Saturday, July 13, 2024
spot_img
spot_img
spot_img
spot_img
spot_img
spot_img

ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಚಾರವನ್ನ ಮನಸ್ಸಿಗೆ ತೆಗೆದುಕೊಳ್ಳುತ್ತಾರಾ? ಅವರನ್ನು ಹೀಗೆ ನಿಭಾಯಿಸಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮನುಷ್ಯ ಭಾವನಾತ್ಮಕ್ಕ ಜೀವಿ, ಹೀಗಾಗಿ ಸಣ್ಣ ಪುಟ್ಟ ವಿಷಯಗಳು ಎದುರಾದಾಗ ಅವು ಮನಸ್ಸಿಗೆ ನೋವುಂಟು ಮಾಡುತ್ತವೆ. ಆದರೆ ಪ್ರತಿಯೊಂದು ವಿಷಯಕ್ಕೆ ಅಂದರೆ ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ ಅಷ್ಟೆ ಕೊಡಬೇಕೆ  ಹೊರತು ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ತಲೆ ಕೆಡಿಸಿಕೊಳ್ಳಕ್ಕಾಗದು.

ಹೀಗೆ ಪ್ರತಿಯೊಂದಕ್ಕೂ ಭಾವನ್ಮಾತಕವಾಗಿ ಬೆಸೆದುಕೊಳ್ಳುತ್ತಿರುವ ಸಂಗಾತಿಯಾಗಿ ಬಿಟ್ಟರೆ ಅವರನ್ನು ನಿಭಾಯಿಸಿಕೊಂಡು ಹೋಗುವುದು ತುಮಬಾ ಕಷ್ಟದ ಕೆಲಸ. ಹೀಗಾಗಿ ಹೆಚ್ಚಿನವರು ಭಾವನಾತ್ಮಕ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಲು ಹೆಣಗಾಡುವುದಿದೆ.

ಇದನ್ನೂ ಓದಿ : 10 ಮತ್ತು 12 ನೇ ತರಗತಿ ಪಾಸ ಆದವರಿಗೆ ಯೂನಿಯನ್ ಬ್ಯಾಂಕ್‌ ನಲ್ಲಿ ಉದ್ಯೋಗವಕಾಶ.!

ಸಣ್ಣ ಪುಟ್ಟ ವಿಚಾರವನ್ನು ಮನಸ್ಸಿಗೆ ತೆಗೆದುಕೊಳ್ಳುವ ಸಂಗಾತಿಯನ್ನು ಹೀಗೆ ಮಾಡುವ ಮೂಲಕ ಅವರನ್ನು ನಿಭಾಯಿಸಬಹುದು.

 * ಅರ್ಥ ಮಾಡಿಕೊಳ್ಳುವಿಕೆ ಬಹಳ ಮುಖ್ಯ :                                                                           * ಕೋಪದ ವರ್ತನೆ ಬೇಡ :                                                                                               * ಆ ವ್ಯಕ್ತಿಯಿಂದ ದೃಷ್ಟಿಕೋನದಲ್ಲನ್ನೊಮ್ಮೆ ಯೋಚಿಸಿ :                                                           * ಪ್ರೀತಿ ಸದಾ ಇರಲಿ :

* ಅರ್ಥ ಮಾಡಿಕೊಳ್ಳುವಿಕೆ ಬಹಳ ಮುಖ್ಯ : ಸಂಗಾತಿಯಿಬ್ಬರಲ್ಲಿ ಒಬ್ಬರು ಭಾವನಾತ್ಮಕ ವ್ಯಕ್ತಿಯಾಗಿದ್ದರೆ ಅವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಂತಹ ವ್ಯಕ್ತಿಗಳು ಸಣ್ಣ ಪುಟ್ಟ ವಿಷಯಗಳಿಗೆ ಅಸಮಾಧಾನಗೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದರೆ ಕೆಲವೊಮ್ಮೆ ಭಾವನಾತ್ಮಕ ವ್ಯಕ್ತಿಯನ್ನು ನಿರ್ಲಕ್ಷಿಸುವುದೇ ಹೆಚ್ಚು..ಇದರಿಂದ ಜಗಳಗಳು ಉಂಟಾಗುವುದೇ ಹೆಚ್ಚು. ಹೀಗಾಗಿ ಅವರ ಭಾವನೆಗಳನ್ನು ಗೌರವಿಸುವುದನ್ನು ಕಲಿತರೆ ಸಂಬಂಧವು ಉತ್ತಮವಾಗಿರಲು ಸಾಧ್ಯ.

* ಕೋಪದ ವರ್ತನೆ ಬೇಡ : ನಿಮ್ಮ ಜೊತೆಗಿರುವ ವ್ಯಕ್ತಿಯು ಭಾವನಾತ್ಮಕವಾಗಿದ್ದರೆ ಅವರ ನಿರೀಕ್ಷೆಗಳು ಹೆಚ್ಚೇ ಇರುತ್ತದೆ. ಈ ವೇಳೆ ನೀವು ಆ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಇಬ್ಬರಲ್ಲಿ ಜಗಳಗಳಾಗುತ್ತವೆ ಈ ವೇಳೆಯಲ್ಲಿ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಶಾಂತತೆಯಿಂದ ಪ್ರತಿಕ್ರಿಯಿಸಿ. ಕೋಪದಿಂದ ಅವರ ಮೇಲೆ ರೆಗಾಡುವುದಾಗಲಿ, ಕೂಗಾಡುವುದಾಗಲಿ ಮಾಡಬೇಡಿ. ಇದರಿಂದ ಎದುರಿಗಿರುವ ವ್ಯಕ್ತಿಯ ಮನಸ್ಸಿಗೆ ನೋವಾಗುತ್ತದೆ.

ಇದನ್ನೂ ಓದಿ : ಕರ್ನಾಟಕ ವಸತಿ ನಿಲಯಗಳಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

* ಆ ವ್ಯಕ್ತಿಯಿಂದ ದೃಷ್ಟಿಕೋನದಲ್ಲನ್ನೊಮ್ಮೆ ಯೋಚಿಸಿ : ನಿಮ್ಮ ಜೊತೆಗಾರರು ಸೂಕ್ಷ್ಮ ವ್ಯಕ್ತಿಯಾಗಿದ್ದಾಗ ಅವರು ಸಣ್ಣ ಪುಟ್ಟ ವಿಷಯಕ್ಕೂ ಕೋಪಗೊಳ್ಳುವುದು ಸಹಜ. ಅದಲ್ಲದೆ ಆ ಸಂದರ್ಭ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಎಷ್ಟೋ ಬಾರಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ವಿಷಯಗಳು ಆ ಸಮಯದಲ್ಲಿ ಹೊರಬರುತ್ತವೆ. ಹೀಗಾದಾಗ ಅವರ ಮಾತುಗಳನ್ನು ಸ್ಪಷ್ಟವಾಗಿ ಕೇಳಿ. ಅವರ ಸ್ಥಾನದಲ್ಲಿ ನಿಂತು ಯೋಚಿಸುವುದು ಉತ್ತಮ.

* ಪ್ರೀತಿ ಸದಾ ಇರಲಿ : ನಿಮ್ಮ ಜೀವನ ಸಂಗಾತಿಯು ಭಾವನಾತ್ಮಕ ಜೀವಿಯಾಗಿದ್ದರೆ ಅವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಪ್ರೀತಿ ನೀಡಿ. ಇದರಿಂದ ಅವರಿಗೆ ಸುರಕ್ಷಿತ ಎನ್ನುವ ಭಾವವೊಂದು ಮೂಡುತ್ತದೆ. ಅಷ್ಟೇ ಅಲ್ಲದೇ, ಅಪರೂಪಕ್ಕೊಮ್ಮೆಯಾದರೂ ಉಡುಗೊರೆ ನೀಡಿ ಸಂತೋಷಪಡಿಸಿ. ಈ ನಡವಳಿಕೆಯಿಂದಾಗಿ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ತಿಳಿಸಿದಂತಾಗುತ್ತದೆ. (ಎಜೇನ್ಸಿಸ್)

spot_img
spot_img
- Advertisment -spot_img