Saturday, July 13, 2024
spot_img
spot_img
spot_img
spot_img
spot_img
spot_img

ಕರ್ನಾಟಕ ಪೌರಾಡಳಿತ ಇಲಾಖೆಯಲ್ಲಿ ಖಾಲಿ ಇರುವ SDA/FDA ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಪೌರಾಡಳಿತ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಹಾಗೂ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಬೆಳಗಾವಿ ಮತ್ತು ಕಲಬುರಗಿ ಮಹಾ ನಗರಪಾಲಿಕೆಗಳಲ್ಲಿರುವ ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ.

ಇದನ್ನು ಓದಿ : ದೇಹದಲ್ಲಿ ಯೂರಿಕ್‌ Acid ಹೆಚ್ಚಾದರೆ ಐದು ಭಯಾನಕ ಕಾಯಿಲೆಗಳು ಬೆಳೆಯುತ್ತವೆ.!

ಅರ್ಜಿ ಸಲ್ಲಿಸುವ ಮುನ್ನ ಅರ್ಜಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ತಿಳಿಯುವುದು ಮುಖ್ಯ. ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವೇತನ :
* SDA : 21,400- 42,000 ರೂ. ವೇತನ (DA & HRA ಮುಂತಾದ ಪ್ರತ್ಯೇಕ ಸೌಲಭ್ಯಗಳು ಇರುತ್ತವೆ).

* FDA : 27,650- 52,650 ರೂ. ವೇತನ DA & HRA ಮುಂತಾದ ಪ್ರತ್ಯೇಕ ಸೌಲಭ್ಯಗಳು ಇರುತ್ತವೆ).

ವಿದ್ಯಾರ್ಹತೆ :
SDA : ಕನಿಷ್ಟ ಪಿಯುಸಿ ಪೂರ್ಣಗೊಂಡಿರಬೇಕು.
FDA : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಂಡಿರಬೇಕು.

ಇದನ್ನು ಓದಿ : ಬ್ಯಾಂಕ್‌ ಆಫ್‌ ಬರೋಡಾದ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ; details ಇಲ್ಲಿದೆ.!

ವಯೋಮಿತಿ :
ಅಭ್ಯರ್ಥಿಗಳ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು.

ವಯೋಮಿತಿ ಸಡಿಲಿಕೆ :
* ಪರಿಶಿಷ್ಟ ಜಾತಿ/ಪಂಗಡ (SC/ST) : 5 ವರ್ಷ ಸಡಿಲಿಕೆ.
* ಇತರೆ ಹಿಂದೂಳಿದ ವರ್ಗ (OBC) : 3 ವರ್ಷ ಸಡಿಲಿಕೆ.
* ಅಂಗವಿಕಲ (PWD): 10 ವರ್ಷ ಸಡಿಲಿಕೆ.

ಅರ್ಜಿ ಶುಲ್ಕ :
ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಇರುವುದಿಲ್ಲ.

ಆಯ್ಕೆ ವಿಧಾನ :
ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು.

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 20, 2024.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 20, 2024.

ಇದನ್ನು ಓದಿ : ಮಳೆಗಾಲದಲ್ಲಿ ಪುಂಡಿ ಪಲ್ಲೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಅರ್ಜಿ ಸಲ್ಲಿಕೆ ಹೇಗೆ :
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪೌರಾಡಳಿತ ಇಲಾಖೆ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ. ಅರ್ಜಿ ನಮೂನೆಯ ಪ್ರತಿಯನ್ನು ತೆಗೆದುಕೊಂಡು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ಆಯ್ಕೆ ಪ್ರಾಧಿಕಾರ ಮತ್ತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು – 560001.

Apply Online Click here

spot_img
spot_img
- Advertisment -spot_img