Friday, June 14, 2024
spot_img
spot_img
spot_img
spot_img
spot_img
spot_img

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

spot_img

ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ ಹಲವು ಪದನಾಮಗಳ ಹುದ್ದೆಗಳು ಖಾಲಿ ಇವೆ.

ಈ ಖಾಲಿ ಇರುವ ಹುದ್ದೆಗಳ ಭರ್ತಿಗೂ ಸಹ ಈಗ ಈ ಸದರಿ ಇಲಾಖೆಯು ಕೆಪಿಎಸ್‌ಸಿಗೆ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಸಿಕೊಡಲು ಪ್ರಸ್ತಾವನೆ ಸಲ್ಲಿಸಿದೆ.

ಇದನ್ನು ಓದಿ : BSF : ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ SI ಸೇರಿ 1,526 ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ.!

ಯಾವ್ಯಾವ ಹುದ್ದೆಗಳಿಗೆ ನೇಮಕಾತಿ ಬೇಡಿಕೆ ಎಂಬುದರ ಲಿಸ್ಟ್‌ ಕೆಳಗಿನಂತಿದೆ :

ಕರ್ನಾಟಕ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿ ಮಾಡಿಕೊಡುವಂತೆ ಕೆಪಿಎಸ್‌ಸಿಗೆ ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಹೈದರಾಬಾದ್‌ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದಗಳಲ್ಲಿ ಖಾಲಿ ಇರುವ ಈ ಸದರಿ ಹುದ್ದೆಗಳ ಭರ್ತಿಗೆ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿಕೊಡಬೇಕೆಂದು ಮೇ ತಿಂಗಳಲ್ಲಿ ಕೃಷಿ ಇಲಾಖೆಯು ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ.

ನಿಖರವಾಗಿ ಎಷ್ಟೆಷ್ಟು ಹುದ್ದೆಗಳಿಗೆ ಎಂಬ ಮಾಹಿತಿಯನ್ನು ಅಧಿಸೂಚನೆ ಪ್ರಕಟಗೊಂಡ ಮೇಲೆಯೇ ತಿಳಿಯಬಹುದಾಗಿದೆ.

ಇದನ್ನು ಓದಿ : ಗಂಡ ಮೃತಪಟ್ಟ 15 ತಿಂಗಳ ಬಳಿಕ ಆತನ ಮಗುವಿಗೆ ತಾಯಿಯಾದ ಮಹಿಳೆ ; ಅದ್ಹೇಂಗೆ.?

ಈ ಕೆಳಗಿನಂತೆ ಯಾವ್ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಎಂದು ತಿಳಿಸಲಾಗಿದೆ. ಈ ಎಲ್ಲ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿಯೇ ನೇಮಕ ಮಾಡುವುದರಿಂದ ಆಸಕ್ತರು ಈಗಿಂದಲೇ ಪರೀಕ್ಷೆಗೆ ಓದಲು ಆರಂಭಿಸಿ.

ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ಅರ್ಹತೆ ಏನಿರಬೇಕು.?

ಟೈಪಿಸ್ಟ್‌ ಹುದ್ದೆ :
– ದ್ವಿತೀಯ ಪಿಯುಸಿ ಪಾಸ್ ಅಥವಾ
– 3 ವರ್ಷಗಳ ಡಿಪ್ಲೊಮ ಕಮರ್ಸಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ
– ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ
– ಡಿಪ್ಲೊಮ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ.

ದ್ವಿತೀಯ ದರ್ಜೆ ಸಹಾಯಕ ಹುದ್ದೆ :
ಯಾವುದೇ ವಿಷಯ ಸಂಯೋಜನೆಗಳಲ್ಲಿ ದ್ವಿತೀಯ ಪಿಯುಸಿ ಪಾಸ್‌ ಮಾಡಿರಬೇಕು.

ಪ್ರಥಮ ದರ್ಜೆ ಸಹಾಯಕ ಹುದ್ದೆ :
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಪದವಿ ಪಾಸ್‌ ಮಾಡಿರಬೇಕು.

spot_img
spot_img
- Advertisment -spot_img