Saturday, July 27, 2024
spot_img
spot_img
spot_img
spot_img
spot_img
spot_img

ವಿವಿಧ ಹುದ್ದೆಗಳಿಗೆ ಚೆನ್ನೈನ ಇಂಟೆಗ್ರಲ್​ Coach​ ಫ್ಯಾಕ್ಟರಿಯಲ್ಲಿದೆ ಉದ್ಯೋಗಾವಕಾಶ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ರೈಲು ಕೋಚ್​ಗಳ ತಯಾರಿಕಾ ಘಟಕವಾದ ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿ ಹುದ್ದೆಗಳಿವೆ ಅಪ್ರೆಂಟಿಸ್​ಶಿಪ್​ ಹುದ್ದೆಗಳ (ಒಟ್ಟು 1,010) ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಪದವೀಧರರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

RTO : ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ಹುದ್ದೆಗಳ ವಿವರ : ಕೇಂದ್ರ ಸರ್ಕಾರದ ಅಪ್ರೆಂಟಿಸ್​ ಕಾಯ್ದೆ 1961ರ ಅಡಿ ನೇಮಕಾತಿ ನಡೆಯಲಿದೆ.

  • ಕಾರ್ಪೆಂಟರ್​​ – 90.
  • ಎಲೆಕ್ಟ್ರಿಷಿಯನ್​ – 200.
  • ಫಿಟ್ಟರ್​ – 260.
  • ಮೆಕ್ಯಾನಿಕ್​ – 90.
  • ಪೇಂಟರ್​​ – 90.
  • ವೆಲ್ಡರ್​​ – 260.
  • ಎಂಎಲ್​ಟಿ ರೇಡಿಯಾಲಜಿ – 05.
  • ಎಂಎಲ್​ಟಿ ರೇಡಿಯಾಲಜಿ – 05.
  • ಪಿಎಎಸ್​ಎಎ – 10.

ವಿದ್ಯಾರ್ಹತೆ : ಎಸ್​ಎಸ್​ಎಲ್​ಸಿ ಬಳಿಕ ಎರಡು ವರ್ಷದ ಐಟಿಐ ಪದವಿ.

ವಯೋಮಿತಿ : ಕನಿಷ್ಠ 15 ವರ್ಷ, 24 ವರ್ಷ ಮೀರಿರಬಾರದು. ​

ಅರ್ಜಿ ಸಲ್ಲಿಕೆ : ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 100 ರೂ ಜೊತೆಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳು ಭರಿಸಬೇಕು. ಪ.ಜಾ, ಪ.ಪಂ, ವಿಶೇಷಚೆತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

LIC recruitment 2024 : LIC ಯಲ್ಲಿ 7,000 ಹುದ್ದೆಗಳ ಬೃಹತ್ ನೇಮಕಾತಿ..!

ವಿಶೇಷ ಸೂಚನೆ : ಈ ಹುದ್ದೆಗಳನ್ನು 1 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದೆ. ಮಾಸಿಕ 7,000 ರೂ ಸ್ಟೈಫಂಡ್​ ನೀಡಲಾಗುತ್ತದೆ.

ಎಚ್​ಎಎಲ್​ನಲ್ಲಿ ಅಪ್ರೆಂಟಿಸ್​ ಹುದ್ದೆಗಳು : ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ನಲ್ಲಿ ಅಪ್ರೆಂಟಿಸ್​​ಶಿಪ್​ ಟ್ರೈನಿಂಗ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್​​, ಟರ್ನರ್​​, ಮೆಕ್ಯಾನಿಸ್ಟ್​​, ವೆಲ್ಡರ್​, ಸಿಒಎಪಿ, ಫೌಂಡ್ರೆ-ಮ್ಯಾನ್​, ಶೀಟ್​ ಮೆಟಲ್​ ವರ್ಕ್​, ಟೂಲ್​ ಆ್ಯಂಡ್​ ಡೈ ಮೇಕರ್​, ಎಲೆಕ್ಟ್ರಿಷಿಯನ್​ ಅಡ್ವಾನ್ಸ್ಡ್​​ ಸಿಎನ್​ಸಿ ಮೆಷಿಂಗ್​ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ.

ಐಟಿಐ ಪದವಿ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಆಯ್ಕೆಯಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 7,000-7,700 ರೂ.ವರೆಗೆ ಗೌರವಧನ ನೀಡಲಾಗುತ್ತದೆ.

ನೇರ ಸಂದರ್ಶನ ಜೂನ್​ 17ರಿಂದ ಜೂನ್​ 22ರವರೆಗೆ ಟೆಕ್ನಿಕಲ್​ ಟ್ರೈನಿಂಗ್​​ ಇನ್ಸುಟಿಟ್ಯೂಟ್​, ಸುರಂಜನ್​ ದಾಸ್​ ರಸ್ತೆ, ಬೆಂಗಳೂರು – 560017 ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ hal-india.co.in ಇಲ್ಲಿಗೆ ಭೇಟಿ ನೀಡಿ.

ITI Apprenticeship recruitment by Integral Coach Factory Chennai and HAL

ಪ್ರಮುಖ ದಿನಾಂಕ : 

  • ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ : ಮೇ 22, 2024.
  • ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ : ಜೂನ್​ 21, 2024.

ಅಧಿಕೃತ ಅಧಿಸೂಚನೆಗೆ pb.icf.gov.in ಇಲ್ಲಿಗೆ ಭೇಟಿ ನೀಡಿ.

spot_img
spot_img
- Advertisment -spot_img