Friday, October 18, 2024
spot_img
spot_img
spot_img
spot_img
spot_img
spot_img
spot_img

Video : ಸೇತುವೆಯಿಂದ 20 ಅಡಿ ಕೆಳಗೆ ಬಿದ್ದು ಛಿದ್ರ ಛಿದ್ರವಾದ ಕಾರು ; ಮೂವರು ಭಾರತೀಯ ಯುವತಿಯರ ಸಾ*ವು ; ಓರ್ವ ಗಂಭೀರ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ‌ಅತಿ ವೇಗದಲ್ಲಿ ಹೋಗುತ್ತಿದ್ದ ಕಾರೊಂದು ಬ್ರಿಡ್ಜ್​ ಮೇಲಿಂದ 20 ಅಡಿ ಕೆಳಕ್ಕೆ ಬಿದ್ದ ಪರಿಣಾಮ ಮೂವರು ಭಾರತೀಯ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಮೇರಿಕಾ (US) ದಲ್ಲಿ ನಡೆದಿದೆ.

ಹೆದ್ದಾರಿಯ ಸೇತುವೆಯೊಂದರ ಮೇಲೆ ಎಸ್‌ಯುವಿ (SUV) ಕಾರು ಅತಿ ವೇಗವಾಗಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆ ಅಮೆರಿಕದ ದಕ್ಷಿಣ ಕೆರೊಲಿನಾ ರಾಜ್ಯದ ಗ್ರೀನ್‌ವಿಲ್ಲೆ ಕೌಂಟಿ ಬಳಿ ಈ ಆಕ್ಸಿಡೆಂಟ್ ಸಂಭವಿಸಿದೆ.

ಇದನ್ನು ಓದಿ : ಖಾಲಿ ಇರುವ 247 ಪಿಡಿಒ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಡೈರಕ್ಟ್‌ ಲಿಂಕ್‌.!

ಅಪಘಾತದಲ್ಲಿ ಮೃತಪಟ್ಟ ಮೂವರು ಯುವತಿರನ್ನು ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ (Rekhaben Patel, Sangeetaben Patel and Manishaben Patel) ಎಂದು ಗುರುತಿಸಲಾಗಿದೆ. ಎಸ್‌ಯುವಿ ಕಾರಿನ ಚಾಲಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

“ಕಾರಿನಲ್ಲಿ ಅವರು ನಿಗದಿಪಡಿಸಲಾದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ತಿಳಿಸಿದರು. ಬೇರೆ ಯಾವುದೇ ಕಾರುಗಳು ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೂರುಗಳು ಚೆಲ್ಲಿದ್ದು, ಡಿಕ್ಕಿ ಹೊಡೆದ ವೇಗಕ್ಕೆ ಸಾಕ್ಷಿಯಾಗಿದೆ.

ಇದನ್ನು ಓದಿ : ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!

ಕಾರು ಅತಿವೇಗವಾಗಿ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿ ಸೇತುವೆ ಮೇಲಿನ 4 ಲೈನ್​ ರಸ್ತೆಗಳನ್ನು ದಾಟಿ 20 ಅಡಿ ಕೆಳಕ್ಕೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಆನ್ ಸ್ಪಾಟ್ ಮೃತಪಟ್ಟಿದ್ದಾರೆ. ಡ್ರೈವರ್​​ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಾಹನದ ಪತ್ತೆ ವ್ಯವಸ್ಥೆಯು ಅಪಘಾತದ ಬಗ್ಗೆ ಕೆಲವು ಕುಟುಂಬ ಸದಸ್ಯರಿಗೆ ಅಲಾರ್ಮ್‌ ನೀಡಿತು. ನಂತರ ಅವರು ದಕ್ಷಿಣ ಕೆರೊಲಿನಾದ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. (ಎಜೇನ್ಸಿಸ್)

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img