Friday, September 13, 2024
spot_img
spot_img
spot_img
spot_img
spot_img
spot_img
spot_img

ಕಾರ್ಮಿಕನಿಗೆ ಕಚ್ಚಿದ ಹಾವು : ಮರಳಿ ಹಾವಿಗೆ ಕಚ್ಚಿದ ಕಾರ್ಮಿಕ ; ಕಚ್ಚಾಟದಲ್ಲಿ ಗೆದ್ದರ್ಯಾರು, ಸೋತವರ್ಯಾರು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಾವೂ ಮನುಷ್ಯನಿಗೆ ಕಚ್ಚುವುದು ಸಹಜವೇ, ಅದರೆ ಇಲ್ಲೋಬ್ಬ ಭೂಪ ತನಗೆ ಕಚ್ಚಿದ ಹಾವಿಗೆ ತಾನೇ ಕಚ್ಚಿರುವ ಅಪರೂಪದ ಗಟನೆಯೊಂದು ಬಿಹಾರದಲ್ಲಿ ನವಾಡದ ರಾಜೌಲಿ ಪ್ರದೇಶದಲ್ಲಿ ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಹೌದು, ಹಾವೊಂದು ಕಾರ್ಮಿಕನಿಗೆ 2 ಬಾರಿ ಕಚ್ಚಿದೆ. ಇದರಿಂದ ಕೋಪಗೊಂಡ ಕಾರ್ಮಿಕ ಆ ಹಾವಿಗೆ ತಿರುಗಿ 3 ಬಾರಿ ಕಚ್ಚಿದ್ದಾನೆ.

ಇದನ್ನು ಓದಿ : ನಿಮಗಿದು ಗೊತ್ತೇ : ಮುರಿದ ಮೂಳೆಯನ್ನೇ ಜೋಡಿಸುತ್ತೇ ಈ ಸಸ್ಯ ; ಬನ್ನಿ ಇದರ ಉಪಯೋಗ ತಿಳಿಯೋಣ.!

ಈ ಕಚ್ಚಾಟದಲ್ಲಿ ಯಾರು ಗೆದ್ದರು ಎಂದು ನೀವೆನಾದರೂ ಊಹಿಸಲೂ ಸಾಧ್ಯವೇ..?

ನಿಮ್ಮ ಊಹೆ ತಪ್ಪಾಗಬಹುದು, ಏಕೆಂದರೆ, ಇಲ್ಲಿ ಮನುಷ್ಯ ಸಾಯದೇ ಆ ಕಾರ್ಮಿಕ ಕಚ್ಚಿದ್ದ ಪರಿಣಾಮ ಹಾವೇ ಸಾವನ್ನಪ್ಪಿದೆ.

ಇಲ್ಲಿ ಹಾವನ್ನು ಸೋಲಿಸಿ ಅದರ ಕಡಿತದಿಂದ ಪರಾದ ಕಾರ್ಮಿಕನನ್ನು ಸಂತೋಷ ಎಂದು ಹೇಳಲಾಗುತ್ತಿದೆ.

ಈ ಘಟನೆ ಕುರಿತು ಕೇಳಿದಾಗ ಸಂತೋಷ ಹೀಗೆ ವಿವರಿಸಿದ್ದಾರೆ, “ನನ್ನ ಹಳ್ಳಿಯಲ್ಲಿ ಒಂದು ವೇಳೆ ನಿಮಗೆ ಹಾವು ಕಚ್ಚಿದರೆ, ಆ ವಿಷವನ್ನು ತೆಗೆದುಹಾಕಲು ನೀವು ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ. ಹೀಗಾಗಿ ನಾನು ಆ ಹಾವಿಗೆ ಕಚ್ಚಿದೆ” ಎಂದು ಹೇಳಿದ್ದಾರೆ.

ಇದನ್ನು ಓದಿ : ಮಳೆಯನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಜೋಡಿ ; ರೊಮ್ಯಾನ್ಸ್ ವಿಡಿಯೋ viral.!

ಈ ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಾರ್ಖಂಡ್ ಮೂಲದ ಸಂತೋಷ್ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಈ ಅಸಾಮಾನ್ಯ ಘಟನೆಯ ಸುದ್ದಿ ಎಲ್ಲೆಡೆ ಬೇಗ ಹರಡಿತು. ಸಂತೋಷ್‌ನ ಕಥೆಯನ್ನು ಕೇಳಲು ಜನಸಮೂಹ ಆಸ್ಪತ್ರೆಯಲ್ಲಿ ಜಮಾಯಿಸಿತು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img