Tuesday, September 17, 2024
spot_img
spot_img
spot_img
spot_img
spot_img
spot_img
spot_img

Belagavi : 4 ಸಂಪರ್ಕ ಸೇತುವೆಗಳು ಮುಳುಗಡೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಅಂತೆಯೇ ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹಲವು ನದಿಗಳು ಉಕ್ಕಿ ಹರಿಯುತ್ತಿವೆ.

ನಿರಂತರ ಮಳೆಯಿಂದಾಗಿ ವೇದಗಂಗಾ, ಕೃಷ್ಣ, ದೂದಗಂಗಾ ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನೂ ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯ ನಾಲ್ಕು ಸಂಪರ್ಕ ಸೇತುವೆಗಳು ಮುಳುಗಡೆಗೊಂಡಿವೆ.

ಇದನ್ನು ಓದಿ : ನಿಮಗಿದು ಗೊತ್ತೇ : ಮುರಿದ ಮೂಳೆಯನ್ನೇ ಜೋಡಿಸುತ್ತೇ ಈ ಸಸ್ಯ ; ಬನ್ನಿ ಇದರ ಉಪಯೋಗ ತಿಳಿಯೋಣ.!

ದೂದ್ ಗಂಗಾ ನದಿಯಿಂದ ಕಾರದಗಾ ಬೋಜ, ಕುನ್ನೂರು – ಭೋಜವಾಡಿ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.

ಅಲ್ಲದೇ ನಿಪ್ಪಾಣಿ ತಾಲೂಕಿನ ಕುನ್ನೂರು-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದ್ದು, ಅದೇ ರೀತಿ ವೇದಗಂಗಾ ನದಿಗೆ ಅಡ್ಡಲಾಗಿರುವ ಕೆಳಹಂತದ ಸೇತುವೆ ಮುಳುಗಡೆಯಾಗಿದೆ.

ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿರುವುದರಿಂದ ನದಿಗಳ ಮಟ್ಟದಲ್ಲಿ ಎರಡು ಅಡಿ ನೀರು ಏರಿಕೆಯಾಗಿದೆ. ಕೃಷ್ಣಾ ನದಿಗೆ ಸುಮಾರು 55,000 ಕ್ಯೂಸೆಕ್ ಗಿಂತ ಹೆಚ್ಚು ನೀರಿನ ಒಳಹರಿವು ಹೆಚ್ಚಾಗಿದೆ.

ಇದನ್ನು ಓದಿ : ಮಳೆಯನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಜೋಡಿ ; ರೊಮ್ಯಾನ್ಸ್ ವಿಡಿಯೋ viral.!

ಈ ಹಿನ್ನೆಲೆ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.

ಇನ್ನು ಸೇತುವೆಗಳ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img