Friday, October 18, 2024
spot_img
spot_img
spot_img
spot_img
spot_img
spot_img
spot_img

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲ್ಲಿ ಮೇಲು ; ಹೇಗಂತಿರಾ.? ಈ ವಿಡಿಯೋ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮನುಷ್ಯರಿಗಿಂತ ಪ್ರಾಣಿಗಳೆ ಲೇಸು ಕಣ್ರೀ, ಹೇಗಂತ್ತಿರಾ.? ಬೀದಿ ನಾಯಿಯೊಂದು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯನ್ನು ರಕ್ಷಿಸಿದ ಘಟನೆಯೇ ಇದಕ್ಕೆ ನಿದರ್ಶನ.

ಹೌದು, ʼಹುಯಿಹುಯಿʼ ಎಂಬ ಬೀದಿನಾಯಿಯು ಸಿಕ್ಕಿಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ನಂತರ ಚೀನಾದ ಫುಝೌ ವಿಶ್ವವಿದ್ಯಾಲಯದಲ್ಲಿ ಕ್ಯಾಂಪಸ್ ಸೆಲೆಬ್ರಿಟಿಯಾಗಿದೆ.

ಈ ಘಟನೆ ಚೀನಾದಲ್ಲಿ ನಡೆದಿದ್ದು, ಇಲ್ಲಿನ ಫುಜಿಯಾನ್‌ ಪ್ರಾಂತ್ಯದ ಫುಝೌ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಬಳಿ ಹುಯಿಹುಯಿ ಹೆಸರಿನ ಬೀದಿನಾಯಿಯು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯನ್ನು ರಕ್ಷಿಸುವ ಮೂಲಕ ಮಾನವೀಯತೆಯನ್ನು ಮೆರೆದಿದೆ.

ಇದನ್ನು ಓದಿ : Love : ಇಂಥ ಹುಡುಗರಿಗೆ ಬೇಡಾ ಬೇಡಾ ಅಂದ್ರು ಬೀಳತ್ತಾರೆ ಹುಡುಗಿಯರು.!

ಮೊನ್ನೆ ಭಾನುವಾರದಂದು ವಿಶ್ವವಿದ್ಯಾನಿಲಯದ ಬಳಿ ಹುಯಿಹುಯಿ ಎನ್ನುವ ಬೀದಿ ನಾಯಿಯು ವಿಚಿತ್ರವಾಗಿ ಬೊಗಳುತ್ತಿರುವಂತಹ ಹಾಗೂ ಮಣ್ಣನ್ನು ಅಗೆಯುತ್ತಿರುವ ದೃಶ್ಯವನ್ನು ಕಂಡು ಅಲ್ಲಿಗೆ ಬಂದಂತಹ ಒಂದಷ್ಟು ವಿದ್ಯಾರ್ಥಿಗಳು ಮಣ್ಣಿನಡಿಯಲ್ಲಿ ಬೆಕ್ಕಿನ ಮರಿಯೊಂದು ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸುತ್ತಾರೆ.  ಗಂಟೆಗಳ ತರುವಾಯ ರಾತ್ರಿ 10 ರ ಸುಮಾರಿಗೆ ಶ್ವಾನದ ಸಹಾಯದಿಂದ ವಿದ್ಯಾರ್ಥಿಗಳು ಪುಟಾಣಿ ಬೆಕ್ಕಿನ ಮರಿಯ ಪ್ರಾಣವನ್ನು ರಕ್ಷಿಸಿದ್ದಾರೆ. ಜೊತೆಗೆ ಸಣ್ಣಪುಟ್ಟ ಗಾಯಗಳಾದ ಬೆಕ್ಕನ್ನು ಆಸ್ಪತ್ರೆಗೂ ಸೇರಿಸಲಾಗಿದೆ.  

ಈ ಕುರಿತ ವಿಡಿಯೋವನ್ನು Catshealdeprsn ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬೀದಿನಾಯಿಯೊಂದು ಬೆಕ್ಕಿನ ಮರಿಯನ್ನು ರಕ್ಷಿಸಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ”. ವೈರಲ್‌ ವಿಡಿಯೋದಲ್ಲಿ ಶ್ವಾನವೊಂದು ಮಣ್ಣಿನಡಿ ಸಿಲುಕಿದಂತಹ ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ಇದನ್ನು ಓದಿ : IBPS Recruitment : ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ ವಿವಿಧ 9,995 ಹುದ್ದೆಗೆ ಅಧಿಸೂಚನೆ ಪ್ರಕಟ.!

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶ್ವಾನದ ಈ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ನೋಡಿ :

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img