Saturday, July 27, 2024
spot_img
spot_img
spot_img
spot_img
spot_img
spot_img

Health : ಮೊಸರಿನ ಜೊತೆ ಬಾಳೆಹಣ್ಣು ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಆಹಾರ ಪದಾರ್ಥಗಳಲ್ಲಿ ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹಾಲಿನ ಉತ್ಪನ್ನವಾದ ಮೊಸರಿನೊಂದಿಗೆ (Curd) ಬಾಳೆಹಣ್ಣನ್ನು ಸೇವಿಸಿದರೆ ಪ್ರಯೋಜನಗಳು ಅಷ್ಟಿಷ್ಟಲ್ಲ.

ಮೊಸರಿನೊಂದಿಗೆ ಬಾಳೆಹಣ್ಣನ್ನು (Banana) ಸೇರಿಸಿ ತಿನ್ನುವುದರಿಂದ ಆಗುವ ಪ್ರಯೋಜನಗಳು :

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಮೂಳೆಗಳಲ್ಲಿ ಬಲ :
ಇವೆರಡು ಪದಾರ್ಥಗಳು ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನ ಉತ್ತಮ ಮೂಲವೆಂದು (Good source) ಪರಿಗಣಿಸಲಾಗುತ್ತದೆ. ಈ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಮೊಸರು ಮತ್ತು ಬಾಳೆಹಣ್ಣು ತಿನ್ನುವುದರಿಂದ ಮೂಳೆ (Bone) ಸಂಬಂಧಿತ ಕಾಯಿಲೆಗಳು ಸಹ ಗುಣವಾಗುತ್ತವೆ.

ತೂಕ ನಷ್ಟಕ್ಕೆ ಸಹಾಯಕ :
ಹೆಚ್ಚಿದ ತೂಕವನ್ನು ಕಡಿಮೆ ಮಾಡಲು ಮೊಸರು ಮತ್ತು ಬಾಳೆಹಣ್ಣು ಬಹಳ ಪ್ರಯೋಜನಕಾರಿ (Benefit). ಮೊಸರಿನೊಂದಿಗೆ ಬಾಳೆಹಣ್ಣನ್ನು ತಿನ್ನುವುದರಿಂದ ಹೊಟ್ಟೆ ತುಂಬಿರುತ್ತದೆ. ದೀರ್ಘಕಾಲ (Long time) ಹಸಿವಾಗುವುದಿಲ್ಲ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಲಬದ್ಧತೆ ನಿವಾರಣೆ :
ಮಲಬದ್ಧತೆಯ ತೊಂದರೆ ಅನುಭವಿಸುತ್ತಿದ್ದರೆ ಮೊಸರು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸಬಹುದು. ಇದರಲ್ಲಿ ಹೇರಳವಾದ ನಾರಿನಂಶವಿದ್ದು (Fiber), ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಬಹುದು.

ಜೀರ್ಣಾಂಗ ವ್ಯವಸ್ಥೆ ಉತ್ತಮ :
ಬಾಳೆಹಣ್ಣಿನಲ್ಲಿ ಪ್ರಿಬಯಾಟಿಕ್ ಫೈಬರ್ ಮತ್ತು ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿದ್ದು ಅದು ಉತ್ತಮ ಬ್ಯಾಕ್ಟೀರಿಯಾವನ್ನು (Bacteria) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆ ಹಾಗೂ ಮಾನಸಿಕ ಸ್ಥಿತಿಯನ್ನು ಸುಸ್ಥಿತಿಯಲ್ಲಿಡಬಹುದು.

ತ್ವರಿತ ಶಕ್ತಿ :
ಬೆಳಿಗ್ಗೆ ಬಾಳೆಹಣ್ಣು ಮತ್ತು ಮೊಸರು ತಿನ್ನುವುದರಿಂದ ದಿನವಿಡೀ ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.

ಮೊಸರು ಮತ್ತು ಬಾಳೆಹಣ್ಣು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ದೇಹದಿಂದ ಸೋಮಾರಿತನವನ್ನು (Laziness) ತೆಗೆದುಹಾಕುತ್ತದೆ ಮತ್ತು ಶಕ್ತಿಯನ್ನು ಕಾಪಾಡುತ್ತದೆ.

ಇದನ್ನು ಓದಿ : BSF : ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ SI ಸೇರಿ 1,526 ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ.!

ಮೊಸರಿನ ಜೊತೆ ಬಾಳೆಹಣ್ಣು ತಿನ್ನಲು ಸರಿಯಾದ ಸಮಯ :
ಉಪಾಹಾರದ (Breakfast) ಸಮಯದಲ್ಲಿ ನೀವು ಈ ಎರಡೂ ಆಹಾರಗಳನ್ನು ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ದಿನವಿಡೀ ಶಕ್ತಿ ಸಿಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img