Saturday, July 13, 2024
spot_img
spot_img
spot_img
spot_img
spot_img
spot_img

ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗರಹಾವು ; ಬೆಚ್ಚಿಬಿದ್ದ ಯುವತಿ, ವಿಡಿಯೋ viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನೀವು ಶೂಗಳನ್ನು ಧರಿಸುವಾಗ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ ಇನ್ನೇನು ಶೂ ಹಾಕಲು ಹೊರಟಿದ್ದ ಯುವತಿಯೋರ್ವಳು ಹಾವಿನ ಕಡಿತದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾಳೆ.

ಯುವತಿ ಶೂ ಹಾಕುತ್ತಿದ್ದಂತೆ ಅದರೊಳಗೆ ಮಲಗಿದ್ದ ಮರಿ ನಾಗರಹಾವು ಬುಸುಗುಟ್ಟಿದ್ದು, ತಕ್ಷಣ ಆಕೆ ಗಾಬರಿಯಿಂದ ಕಿರುಚಿದ್ದಾಳೆ.

ಇದನ್ನು ಓದಿ : ಮದುವೆಗೆ ನಿರಾಕರಿಸಿದ ಪ್ರಿಯಕರ ; ಸರಸಕ್ಕೆ ಕರೆದು ಖಾಸಗಿ ಅಂಗ ಕತ್ತರಿಸಿ ಕಮೋಡ್‌ಗೆ ಹಾಕಿದ ಪ್ರೆಯತಮೆ.!

ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮಳೆಗೆ ಶೂ ಒಳಗಡೆ ಬೆಚ್ಚಗೆ ಮಲಗಿದ್ದ ಹಾವನ್ನು ಕಂಡು ಯುವತಿ ಬೆಚ್ಚಿ ಬಿದ್ದಿದ್ದಾಳೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶೂ ಒಳಗೆ ನಾಗರಹಾವು ಅಡಗಿ ಕುಳಿತಿರುವುದನ್ನು ನೋಡಬಹುದು. ಶೂನಲ್ಲಿ ಹಾವು ಕಂಡ ತಕ್ಷಣ ಯುವತಿ ಗಾಬರಿಯಿಂದ ಕಿರುಚಲು ಆರಂಭಿಸಿದ್ದಾಳೆ.

ಇದಾದ ನಂತರ ಕುಟುಂಬಸ್ಥರು ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದು, ಹಾವು ಹಿಡಿಯುವವರು ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : Renukaswamy murder case : ಪೊಲೀಸರ ಮುಂದೆ ನಟ ದರ್ಶನ್ ವಿರುದ್ಧವೇ ಹೇಳಿಕೆ ಕೊಟ್ರಾ ನಟಿ ಪವಿತ್ರಾಗೌಡ .?

@MindhackD ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ.

ಜುಲೈ 3ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಶೂ ಧರಿಸುವ ಮೊದಲು ಜಾಗರೂಕರಾಗರಿ ಎಂದು ಸಾಕಷ್ಟು ನೆಟ್ಟಿಗರು ಕಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

spot_img
spot_img
- Advertisment -spot_img