಕ್ ಪ್ರದೇಶದ ನಡೆದಿದೆ ಎಂದು ವರದಿಯಾಗಿದೆ.

ಇನ್ನೂ ಈ 11 ಮಹಿಳೆಯರು ಪತಿಯನ್ನು ಬಿಟ್ಟು, ಪ್ರೇಮಿಗಳ ಜೊತೆ ಎಸ್ಕೇಪ್ ಆಗಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : Lokayukta raid : ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ.!

ಇಷ್ಟೊಂದು ಮಹಿಳೆಯರು ಏಕಕಾಲಕ್ಕೆ ನಾಪತ್ತೆಯಾಗಿರೋದರಿಂದ ಗ್ರಾಮಗಳಲ್ಲಿ ಸಂಚಲನ ಸೃಷ್ಟಿಸಿದೆ. ಆದ್ರೆ ಎಲ್ಲಾ 11 ಪ್ರಕರಣಗಳಲ್ಲಿ ಸಾಮ್ಯತೆ ಇದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಪಿಎಂ ಆವಾಸ್ ಯೋಜನೆಯ (PM Awas Scheme) ಮೊದಲ ಕಂತು 40 ಸಾವಿರ ರೂಪಾಯಿ ಜಮೆ ಆಗುತ್ತಿದ್ದಂತೆ ಮಹಿಳೆಯರು ಮನೆಯಿಂದ ಹೊರಗೆ ಹೋಗಿದ್ದಾರಂತೆ.

ಈ ಹಣ ಮನೆಯ ಮಹಿಳಾ ಸದಸ್ಯರ ಖಾತೆಗೆ ಮಾತ್ರ ಜಮೆ ಮಾಡಲಾಗುತ್ತದೆ. ಇದೀಗ ಹಣ ಬರುತ್ತಿದ್ದಂತೆ ಮಹಿಳೆಯರು ತಮ್ಮ ಪ್ರೇಮಿಗಳ ಜೊತೆ ಪಲಾಯನ ಮಾಡುತ್ತಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯರ ಗಂಡಂದಿರು ಪತ್ನಿ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಂತರ ಸಂಬಂಧಿತ ಇಲಾಖೆಗೆ ತೆರಳಿ ಪಿಎಂ ಆವಾಸ್ ಯೋಜನೆಯ ಎರಡನೇ ಕಂತನ್ನು ಪತ್ನಿಯರ ಖಾತೆಗೆ ಜಮೆ ಮಾಡದಂತೆ ಮನವಿಯನ್ನು ಸಹ ಸಲ್ಲಿಸುತ್ತಿದ್ದಾರೆ.

ಇದನ್ನು ಓದಿ : ಮದುವೆಗೆ ನಿರಾಕರಿಸಿದ ಪ್ರಿಯಕರ ; ಸರಸಕ್ಕೆ ಕರೆದು ಖಾಸಗಿ ಅಂಗ ಕತ್ತರಿಸಿ ಕಮೋಡ್‌ಗೆ ಹಾಕಿದ ಪ್ರೆಯತಮೆ.!

ನಿಚ್ಲಾಲ್ ಬ್ಲಾಕ್‌ನ ವಿಭಾಗದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮೆ ಮಾಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಮನೆ ನಿರ್ಮಾಣಕ್ಕಾಗಿಯೇ ಬಳಸಬೇಕು. ಒಂದು ವೇಳೆ ಅನ್ಯ ಕೆಲಸಕ್ಕೆ ಹಣ ಬಳಕೆಯಾಗಿರೋದು ಕಂಡು ಬಂದ್ರೆ ಅಧಿಕಾರಿಗಳು ಪಡೆದುಕೊಂಡು ಮೊತ್ತವನ್ನು ವಸೂಲಿ ಮಾಡುತ್ತಾರೆ.

ಪತ್ನಿಯರು ಹಣದ ಜೊತೆ ಪರಾರಿಯಾಗಿರುವ ಕಾರಣ ಕೆಲವರ ಮನೆ ನಿರ್ಮಾಣ ಸ್ಥಗಿತಗೊಂಡಿದೆ. ಇದೀಗ ಅಂತಹವರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
- Advertisment -spot_img