Friday, June 14, 2024
spot_img
spot_img
spot_img
spot_img
spot_img
spot_img

Love : ಇಂಥ ಹುಡುಗರಿಗೆ ಬೇಡಾ ಬೇಡಾ ಅಂದ್ರು ಬೀಳತ್ತಾರೆ ಹುಡುಗಿಯರು.!

spot_img

ಜನಸ್ಪಂದನ ನ್ಯೂಸ್‌, ವಿಶೇಷ : ಈ ಪ್ರೀತಿ ಅನ್ನೋದು ಯಾವಾಗ, ಹೇಗೆ ಮತ್ತು ಎಲ್ಲಿ ಹುಟ್ಟುತ್ತೇ ಅಂತ ಹೇಳಕ್ಕಾಗಲ್ಲ. ಸ್ನೇಹದಿಂದ ಪ್ವಾರರಂಭವಾಗೋ ಸಂಬಂಧ ಪ್ರೀತಿಯಾಗಿ ಯಾವಾಗ ಬದಲಾಗುತ್ತೆ ಅನ್ನೋದು ಯಾರಿಗೂ ತಿಳಿಯಲ್ಲ.

ಹುಡುಗರ ಈ 5 ಗುಣಗಳೇ ಹುಡುಗಿಯರು ಅವರ ಮೇಲೆ ಪ್ರೀತಿ ಮೂಡೋ ಹಾಗೆ ಮಾಡುತ್ತೆ. ಅವುಗಳು ಯಾವ ಅನ್ನುವ ಬಗ್ಗೆ ಡಿಟೇಲ್ ಆಗಿ ತಿಳಿಯೋಣ ಬನ್ನಿ.! 

ಇದನ್ನು ಓದಿ : Special news : ಈ 4 ರಾಶಿಯವರಿಗೆ ಹಣದ ತೊಂದರೆ ಎಂದಿಗೂ ಬರುವುದಿಲ್ಲ.!

  • ಹುಡುಗ ಹುಡುಗಿಯೊಂದಿಗೆ ಸ್ನೇಹಿತನಂತೆ ಮಾತನಾಡಿದರೆ ಮತ್ತು ಭವಿಷ್ಯದ ಯೋಜನೆ ಬಗ್ಗೆ ಅವರ ಬಳಿ ಮಾತನಾಡೊದಕ್ಕೆ ಪ್ರಾರಂಭಿಸಿದ್ರೆ, ಇಬ್ಬರ ಸಂಬಂಧವು ಗಾಢವಾಗಲು ಪ್ರಾರಂಭಿಸುತ್ತದೆ.  ಸ್ನೇಹಿತ ತನ್ನ ಜೊತೆ ಎಲ್ಲಾ ಸಣ್ಣ ಪುಟ್ಟ ವಿಷ್ಯಗಳನ್ನು ಹಂಚಿಕೊಂಡ್ರೆ, ಹುಡುಗಿ ಮನಸು ಅವನತ್ತ ವಾಲದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಹುಡುಗ ತುಂಬಾ ಸ್ವೀಟ್ ಆಗಿ ಮಾತನಾಡ್ತಿದ್ರೆ, ಅವನ ಮಾತುಗಳು ಹುಡುಗಿಯ ಮನ ಸೋಲೋದು ಖಚಿತ, ಸ್ವಲ್ಪ ಸಮಯದಲ್ಲಿ ಹುಡುಗಿ ಲವ್ವಲ್ಲಿ ಬೀಳೋದು ಸಹ ಗ್ಯಾರಂಟಿ.
  • ಹುಡುಗಿ ತನ್ನ ಜೀವನದ ಸಣ್ಣ ಪುಟ್ಟ ವಿಷ್ಯಗಳಿಗೆ ಗಮನ ಕೊಡುವ ಹುಡುಗ, ಸಣ್ಣಪುಟ್ಟ ಆಸೆಗಳನ್ನು ಈಡೇರಿಸೋ ಹುಡುಗ ಆಕೆಗೆ ಇಷ್ಟವಾಗ್ತಾನೆ. ಆ ಹುಡುಗನಿಗೆ ಸೋಲದೆ ಇರುವಳೇ ಹುಡುಗಿ.

ಇದನ್ನು ಓದಿ : ಪತ್ನಿಯೊಂದಿಗಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಕುರಿತು ಹೈಕೋರ್ಟ್ ಮಹತ್ವದ ತೀರ್ಪು.!

  • ಹುಡುಗನು ಬ್ಯುಸಿ ಜೀವನದ ನಡುವೆಯೂ ತನ್ನ ಸ್ನೇಹಿತ ಅಥವಾ ಗೆಳತಿಗಾಗಿ ಸಮಯ ನೀಡಿದ್ರೆ, ಅವನ ಮೇಲೆ ಹುಡುಗಿಗೆ ಲವ್ ಆಗೋದು ಖಂಡಿತಾ.
  • ಸಂಬಂಧದಲ್ಲಿನ ಬಿರುಕು ಮೂಡೋಕೆ ದೊಡ್ಡ ಕಾರಣವೆಂದರೆ  ತಪ್ಪು ತಿಳುವಳಿಕೆ ಮತ್ತು ಮಾತನಾಡದೇ  ಇರೋದು. ಆದರೆ ಇಬ್ಬರ ನಡುವೆ ಜಗಳ, ಮನಸ್ಥಾಪ ಆದಾಗ ದೂರ ಹೋಗುವ ಬದಲು, ಕುಳಿತು ಯಾಕೆ ಹೀಗೆ ಆಗಿದೆ ಅನ್ನೋದರ ಬಗ್ಗೆ ಮಾತನಾಡುವ, ಸಮಸ್ಯೆ ಬಗೆಹರಿಸುವ ಹುಡುಗನನ್ನು ಯಾವ ಹುಡುಗಿ ತಾನೆ ಇಷ್ಟ ಪಡದಿರಲು ಸಾಧ್ಯ.
spot_img
spot_img
- Advertisment -spot_img