Wednesday, May 22, 2024
spot_img
spot_img
spot_img
spot_img
spot_img
spot_img

ಫೇಶಿಯಲ್ ಮಾಡಿಸಿದ ಮೂವರು ಮಹಿಳೆಯರಿಗೆ HIV ಸೋಂಕು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಪಾವೊಂದರಲ್ಲಿ ವ್ಯಾಂಪೈರ್ ಫೇಶಿಯಲ್ (Vampire Facial) ಪಡೆದ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು ತಗಲಿರುವ ಆಘಾತಕಾರಿ ಘಟನೆ ನ್ಯೂ ಮೆಕ್ಸಿಕೋದಲ್ಲಿ ನಡೆದಿದೆ ಎಂದು ವರದಿಯಾಗಿದೆ.

2018ರಲ್ಲಿ ಮಹಿಳೆಯೊಬ್ಬರಲ್ಲಿ ಎಚ್‌ಐವಿ ಸೋಂಕು ಕಂಡುಬಂದಿತ್ತು. ಆದರೆ, ಆಕೆ ಎಚ್‌ಐವಿ ಇರುವವರೊಂದಿಗೆ ಲೈಂಗಿಕ ಸಂಪರ್ಕ (sexual contact) ಹೊಂದಿರಲಿಲ್ಲ. ಬಹಳ ವರ್ಷಗಳಿಂದ ಇಂಜೆಕ್ಷನ್ ಕೂಡ ಪಡೆದಿರಲಿಲ್ಲವಂತೆ, ಯಾರಿಂದಲೂ ರಕ್ತ ಸಹ ಪಡೆದಿರಲಿಲ್ಲ. ಕಡೆಗೆ ಹೇಗೆ ಹರಡಿರಬಹುದೆಂದು ತನಿಖೆ ಮಾಡುವಾಗ ಕಂಡುಬಂದಿದ್ದು ಅವರು ವ್ಯಾಂಪೈರ್ ಫೇಶಿಯಲ್ ಮಾಡಿಸಿದ್ದರು ಎಂಬುದು.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ಸ್ಪಾಗೆ ಸಂಬಂಧಿಸಿದ ಮೊದಲ ಪ್ರಕರಣವನ್ನು 2018 ರಲ್ಲಿ ಕಂಡುಹಿಡಿಯಲಾಯಿತು. ಈ ಬಗ್ಗೆ ನ್ಯೂ ಮೆಕ್ಸಿಕೋ ಆರೋಗ್ಯ ಇಲಾಖೆಯು (Mexico health department), ಫೇಶಿಯಲ್‌ಗಾಗಿ ಚುಚ್ಚುಮದ್ದು ಪಡೆದ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸುವಂತೆ ಸೂಚಿಸಿತು.

ಹಾಗೆ ಪರೀಕ್ಷೆ ಮಾಡಿಸಿದವರಲ್ಲಿ ಕನಿಷ್ಠ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಯಿತು. ಈ ಮೂಲಕ ಎಚ್‌ಐವಿಗೆ ಅವರು ಪಡೆದ ಫೇಶಿಯಲ್ ಕಾರಣ ಎಂಬುದು ದೃಢಪಟ್ಟಿತ್ತು (confirm) ಎಂದು ವರದಿಯಿಂದ ತಿಳಿದು ಬಂದಿದೆ.

ವ್ಯಾಂಪೈರ್ ಫೇಶಿಯಲ್ ಎಂದರೇನು ಗೊತ್ತಾ.?
ನ್ಯೂ ಮೆಕ್ಸಿಕೋ ಸ್ಪಾದಲ್ಲಿ ವ್ಯಾಂಪೈರ್ ಫೇಶಿಯಲ್ ಅನ್ನು ಫೇಸ್‌ಲಿಫ್ಟ್‌ಗಾಗಿ ಮಾಡಿಸಲಾಗುತ್ತದೆ. ಇದು ಕಮ್ಮಿ ಬೆಲೆ (Shortage price), ಹೆಚ್ಚು ಅಡ್ಡ ಪರಿಣಾಮಗಳಿಲ್ಲದ ಕ್ರಮ ಎಂದು ನಂಬಿಸಲಾಗಿದೆ. ಇದಕ್ಕಾಗಿ ವ್ಯಕ್ತಿಯ ರಕ್ತವನ್ನು ಅವರ ತೋಳಿನಿಂದ ತೆಗೆದು ಪ್ಲೇಟ್‌ಲೆಟ್‌ಗಳನ್ನು ಬೇರ್ಪಡಿಸಲಾಗುತ್ತದೆ.

ಬಳಿಕ ಮೈಕ್ರೊನೀಡಲ್ಸ್ ಬಳಸಿ ರೋಗಿಯ ಮುಖಕ್ಕೆ ಆ ರಕ್ತ ಇಂಜೆಕ್ಟ್ ಮಾಡಲಾಗುತ್ತದೆ. ಕೈಗೆಟುಕುವ ಬೆಲೆಯಿದ್ದರೂ, ಈ ಪ್ರಕ್ರಿಯೆಯು ಅನೈರ್ಮಲ್ಯ ಪರಿಸ್ಥಿತಿಗಳಲ್ಲಿ (In unsanitary conditions) ಮಾಡಿದರೆ ಗಂಭೀರವಾದ ಆರೋಗ್ಯದ ಅಪಾಯವನ್ನು ಉಂಟು ಮಾಡಬಹುದು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸಿದೆ.

ಇದನ್ನು ಓದಿ : ಗ್ರಾ. ಪಂ. ಗ್ರಂಥಾಲಯಗಳಿಗೆ ನೇಮಕಾತಿ : PUC ಪಾಸಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು ; ನಾಳೆಯೇ (ದಿ.24) ಕೊನೆಯ ದಿನ.!

ನಾನ್ ಸ್ಟೆರೈಲ್ ಕಾಸ್ಮೆಟಿಕ್ ಇಂಜೆಕ್ಷನ್ ಮೂಲಕ ಎಚ್‌ಐವಿ ಹರಡಿರುವುದು ಮೊದಲ ಪ್ರಕರಣ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಇದು ಪತ್ತೆಯಾದ ಬಳಿಕ ಸ್ಪಾ ಮುಚ್ಚಲಾಗಿದೆ. ಸ್ಪಾನ ಮಾಜಿ ಕ್ಲೈಂಟ್ ಒಬ್ಬರಲ್ಲಿ ಕಳೆದ ವರ್ಷ ವೈರಸ್‌ ಪತ್ತೆಯಾಗಿದ್ದು, ಈ ಸಂಬಂಧ ತನಿಖೆಗೆ ಮತ್ತೆ ಮರುಜೀವ ಬಂದಿದೆ ಎಂದು ವರದಿಯಾಗಿದೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು “ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img