ಜನಸ್ಪಂದನ ನ್ಯೂಸ್, ಜಾಜ್‌ಪುರ (ಒಡಿಶಾ) : ಒಡಿಶಾ ರಾಜ್ಯದ ಜಾಜ್‌ಪುರ ಜಿಲ್ಲೆಯಲ್ಲಿ ಭಯಾನಕ ಘಟನೆ ನಡೆದಿದೆ. ನದಿ ತೀರದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯೊಬ್ಬಳನ್ನು ದೈತ್ಯಾಕಾರದ ಮೊಸಳೆ (Crocodile) ಯೊಂದು ಎಳೆದೊಯ್ದ ಘಟನೆ ಸೋಮವಾರ (ಅಕ್ಟೋಬರ್ 6) ಸಂಜೆ ನಡೆದಿದೆ.
ಈ ಘಟನೆ ಸ್ಥಳೀಯರ ಕಣ್ಣೆದುರೇ ನಡೆದಿದ್ದು, ಅದರ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮೊಸಳೆ (Crocodile) ದಾಳಿಗೆ ಒಳಗಾದ ಮಹಿಳೆಯನ್ನು ಮೀನಾ ಮಹಾಲ (55) ಎಂದು ಗುರುತಿಸಲಾಗಿದೆ. ಅವರು ದಿನನಿತ್ಯದ ಕೆಲಸ ಮುಗಿಸಿ ನದಿಯ ತೀರದಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಈ ಭೀಕರ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಲ್ಲಿದೇ ನೋಡಿ “Kantara : Chapter 1” ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!
ರಕ್ಷಣೆಗಾಗಿ ಕೂಗಿದರೂ ಅಸಹಾಯಕರಾದ ಸ್ಥಳೀಯರು :
ಮಹಿಳೆಯ ಮೇಲೆ ಮೊಸಳೆ ದಾಳಿ ನಡೆಸಿದ ಕ್ಷಣದಲ್ಲೇ ಅವರು ರಕ್ಷಣೆಗೆ ಕೂಗಿಕೊಂಡಿದ್ದಾರೆ. ಮಹಿಳೆಯ ಅಳು ಕೇಳಿ ಸ್ಥಳೀಯರು ನದಿ ತೀರಕ್ಕೆ ಧಾವಿಸಿದರೂ, ಮೊಸಳೆ (Crocodile) ಈಗಾಗಲೇ ಅವರನ್ನು ಎಳೆದೊಯ್ದಿರುವುದು ಕಂಡು ಬಂದಿದೆ.
ಅಸಹಾಯಕರಾದ ಸ್ಥಳೀಯರು ಘಟನೆಯನ್ನು ಕಣ್ಣಾರೆ ನೋಡಿದರೂ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಕೆಲವರು ಆತಂಕದ ನಡುವೆಯೇ ಈ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ.
ನದಿತೀರದಲ್ಲಿ ಭೀತಿಯ ವಾತಾವರಣ :
ಘಟನೆಯ ನಂತರ ಸ್ಥಳೀಯ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ಹಲವರು ಈಗ ನದಿ ತೀರಕ್ಕೆ ಹೋಗಲು ಹೆದರಿಕೆ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ನದಿಯಲ್ಲಿ ಮೊಸಳೆಗಳು (Crocodile) ಮೊದಲು ಸಹ ಕಂಡುಬಂದಿದ್ದು, ಕೆಲ ಕಾಲದ ಹಿಂದೆ ಇದೇ ಪ್ರದೇಶದಲ್ಲಿ ಒಂದು ಮೊಸಳೆ ಮೇಕೆಯೊಂದನ್ನು ಎಳೆದೊಯ್ದ ಘಟನೆ ನಡೆದಿತ್ತು ಎಂದು.
River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!
ಅರಣ್ಯ ಇಲಾಖೆಯಿಂದ ಎಚ್ಚರಿಕೆ :
ಘಟನೆಯ ಬಗ್ಗೆ ತಿಳಿದು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದು, “ಮೊಸಳೆ (Crocodile) ಸೆರೆ ಹಿಡಿಯುವವರೆಗೂ ಯಾರೂ ನದಿ ತೀರಕ್ಕೆ ಹೋಗಬಾರದು” ಎಂದು ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಮೊಸಳೆಯನ್ನು ಹಿಡಿಯಲು ಬಲೆಯನ್ನೂ ಅಳವಡಿಸಿದ್ದು, ಸ್ಥಳೀಯರಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ವಿನಂತಿ ಮಾಡಿದ್ದಾರೆ.
ಹುಡುಕಾಟ ಕಾರ್ಯಾಚರಣೆ ಮುಂದುವರಿದಿದೆ :
ಅರಣ್ಯ ಮತ್ತು ರಕ್ಷಣಾ ಸಿಬ್ಬಂದಿಯವರು ಮಹಿಳೆಯ ಶೋಧಕಾರ್ಯ ಮುಂದುವರಿಸಿದ್ದಾರೆ. ಮೊಸಳೆಯ (Crocodile) ಚಲನವಲನವನ್ನು ಪತ್ತೆಹಚ್ಚಲು ನದಿ ಪ್ರದೇಶದಲ್ಲಿ ಸಿಸಿಟಿವಿ ಮತ್ತು ಡ್ರೋನ್‌ಗಳ ಸಹಾಯವನ್ನು ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದ್ದು, ನದಿ ತೀರದ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.
ಮಹಿಳೆಯನ್ನು ಎಳೆದೊಯ್ದ ಮೊಸಳೆ (Crocodile) ಯ ವಿಡಿಯೋ :
ମହିଳାଙ୍କ ହାତ ଧରି ଟାଣି ନେଲା କୁମ୍ଭୀର..
ଆଜି ଯାଜପୁର ବିଞ୍ଝାରପୁରରେ ଘଟିଛି ଏଭଳି ଅଘଟଣ..@IPR_Odisha @OdishaFS @odisha_police pic.twitter.com/m8ZoXSQWUU— Biswajit Pallai ( 🇮🇳🇮🇳🇮🇳) (@PallaiBiswajit) October 6, 2025
Girl : ನಡು ರಸ್ತೆಯಲ್ಲಿಯೇ 14 ವರ್ಷದ ಬಾಲಕಿಯ ಕುತ್ತಿಗೆ ಹಿಚುಕಿದ ಕಿರಾತಕ.!
ಜನಸ್ಪಂದನ ನ್ಯೂಸ್, ಮೀರತ್ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ನಡೆದ ಒಂದು ಶಾಕಿಂಗ್ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಕ್ಟೋಬರ್ 3 ರಂದು ನಡು ಬೀದಿಯಲ್ಲೇ ಯುವಕನೊಬ್ಬ ಅಪ್ರಾಪ್ತ ಬಾಲಕಿಯ (Girl) ಕುತ್ತಿಗೆ ಹಿಡಿದು ಕಿರುಕುಳ ನೀಡಿದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಮೀರತ್ ಪೊಲೀಸರು ತಕ್ಷಣ ಸ್ಪಂದಿಸಿದ್ದು, ಆರೋಪಿ ಜಾನು ಅಲಿಯಾಸ್ ಜಾನೆ ಆಲಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
King :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಬಂದಿಳಿದ ಆಫ್ರಿಕನ್ ರಾಜ.!
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗಾಜಿಯಾಬಾದ್‌ನಿಂದ ತನ್ನ ಅಜ್ಜಿಯ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ 14 ವರ್ಷದ ಬಾಲಕಿ (Girl) ಯೊಂದಿಗೆ ಆರೋಪಿಯು ವಾಗ್ವಾದ ನಡೆಸಿದ್ದಾನೆ. ಆ ವೇಳೆ ಆತ ಬಾಲಕಿಯ ವಿಡಿಯೋವನ್ನು ಫೋನ್‌ನಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿ ಗ್ರಾಮದಲ್ಲಿನ ಇತರರಿಗೆ ಹಂಚಿದ್ದಾನೆ ಎಂಬ ಆರೋಪವಿದೆ.
ಆತ ಎದುರಾದಾಗ ತನ್ನ ಫೋನ್ ಹಿಂತಿರುಗಿಸುವಂತೆ ಒತ್ತಾಯಿಸಿದ್ದಳು. ಆಗ ಕೋಪಗೊಂಡ ಆರೋಪಿ ಆಕೆಯ (Girl) ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!
ಇನ್ನು ಬಾಲಕಿಯ (Girl) ಚೀಕಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದಂತೆಯೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶಹಜಹಾನ್‌ಪುರ ಕಾಲುವೆ ರಸ್ತೆಯ ಬಳಿ ಭಾನುವಾರ ಬಂಧಿಸಿದ್ದಾರೆ.
ಪೊಲೀಸರು ಬಂಧಿಸಲು ತೆರಳಿದಾಗ “ಓಡಿಹೋಗಲು ಪ್ರಯತ್ನಿಸುತ್ತಿದ್ದ ಆರೋಪಿ ಹೊಂಡಕ್ಕೆ ಬಿದ್ದು ಬಲಗೈ ಮುರಿದುಕೊಂಡನು. ಅವನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಆರೋಪಿ ವಿರುದ್ಧ ಬಾಲಕಿಯ (Girl) ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಕ್ಸೊ ಕಾಯ್ದೆ (POCSO Act) ಮತ್ತು ಭಾರತೀಯ ದಂಡ ಸಂಹಿತೆಯ (IPC) ಅನ್ವಯ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ವಿಧಿವಿಜ್ಞಾನ ಮತ್ತು ಡಿಜಿಟಲ್ ಪರೀಕ್ಷೆಗಳು ನಡೆಯುತ್ತಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳೀಯ ಜನರಲ್ಲಿ ಆತಂಕ ಉಂಟಾಗಿದ್ದು, ಪೊಲೀಸರು ಬಾಲಕಿಯ (Girl) ಸುರಕ್ಷತೆ ಹಾಗೂ ತನಿಖೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಡಿಯೋ :
मेरठ: 14 साल की लड़की पर सड़क पर हमला, दबंग बना कानून! CCTV में कैद! #मेरठ #CCTV pic.twitter.com/qIMB2aardv
— Arun Kumar (@ArunKum96527953) October 5, 2025