Sunday, September 8, 2024
spot_img
spot_img
spot_img
spot_img
spot_img
spot_img
spot_img

ಮದುವೆ ನಂತರ ಪತ್ನಿಯನ್ನು ಓದಿಸಿದ ಪತಿ ; ಸರ್ಕಾರಿ ಕೆಲಸ ಸಿಗ್ತಿದ್ದಂತೆ ಈಕೆ ಮಾಡಿದ್ದೇನು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಬಾಲಕಿ ಅಕೌಂಟೆಂಟ್ ಹುದ್ದೆಗೆ ನೇಮಕವಾದ ಕೂಡಲೇ ಪತಿಯನ್ನು ಬಿಟ್ಟು ಹೋದ ಘಟನೆ ನಡೆದಿದೆ.

ಮದುವೆಯಾದ ನಂತರ ಪತಿಯೇ ಪತ್ನಿಗೆ ಶಿಕ್ಷಣ ನೀಡಿ ಸ್ವಾವಲಂಬಿಯಾಗುವಂತೆ ಮಾಡಿ ಬಳಿಕ ಸರ್ಕಾರಿ ನೌಕರಿ ಸಿಕ್ಕಿದ ಕೂಡಲೇ ಗಂಡನನ್ನು ಬಿಟ್ಟು ಹೋದ ಘಟನೆಗಳು ಬೆಳಕಿಗೆ ಬಂದಿವೆ. ಆ ಸಾಲಿಗೆ ಈ ಘಟನೆಯೊಂದು ಸೇರಿದೆ.

ಇದನ್ನು ಓದಿ : ಮಹಿಳೆಯ ಬಟ್ಟೆ ಒಣಗಿಸುವ ಹೊಸ technique ನೋಡಿ‌ ನೆಟ್ಟಿಗರು ಪುಲ್‌ ಖುಷ್ ; ವಿಡಿಯೋ ವೈರಲ್.!

ಘಟನೆಯ ಹಿನ್ನೆಲೆ :
ಝಾನ್ಸಿ (Jhansi) ನಗರದ ಕೊಟ್ವಾಲಿ ಹೊರಗಿನ ಬಾಬಾ ಕಾ ಅಟ್ಟಾದಲ್ಲಿ ವಾಸಿಸುವ ನೀರಜ್ ವಿಶ್ವಕರ್ಮ ಎಂಬಾತ ಸುಮಾರು 5 ವರ್ಷಗಳ ಹಿಂದೆ ಝಾನ್ಸಿಯ ಸತ್ಯಂ ಕಾಲೋನಿ ನಿವಾಸಿ ರಿಚಾ ಸೋನಿ ಅವರನ್ನು ಸ್ನೇಹಿತೆಯೊಬ್ಬರ ಮನೆಯಲ್ಲಿ ಭೇಟಿಯಾಗಿದ್ದ.

ಅಲ್ಲಿಂದ ಶುರುವಾದ ಸ್ನೇಹ (friendship) ಪ್ರೀತಿಗೆ ತಿರುಗಿತ್ತು. ಇಬ್ಬರೂ 2022ರಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ಸಮಯದಲ್ಲಿ ರಿಚಾ ಸೋನಿ, ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಮದುವೆಯಾದ್ಮೇಲೆ ಇಬ್ಬರೂ ಖುಷಿಯಲ್ಲಿದ್ದರು. ಒಂದು ದಿನ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಕೋಪಗೊಂಡ ರೀಚಾ ತವರಿಗೆ ಹೋಗಿದ್ದಳು.

ಇದನ್ನು ಓದಿ : ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗರಹಾವು ; ಬೆಚ್ಚಿಬಿದ್ದ ಯುವತಿ, ವಿಡಿಯೋ viral.!

ಮತ್ತೆ ಗಂಡನ ಮನೆಗೆ ವಾಪಸ್ಸಾದ ಆಕೆ ನಾನು ಹೆಚ್ಚು ಓದಬೇಕೆಂದು ಪತಿಗೆ ಹೇಳಿದ್ದಳು. ಇದನ್ನು ಕೇಳಿದ ಪತಿ ವಿಶ್ವಕರ್ಮ, ಪತ್ನಿಗೆ ಓದಿಸಲು ಮುಂದಾಗಿದ್ದಾನೆ. ಕೂಲಿ ಮಾಡಿ ಆಕೆಯ ಶುಲ್ಕ ಪಾವತಿ ಮಾಡಿದ್ದಾನೆ. ರೀಚಾ ಸೋನಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಅಕೌಂಟೆಂಡ್ ಕೆಲಸ ಸಿಗ್ತಿದ್ದಂತೆ ಆಕೆ ಗಂಡನ ಮನೆ ಬಿಟ್ಟಿದ್ದಾಳೆ. ಅಲ್ಲಿಂದ ಇಲ್ಲಿಯವರೆಗೂ ಪತಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ.

ಇದೀಗ ರಿಚಾ ಲೆಕ್ಕ ಪರಿಶೀಲನಾ ಅಧಿಕಾರಿಯಾಗಿ ನೇಮಕವಾಗಿದ್ದಾಳೆ.. ಸರ್ಕಾರಿ ಕೆಲಸ ಸಿಕ್ಕ ಕೂಡಲೇ ರಿಚಾ ಗಂಡನನ್ನು ತೊರೆದಿದ್ದಾಳೆ. ಇದರಿಂದಾಗಿ ಗಂಡ ನೀರಜ್‌ ವಿಶ್ವಕರ್ಮ ಸಂಕಷ್ಟ ಅನುಭವಿಸುತ್ತಿದ್ದಾರೆ. ನಾನು ಕಷ್ಟಪಟ್ಟು ಓದಿಸಿದ್ದೇನೆ. ಈಗ ಅವಳು ಬಿಟ್ಟು ಹೋಗಿದ್ದಾಳೆ. ನನಗೆ ನ್ಯಾಯ ಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ 979 ಹುದ್ದೆಗಳಿಗೆ ಶೀಘ್ರದಲ್ಲೇ ಭರ್ತಿ.!

ಇಂಥ ಪ್ರಕರಣ ಹೊಸದೇನಲ್ಲ. ಅನೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಅದ್ರಲ್ಲಿ ಯುಪಿಯ ಖ್ಯಾತ ಪಿಸಿಎಸ್ ಅಧಿಕಾರಿ ಜ್ಯೋತಿ ಮೌರ್ಯ ಪ್ರಕರಣ ಕೂಡ ಸೇರಿದೆ. ಜ್ಯೋತಿ ಮೌರ್ಯ ವಿಷ್ಯ ಹಿಂದಿನ ವರ್ಷ ಹೆಚ್ಚು ಚರ್ಚೆಯಾಗಿತ್ತು.

ಜ್ಯೋತಿ ಮೌರ್ಯ ಅವರ ಪತಿ ಅಲೋಕ್ ಮೌರ್ಯ, ಪತ್ನಿ ವಿರುದ್ಧ ದೂರು ದಾಖಲಿಸಿದ್ದರು. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಮೂಲಕ ಅಪಾರ ಸಂಪತ್ತು ಗಳಿಸಿದ್ದಾರೆ ಎಂಬ ಆರೋಪ ಮಾಡಿದ್ದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img