Friday, June 14, 2024
spot_img
spot_img
spot_img
spot_img
spot_img
spot_img

ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆ ; ಸುದ್ದಿ ತಿಳಿದು ನೋಡಲು ಬರದ ಕುಟುಂಬಸ್ಥರು.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕತಾರ್​​ ಏರ್​ವೇಸ್​ನ ಮಾಜಿ ಗಗನಸಖಿ, ‘ದಿ ಟ್ರಯಲ್’ ವೆಬ್​ ಸಿರೀಸ್​​ನಲ್ಲಿ ಕಾಜೋಲ್ ಜೊತೆ ಕೆಲಸ ಮಾಡಿದ್ದ ನಟಿ ನೋರ್ ಮಾಲಾಬಿಕಾ ದಾಸ್ (Noor Malabika Das) ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.

ನೋರ್ ಮಾಲಾಬಿಕಾ ದಾಸ್ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಬಾಂಗ್ಲಾದೇಶದ ಗಡಿಗೆ ಸಮೀಪವಿರುವ ಅಸ್ಸಾಂನ ಕರೀಂಗಂಜ್ ಪಟ್ಟಣದ ಮೂಲದ ನೂರ್, ನಟನಾ ವೃತ್ತಿಜೀವನವನ್ನು ಮುಂದುವರಿಸುವ ಭರವಸೆಯೊಂದಿಗೆ ಮುಂಬೈಗೆ ತೆರಳಿದ್ದರು.

ಇದನ್ನು ಓದಿ : IBPS Recruitment : ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ ವಿವಿಧ 9,995 ಹುದ್ದೆಗೆ ಅಧಿಸೂಚನೆ ಪ್ರಕಟ.!

ಮಾಹಿತಿಗಳ ಪ್ರಕಾರ, ಜೂನ್ 6 ರಂದು ಪೊಲೀಸರು ನೂರ್ ಮಾಲಾಬಿಕಾ ದಾಸ್ ಅವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಫ್ಯಾನ್​​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾವಿಗೆ ಕಾರಣ ಇನ್ನೂ ಬಹಿರಂಗ ಆಗಿಲ್ಲ.

ನೆರೆಹೊರೆಯವರು ದುರ್ವಾಸನೆಯಿಂದ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ಮನೆಯ ಬಾಗಿಲು ತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ನೂರ್ ಅವರ ಮೃತದೇಹ ಫ್ಯಾನಗ್​ಗೆ ಲೋಖಂಡವಾಲಾ ಅಪಾರ್ಟ್‌ಮೆಂಟ್‌ನಲ್ಲಿ ನೇತಾಡುತ್ತಿತ್ತು. ಇದು ಆತ್ಮಹತ್ಯೆಯ ಅನುಮಾನಕ್ಕೆ ಕಾರಣವಾಗಿದೆ.

ಮಿಡ್ ಡೇ ವರದಿಯ ಪ್ರಕಾರ, ಆಕೆಯ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಯಾರೂ ಪ್ರತಿಕ್ರಿಯಿಸಲಿಲ್ಲ, ಮಮ್ದಾನಿ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ಎನ್‌ಜಿಒ ಸಹಾಯದಿಂದ ಪೊಲೀಸರು ಭಾನುವಾರ ಅವಳ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಇದನ್ನು ಓದಿ : Love : ಇಂಥ ಹುಡುಗರಿಗೆ ಬೇಡಾ ಬೇಡಾ ಅಂದ್ರು ಬೀಳತ್ತಾರೆ ಹುಡುಗಿಯರು.!

ನಂತರ ಪೊಲೀಸರು ಕುಟುಂಬಸ್ಥರ ಸಂಪರ್ಕಿಸುವ ಪ್ರಯತ್ನ ಮಾಡಿದರು. ಆದರೆ ಮನೆಯವರಾಗಲಿ, ಸಂಬಂಧಿಕರಾಗಲಿ ಆಕೆಯ ಮೃತದೇಹವನ್ನು ಕೊಂಡೊಯ್ಯಲು ಮುಂದೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಮಮ್ದಾನಿ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ಎನ್‌ಜಿಒ ಸಹಾಯದಿಂದ ಪೊಲೀಸರು ಭಾನುವಾರ ಅವಳ ಅಂತಿಮ ವಿಧಿಗಳನ್ನು ನೆರವೇರಿಸಿದರು.

ನೂರ್ ಮಾಲಾಬಿಕಾ ದಾಸ್​ಗೆ 32 ವಯಸ್ಸಾಗಿತ್ತು. ಇವರು ಮೂಲತಃ ಅಸ್ಸಾಂ ನಿವಾಸಿ. ಇವರು ಅನೇಕ ಹಿಂದಿ ಚಲನಚಿತ್ರ ಮತ್ತು ವೆಬ್ ಸಿರೀಸ್​ಗಳಲ್ಲಿ ಕೆಲಸ ಮಾಡಿದ್ದಾರೆ. ನೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಸಾವಿಗೂ ಮೊದಲು ಐದು ದಿನಗಳ ಹಿಂದೆ ಇನ್​ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದರು. ಇದೀಗ ಅದೇ ಪೋಸ್ಟ್​ಗೆ ಅಭಿಮಾನಿಗಳು ಕಮೆಂಟ್ ಮಾಡಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. (ಎಜೇನ್ಸಿಸ್) 

spot_img
spot_img
- Advertisment -spot_img