Saturday, July 27, 2024
spot_img
spot_img
spot_img
spot_img
spot_img
spot_img

ಲಂಚ ಪಡೆದ ಆರೋಪ : ಹೆಡ್‌ ಕಾನ್‌ಸ್ಟೆಬಲ್ Suspend.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಸಂಚಾರ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ವಿರುದ್ಧ ಲಂಚ (bribe) ಪಡೆಯುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಹೆಡ್‌ಕಾನ್‌ಸ್ಟೆಬಲ್ ವಸಂತಕುಮಾರ್‌ನನ್ನು ಅಮಾನತು ಮಾಡಿ ಆದೇಶ (ordered) ಹೊರಡಿಸಲಾಗಿದೆ.

ಇದನ್ನು ಓದಿ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

ವ್ಯಾಪಾರಿಗಳಿಂದ ದಾಖಲಾತಿ ಕೇಳುತ್ತಿದ್ದರು. ದಾಖಲೆಗಳನ್ನು (documents) ಕೊಡದಿದ್ದರೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಆರೋಪ ಇತ್ತು.

ಹೀಗಾಗಿ ವಸಂತಕುಮಾರ್ ವಿರುದ್ಧ ನಿರಂತರ ದೂರುಗಳು ಬಂದಿದ್ದವು. ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ವಸಂತಕುಮಾರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪವಿತ್ತು.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಆದರಿಂದ ಕೆಲ ವ್ಯಾಪಾರಿಗಳು ನೇರವಾಗಿ ಮತ್ತು ಪರೋಕ್ಷವಾಗಿ ದೂರು ನೀಡಿದ್ದರು. ಈ ಮಧ್ಯೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು ಎಂದು ತಿಳಿದು ಬಂದಿದೆ.

ನಗರ ಪೊಲೀಸ್ ಕಮಿಷನರ್ ಅವರ ಸೂಚನೆ ಮೇರೆಗೆ ಇಲಾಖೆ ವಿಚಾರಣೆ ಕಾಯ್ದಿರಿಸಿ (Book an inquiry) ಅಮಾನತು ಮಾಡಲಾಗಿದೆ ಎಂದು ಸಂಚಾರ ಪಶ್ಚಿಮ ವಿಭಾಗದ ಅನಿತಾ ತಿಳಿಸಿದ್ದಾರೆ.

spot_img
spot_img
- Advertisment -spot_img