Friday, October 4, 2024
spot_img
spot_img
spot_img
spot_img
spot_img
spot_img
spot_img

ನಿಮಗಿದು ಗೊತ್ತೇ : ಮುರಿದ ಮೂಳೆಯನ್ನೇ ಜೋಡಿಸುತ್ತೇ ಈ ಸಸ್ಯ ; ಬನ್ನಿ ಇದರ ಉಪಯೋಗ ತಿಳಿಯೋಣ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ವಿಷೇಶ : ನಮ್ಮ ಸುತ್ತಮುತ್ತಲಿನಲ್ಲಿ ಸಿಗುವ ಹಲವು ಸಸಿಗಳು, ಗಿಡಗಳು ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳ ತರಲಿವೆ. ಅದ್ರೆ ಅದರ ಕುರಿತು ನಮಗೆ ಸರಿಯಾದ ಮಾಹಿತಿ ಇಲ್ಲದಿರುವುದು ವಿಪರ್ಯಾಸವೇ ಸರಿ.

ನಮ್ಮ ಆಯುರ್ವೇದದಲ್ಲಿ ಅನೇಕ ಸಸ್ಯಗಳ ಬಗ್ಗೆ ಉಲ್ಲೇಖವಾಗಿದ್ದು, ಅವು ಪರಿಣಾಮಕಾರಿ ಔಷಧವನ್ನು ಒದಗಿಸುತ್ತವೆ. ಅಂತಹ ಗಿಡಗಳಲ್ಲಿ ಈ ಮಂಗರವಳ್ಳಿ, ಮಂಗರ ಬಳ್ಳಿ ಅಥವಾ ಸಂದು ಬಳ್ಳಿ ಎಂದು ಕರೆಯಲ್ಪಡುವ ಒಂದು ಔಷಧೀಯ ಸಸ್ಯ ಆಗಿದೆ.

ಇದನ್ನು ಓದಿ : ಬ್ಯಾಂಕ್‌ ಆಫ್‌ ಬರೋಡಾದ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ; details ಇಲ್ಲಿದೆ.!

ಈ ಗಿಡದ ಉಪಯೋಗ ತಿಳಿಯುವ ಮೊದಲು ಈ ಗಿಡ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಗಿಡ ಗಟ್ಟಿ ಸ್ಥಳಗಳು ಅಂದರೆ ನೀರಿಲ್ಲದೆ ಒಣಗುವ ಕಲ್ಲುಗಳಿಂದ ಕೂಡಿದ ಸ್ಥಳದಲ್ಲಿ ನೋಡಬಹುದು. ಇವು ಬೆಳೆಯಲು ನೀರಿನ ಅವಶ್ಯಕತೆ ಇರುವುದಿಲ್ಲ ಜೊತೆಗೆ ಇವು ಮುಳ್ಳುಗಳನ್ನು ಹೊಂದಿರುತ್ತವೆ.

ಇದು ನೋಡಲು ನಮ್ಮ ಬೆನ್ನು ಕೂಲಿನಂತೆ ಆಕಾರ ಹೊಂದಿರುತ್ತದೆ. ಕೋಲು ಕೋಲಿನ ರಚನೆ ಹಾಗೂ ಮಧ್ಯದಲ್ಲಿ ಎಲೆಗಳು ಮತ್ತು ಸಣ್ಣ ಸಣ್ಣ ಕಾಯಿಗಳ ಇದು ಬಿಡುತ್ತದೆ.

ಈಗ ಈ ಮಂಗರವಳ್ಳಿ ಗಿಡದ ಉಪಯೋಗವೇನು? ಯಾವ ಕಾಯಿಲೆಗೆ ಇದು ಬಳಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.!

ಇದನ್ನು ಓದಿ : ‌ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ಮಹಿಳೆ ; ಭಯಾನಕ video ವೈರಲ್.!

ಮುರಿದ ಮೂಳೆ :

ನಿಮ್ಮ ದೇಹದ ಯಾವುದೇ ಮೂಳೆಗೆ ಹಾನಿಯಾಗಿದ್ದರೆ ಅಥವಾ ಮುರಿತಕ್ಕೊಳಗಾಗಿದ್ದರೆ ಈ ಗಿಡ ನಿಮ್ಮ ಮೂಳೆ ಮುರಿತವನ್ನು ಸರಿ ಮಾಡುತ್ತೆ. ಹೀಗಾಗಿಯೇ ಇದಕ್ಕೆ ಸಂದು ಬಳ್ಳಿ ಎನ್ನಲಾಗಿದೆ. ಈ ಗಿಡದ ಸೊಪ್ಪನ್ನು ಅರಿದು ಅದನ್ನು ಮುರಿದ ಮೂಳೆಯ ಮೇಲೆ ಇಟ್ಟು ಪಟ್ಟಿ ಕಟ್ಟುತ್ತಾರೆ, ಜೊತೆಗೆ ಈ ಗಿಡ ಸೊಪ್ಪಿನ ಕಷಾಯ ಮಾಡಿಸಿ ಕುಡಿಸುತ್ತಾರೆ, ಹೀಗೆ ಮಾಡೋದ್ರಿಂದ ಕೆಲವೇ ದಿನಗಳಲ್ಲಿ ಮುರಿದ ಮೂಳೆ ಸರಿಯಾಗುತ್ತದೆ. ಈ ರೀತಿ ಇಂದಿಗೂ ನಾಟಿ ವೈದ್ಯರು ಇದೇ ವಿಧಾನ ಅನುಸರಿಸಿಕೊಂಡು ಬಂದಿದ್ದಾರೆ.

ಕೊಲೆಸ್ಟ್ರಾಲ್ ನಿಯಂತ್ರಣ :

ಈ ಗಿಡದ ಎಲೆಯಿಂದ ತಯಾರಿಸಿದ ಚೂರ್ಣ ಅಥವಾ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಲಿದೆ. ಜೊತೆಗೆ ಇದರ ಸೇವನೆಯಿಂದ ಮೂಳೆಗಳು ಬಲವಾಗುತ್ತವೆ. ಜೀರ್ಣಕ್ರಿಯೆಗೂ ಇದು ಉತ್ತಮ. ಇದರಿಂದ ಆಸಿಡಿಟಿ ಕಡಿಮೆ ಮಾಡಲಿದೆ.

ಇದನ್ನು ಓದಿ : ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ ಹೆಬ್ಬಾವು.!

ಕೆಮ್ಮು ಮತ್ತು ಕ‍ಫ ನಿವಾರಣೆ :

ನಿಮಗೆ ಕೆಮ್ಮು ಮತ್ತು ಕಫ ಇದ್ದರೆ ಇದರ ಕಷಾಯ ರಾಮಬಾಣ. ಏಕೆಂದರೆ ಕೆಮ್ಮು ಕಫ ಹಲವು ಕಾರಣಕ್ಕೆ ಉಂಟಾಗಬಹುದು, ಅದರಲ್ಲೂ ಬೇಸಿಗೆಯಲ್ಲಿ ಆಗುವ ಕೆಮ್ಮು ಮತ್ತು ಕಫ ಅಪಾಯಕಾರಿಯಾಗುತ್ತದೆ. ಹೀಗೆ ಇದರ ಕಷಾಯ ಕೆಮ್ಮು ಮತ್ತು ಕಫ ನಿವಾರಣೆ ಮಾಡಲಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img