ಜನಸ್ಪಂದನ ನ್ಯೂಸ್, ರಾಯಭಾಗ : ಕಾಣೆಯಾದ ಐದು ವರ್ಷದ ಬಾಲಕಿ, ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಬಿದ್ದಿರುವ ಮಾಹಿತಿ ಹಿನ್ನೆಲೆ ಇಡೀ ಗ್ರಾಮಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಮೃತ ಬಾಲಕಿಯ ದೇಹಕ್ಕಾಗಿ ಹುಡುಕಾಟ ನಡೆಸಿರುವ ಘಟನೆ ರಾಯಬಾಗ ತಾಲೂಕಿನ ನಿಪ್ಪನಾಳ ಗ್ರಾಮದಲ್ಲಿ ಜರುಗಿದ್ದು, ಸದ್ಯ ಈ ಪ್ರಕರಣದ ಸುತ್ತ ಅನುಮಾನದ ಹುತ್ತ ಆವರಿಸಿಕೊಂಡಿದೆ.
ಘಟನೆ ವಿವರ : ಸೋಮವಾರದಂದು ನಿಪ್ಪನಾಳ ಗ್ರಾಮದಲ್ಲಿ ಮಾರುತಿ ದೇವರು ಜಾತ್ರೆ ಹಿನ್ನೆಲೆ ಇಡೀ ಗ್ರಾಮಸ್ಥರು ಖುಷಿಯಿಂದ ಜಾತ್ರೆ ಮಾಡುವ ಸಂದರ್ಭದಲ್ಲಿ ರಾತ್ರಿ 8 ಗಂಟೆ 5 ವರ್ಷದ ನಿಷ್ಕರ್ಷಿಣಿ ಮಡಿವಾಳ ಎಂಬ ಬಾಲಕಿ ಕಾಣೆಯಾಗಿದ್ದಾಳೆ.
ಕಾಣೆಯಾಗಿರುವ ಸುದ್ದಿ ತಿಳಿಯುತ್ತಿದಂತೆ ಇಡೀ ಗ್ರಾಮಸ್ಥರು ಇಡೀ ರಾತ್ರಿ ಹುಡುಕಾಟ ನಡೆಸಿದರು ಬಾಲಕಿ ಪತ್ತೆಯಾಗದ ಹಿನ್ನೆಲೆ ಬಾಲಕಿಯ ತಂದೆ ಮಂಗಳವಾರದಂದು ರಾಯಬಾಗ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದಾರೆ.
ಇದನ್ನು ಓದಿ : ಪಾಕ್ ಪರ ಬೇಹುಗಾರಿಕೆ : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್.!
ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡು ವಿಚಾರಣೆ ಮಾಡುವ ವೇಳೆ ಬಾಲಕಿಯ ಜೊತೆಗೆ ಬಾಲಕಿಯ ತಂದೆಯ ಅಣ್ಣನ ಮಗ ಇರುವ ಬಗ್ಗೆ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೇರಿಯಾಗಿರುವ ಹಿನ್ನೆಲೆ ಆ ಯುವಕನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ ನಾನು ಬಹಿರ್ದೆಸೆಗೆ ಕಾಲುವೆ ಮೇಲೆ ಹೋಗಿದೆ ಅಲ್ಲಿವರೆಗೂ ನನ್ನ ಹಿಂದೆ ಬಾಲಕಿ ಬಂದಿದ್ದಳು, ನಾನು ಬಹಿರ್ದೆಸೆಗೆ ಕುಳಿತಾಗ ಅವಳೇ ಕಾಲುವೆ ಬಿದ್ದಿದ್ದಾಳೆ ಎಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ಇದನ್ನು ಓದಿ : ED : ಗೃಹಸಚಿವ ಜಿ. ಪರಮೇಶ್ವರ್ ಒಡೆತನದ ಕಾಲೇಜಿನ ಮೇಲೆ ED ದಾಳಿ.!
ಇನ್ನು ಕಾಲುವೆಗೆ ಅತೀ ಹೆಚ್ಚಾಗಿ ನೀರು ಹರಿದು ಬರುತ್ತಿರುವ ಹಿನ್ನೆಲೆ ನೀರನ್ನು ತಡೆಯುವಂತೆ ಈಗಾಗಲೇ ಘಟಪ್ರಭಾ ಎಡದಂಡೆ ಕಾಲುವೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ರವಾನಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದರೆ ಸಾಕು ; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!
ಆದರೆ ಕುಟುಂಬಸ್ಥರಲ್ಲಿ ಅನುಮಾನ ಹುಟ್ಟಿಕೊಂಡಿದೆ ಮನೆಯಲ್ಲೇ ಶೌಚಾಲಯ ಇರುವಾಗ ರಾತ್ರಿ ವೇಳೆ ದೂರವಿರುವ ಎತ್ತರದ ಕಾಲುವೆ ಮೇಲೆ ಯಾಕೆ ಹೋಗಿದ್ದಾನೆ? ಅದು ನಿರ್ಜನ ಪ್ರದೇಶ?, ಎತ್ತರವರ ಕಾಲುವೆ ಮೇಲೆ ಏರಲು ಬಾಲಕಿಗೆ ಆಗಲ್ಲ?, ಅದು ಅಲ್ಲದೇ ಮನೆಯು ಕೂಡಾ ಸಮೀಪವಿತ್ತು.
ಹಾಗಾಗಿಯೂ ಕಾಲುವೆ ಬಳಿ ಬಹಿರ್ದೆಸೆಗೆ ಹೋದರು ಸಹ ಕೆಳಗೆ ಸಾಕಷ್ಟು ಜಾಗವಿದೆ ಹಾಗೂ ನೀರಿನ ಸೌಕರ್ಯವಿದೆ? ಹಾಗೂ ಬಾಲಕಿ ಕಾಲುವೆ ಬಿದ್ದ ಮೇಲಾದರೂ ಮನೆಗೆ ಬಂದು ಹೇಳದೆ ಟಿವಿ ನೋಡ್ತಾ ಕುಳಿತಿದ್ದ ಇಡೀ ಗ್ರಾಮಸ್ಥರು ಎಲ್ಲರೂ ಹುಡುಕಾಡುತ್ತಿರುವಾಗಾದರೂ ಹೇಳಬೇಕಲ್ಲವೇ ತನಗೆ ಸಂಬಂಧವಿಲ್ಲಂತೆ ಇದ್ದ ಯುವಕ ಹಾಗಾಗಿ ಆ ಯುವಕನೇ ಬಾಲಕಿಯನ್ನು ಕರೆದುಕೊಂಡು ಹೋಗಿ ಕಾಲುವೆಗೆ ಹಾಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಪಾಲಕರು.
ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದರೆ ಸಾಕು ; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!
ಈ ಎಲ್ಲಾ ಅನುಮಾನಗಳಿಗೆ ಪೊಲೀಸ್ ಅಧಿಕಾರಿಗಳ ಸೂಕ್ತ ತನಿಖೆಯ ಬಳಿಕವೇ ತೆರೆಬೀಳಲಿದೆ.
✍️ : ಮಲ್ಲು ಬೋಳನವರ, ಮೂಡಲಗಿ.
ಸಾರ್ವಜನಿಕರಿಗೆ ವಿಶೇಷ ಸೂಚನೆ : ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾದರೆ ಕೂಡಲೇ ರಾಯಬಾಗ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ದೂರವಾಣಿ ಸಂಖ್ಯೆ : 94808 04060