Wednesday, May 22, 2024
spot_img
spot_img
spot_img
spot_img
spot_img
spot_img

Belagavi : ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂ*ದೆ*ಬಿ*ಟ್ಟ ಪಾಪಿ.!

spot_img

ಜನಸ್ಪಂದನ ನ್ಯೂಸ್, ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಬುರ್ಲಟ್ಟಿ ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ಮುಗ್ಧ ಮಗುವೊಂದು ಮೃ*ತಪ*ಟ್ಟ ಘಟನೆ ನಡೆದಿದೆ.

ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ (3) ಮೃತ ದುರ್ದೈವಿಯಾಗಿದ್ದು, ಜೋತಿಭಾ ತುಕಾರಾಮ ಬಾಬಾಬರ ಕೊ *ಲೆ ಆರೋಪಿ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಗ್ರಾ. ಪಂ. ಗ್ರಂಥಾಲಯಗಳಿಗೆ ನೇಮಕಾತಿ : PUC ಪಾಸಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು ; ನಾಳೆಯೇ (ದಿ.24) ಕೊನೆಯ ದಿನ.!

ಎರಡು ಕುಟುಂಬಗಳ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆದಿದೆ. ಈ ವೇಳೆ ಗಲಾಟೆ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂ*ದಿ*ದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ಸದ್ಯ ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು (investigation) ನಡೆಸುತ್ತಿದ್ದಾರೆ.

spot_img
spot_img
spot_img
- Advertisment -spot_img