Saturday, July 27, 2024
spot_img
spot_img
spot_img
spot_img
spot_img
spot_img

IBPS Recruitment : ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ 9,995 ಹುದ್ದೆಗಳಿಗೆ ಜೂನ್ 30 ರವರಿಗೆ ದಿನಾಂಕ ವಿಸ್ತರಣೆ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸ್ವೀಕರಿಸಲು ದಿ. 27-06-2024 ಕೊನೆಯ ದಿನಾಂಕ ಎಂದು ಹೇಳಲಾಗಿತ್ತಾರೂ ಇದೀಗ ದಿನಾಂಕವನ್ನು ಜೂನ್ 30‌, 2024 ರವರೆಗೆ ವಿಸ್ತರಿಸಲಾಗಿದೆ.

ದಿನಾಂಕ ಮುಂದುಡಿದ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸದೆ ಇರುವವರು ಕೂಡಲೇ ಇದರ ಸದುಪಯೋಗ ಪಡಿಸಿಕೊಳ್ಳಿ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಲ್ಲಿ ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : KPSC ಯಿಂದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 426 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹುದ್ದೆ ವಿವರ : ಒಟ್ಟು 9,995 ಹುದ್ದೆ ನೇಮಕಾತಿಯಲ್ಲಿ ಕರ್ನಾಟಕ ಗ್ರಾಮೀಣ​ ಬ್ಯಾಂಕ್​ನಲ್ಲಿ 386, ಕರ್ನಾಟಕ ವಿಕಾಸ್​ ಗ್ರಾಮೀಣ ಬ್ಯಾಂಕ್​ 200 ಹುದ್ದೆಗಳಿಗೆ ನೇಮಕಾತಿ.

  • ಆಫೀಸ್​ ಅಸಿಸ್ಟಂಟ್​​ – 5,585.
  • ಆಫೀಸರ್​ ಸ್ಕೇಲ್​ II – ಜನರಲ್​ ಬ್ಯಾಂಕಿಂಗ್​ ಆಫೀಸರ್​ 496.
  • ಆಫೀಸರ್​ ಸ್ಕೇಲ್​ – II (ಐಟಿ) – 94.
  • ಆಫೀಸರ್​ ಸ್ಕೇಲ್​ – II (ಸಿಎ) – 60.
  • ಆಫೀಸರ್​ ಸ್ಕೇಲ್​ – II (ಕಾನೂನು) – 30.
  • ಆಫೀಸರ್​ ಸ್ಕೇಲ್​ – II (ಟ್ರೆಶರ್​ ಮ್ಯಾನೇಜರ್​ ) – 11.
  • ಆಫೀಸರ್​ ಸ್ಕೇಲ್​ – II (ಅಗ್ರಿಕಲ್ಚರ್​ ಆಫೀಸರ್​) – 70.
  • ಆಫೀಸರ್​ ಸ್ಕೇಲ್​ – III (ಸೀನಿಯರ್​ ಮ್ಯಾನೇಜರ್​ – 129.
  • ಆಫೀಸರ್​ ಸ್ಕೇಲ್​ – I (ಅಸಿಸ್ಟಂಟ್​ ಮ್ಯಾನೇಜರ್​) – 3,499.

ವಿದ್ಯಾರ್ಹತೆ : ಆಫೀಸರ್​ ಸ್ಕೇಲ್​- I ನ ಅಸಿಸ್ಟೆಂಟ್​ ಮ್ಯಾನೇಜರ್ ಹುದ್ದೆ ಮತ್ತು ಆಫೀಸರ್​ ಸ್ಕೇಲ್​ -3ಯ ಸೀನಿಯರ್​ ಮ್ಯಾನೇಜರ್​​, ಆಫೀಸ್​ ಅಸಿಸ್ಟೆಂಟ್​ನ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿಯನ್ನು ಪೂರ್ಣಗೊಳಿಸಿರಬೇಕು, ಆಫೀಸರ್​ ಸ್ಕೇಲ್​ 2 – ಮ್ಯಾನೇಜರ್​ ಹುದ್ದೆಗೆ ಸಿಎ, ಎಲ್​ಎಲ್​ಬಿ, ಎಂಬಿಎ ಪದವಿಯನ್ನು ಹೊಂದಿರಬೇಕು.

ವಯೋಮಿತಿ : ಅಭ್ಯರ್ಥಿಗಳು ವಿವಿಧ ಸ್ಕೇಲ್​ಗೆ ಅನುಗುಣವಾಗಿ ವಯೋಮಿತಿ ಹೊಂದಿದ್ದು, ಕನಿಷ್ಠ 18 ರಿಂದ ಗರಿಷ್ಠ 40 ವರ್ಷವಾಗಿದೆ.

  • ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ.
  • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ.
  • ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಇದನ್ನು ಓದಿ : IT : ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಅರ್ಜಿ ಸಲ್ಲಿಕೆ : ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

  • ಮೀಸಲಾತಿ ಅಭ್ಯರ್ಥಿಗಳಿಗೆ 175 ರೂ,
  • ಇತರ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗಳಿಗೆ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿದ್ದು, ಇವೆರಡರಲ್ಲೂ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.

ಪ್ರಮುಖ ದಿನಾಂಕ : 

  • ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ : 07-06-2024.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27.06.2024. ಜೂನ್‌ 30, 2024.

IBPS ನ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಬಹುದು.

 

spot_img
spot_img
- Advertisment -spot_img