Tuesday, October 14, 2025

Janaspandhan News

HomeGeneral NewsDivorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
spot_img
spot_img
spot_img

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

- Advertisement -

ಜನಸ್ಪಂದನ ನ್ಯೂಸ್‌, ಕೊಡಗು : ಕೊಡಗು ಜಿಲ್ಲೆಯಲ್ಲಿ ನಡೆದ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಂಡನು ತನ್ನ ಪತ್ನಿಗೆ ವಿಚ್ಛೇದನ (Divorce) ನೀಡಿದ ಸಂತೋಷವನ್ನು ಅಸಾಧಾರಣ ರೀತಿಯಲ್ಲಿ ಆಚರಿಸಿದ್ದು, ಆ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಹಾಲಿನ ಸ್ನಾನ :

ಮೆರವಣಿಗೆ ಶೈಲಿಯಲ್ಲಿ ಟ್ರ್ಯಾಕ್ಟರ್ ಮೇಲೆ ನಿಂತುಕೊಂಡಿದ್ದ ಆ ವ್ಯಕ್ತಿ, ಟ್ರಾಲಿಯಲ್ಲಿ ಇರಿಸಿದ ಹಾಲಿನ ಬ್ಯಾರೆಲ್‌ನಲ್ಲಿದ್ದ ಹಾಲನ್ನು ತಾನು ಸ್ನಾನ ಮಾಡಿದಂತೆಯೇ ಸುರಿದುಕೊಂಡಿದ್ದಾನೆ. ಸೌಂಡ್ ಸಿಸ್ಟಂನಲ್ಲಿ ಜೋರಾಗಿ ಹಾಡುಗಳನ್ನು ಹಾಕಿಸಿಕೊಂಡು ಡ್ಯಾನ್ಸ್ ಮಾಡುತ್ತಾ, “ಪತ್ನಿಗೆ ವಿಚ್ಛೇದನ (Divorce) ಕೊಟ್ಟಿದ್ದಕ್ಕೆ ಹಾಲಿನ ಸ್ನಾನ ಮಾಡುತ್ತಿದ್ದೇನೆ” ಎಂಬ ಪೋಸ್ಟರ್ ಕೂಡ ಪ್ರದರ್ಶಿಸಿದ್ದಾನೆ.

ವರ್ಷಕ್ಕೊಮ್ಮೆ ಈ Fruit ತಿನ್ನಿ ಸಾಕು ; ವಯಸ್ಸು 60 ದಾಟಿದರೂ ಕನ್ನಡಕ ಬರಲ್ಲ.!
ವಿಚ್ಛೇದನ (Divorce) ಸಂಭ್ರಮ – ಹೊಸ ಟ್ರೆಂಡ್? :

ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ವಿಚ್ಛೇದನ (Divorce) ಪಡೆದುಕೊಂಡ ನಂತರ ವಿಚಿತ್ರ ಸಂಭ್ರಮಾಚರಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ಆರಂಭವಾದ ಈ ವಿಚಿತ್ರ ಪದ್ದತಿ ಇದೀಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಕೊಡಗಿನಲ್ಲಿ ನಡೆದ ಈ ಘಟನೆ ಕೂಡ ಅದಕ್ಕೆ ಹೊಸ ಸೇರ್ಪಡೆ.

ಸಾಮಾಜಿಕ ಚರ್ಚೆಗೆ ಕಾರಣ :

ಹಿರಿಯರು “ಗಂಡ-ಹೆಂಡತಿಯ ಜಗಳವು ಉಂಡು ಮಲಗೋವರೆಗೂ” ಎಂಬ ನುಡಿಯನ್ನು ಹೇಳುತ್ತಿದ್ದರು. ಆದರೆ ಈಗಿನ ತಲೆಮಾರಿನಲ್ಲಿ ಜಗಳಗಳು ಹೆಚ್ಚಾಗಿ ವಿಚ್ಛೇದನದವರೆಗೆ (Divorce) ಹೋಗುತ್ತಿರುವುದು ಕಂಡುಬರುತ್ತಿದೆ. ಇಂತಹ ಘಟನೆಗಳು ಕುಟುಂಬ ಪದ್ದತಿಯ ಬದಲಾವಣೆಯನ್ನು ತೋರಿಸುತ್ತವೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!
ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಹರಿದಾಡುತ್ತಿದ್ದಂತೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಕೆಲವರು “ಸಂಭ್ರಮವನ್ನು ಇಷ್ಟು ವಿಚಿತ್ರವಾಗಿ ಆಚರಿಸುವುದು ಅಗತ್ಯವಿದೆಯೆ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಕೆಲವರು ಅದನ್ನು ಹಾಸ್ಯವಾಗಿ ಸ್ವೀಕರಿಸಿದ್ದಾರೆ.

ವಿಚ್ಛೇದನ (Divorce) ಪಡೆದ ಪತಿಯಿಂದ ಸಂಭ್ರಮಿಸೋ ವಿಡಿಯೋ :


ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

Police

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ (Police) ಮೇಲೆಯೇ ಗಂಭೀರ ಆರೋಪ ಕೇಳಿಬಂದಿರುವ ಘಟನೆ ತಮಿಳುನಾಡಿನ ತಿರುವಣಮಲೈ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹಣ್ಣು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 25 ವರ್ಷದ ಯುವತಿಯೊಬ್ಬಳ ಮೇಲೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಮೇಲೆ ಅ*ತ್ಯಾ*ಚಾರ ಆರೋಪ ಹೊರಬಿದ್ದಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಹಣ್ಣು ಮಾರಾಟ ಮಾಡುತ್ತಿದ್ದ ಯುವತಿ :

ಮೂಲತಃ ಆಂಧ್ರಪ್ರದೇಶದವರಾದ ಸಂತ್ರಸ್ತ ಯುವತಿ ತನ್ನ ತಾಯಿಯ ಜೊತೆ ತಮಿಳುನಾಡಿನ ತಿರುವಣಮಲೈಗೆ ಹಣ್ಣಿನ ಮಾರಾಟಕ್ಕಾಗಿ ಬಂದಿದ್ದರು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಕಣ್ಣಿಗೆ ಬಿದ್ದಿದ್ದು, ಆಗ ಅವರು ಬಲವಂತವಾಗಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬುದು ದೂರು ಕೇಳಿ ಬಂದಿದೆ.

25 ವರ್ಷದ ಯುವತಿಯ ಮೇಲಿನ ಅ*ತ್ಯಾ*ಚಾರ ವಿಚಾರ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಾದ ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ಎಂಬುವರನ್ನು ಬಂಧಿಸಿದ್ದಾರೆ.

“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!
ಪೊಲೀಸರು ಅಮಾನತು – ಕಠಿಣ ಕ್ರಮದ ಭರವಸೆ :

ಘಟನೆಯ ತೀವ್ರತೆಯನ್ನು ಮನಗಂಡ ಪೊಲೀಸ್ (Police) ಇಲಾಖೆ, ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿದ್ದು, ಕಾನೂನು ಪ್ರಕಾರ ಗರಿಷ್ಠ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಜಕೀಯ ವಲಯದಿಂದ ಖಂಡನೆ :

ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ರಾಜಕೀಯ ನಾಯಕರೂ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪಾಡಿ ಕೆ. ಪಳನಿಸ್ವಾಮಿ, “ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ (Police) ಇಂತಹ ಘಟನೆ ನಡೆಸಿರುವುದು ತಮಿಳುನಾಡಿನ ಕಾನೂನು-ಸುವ್ಯವಸ್ಥೆಗೆ ಕಪ್ಪು ಕಲೆ. ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ” ಎಂದು ಹೇಳಿದರು.

“ಬಕೆಟ್, ಮಗ್ ಕೊಳಕಾಗಿವೆಯೇ? ಕಡಿಮೆ ಖರ್ಚಿನಲ್ಲಿ ಕೆಲವೇ ನಿಮಿಷಗಳಲ್ಲಿ ಹೀಗೆ Clean ಮಾಡಿ.!”
ಜನರಿಂದ ಭಾರಿ ಆಕ್ರೋಶ :

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ವಿರುದ್ಧವಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, “ಜನರ ಭದ್ರತೆಯ ಹೊಣೆ ಹೊತ್ತಿರುವ ಅಧಿಕಾರಿಗಳೇ (Police) ಇಂತಹ ವರ್ತನೆ ತೋರಿದರೆ ಮಹಿಳೆಯರು ಹೇಗೆ ಸುರಕ್ಷಿತರಾಗುತ್ತಾರೆ?” ಎಂಬ ಪ್ರಶ್ನೆ ಎದ್ದಿದೆ. ತಿರುವಣಮಲೈಯಂತಹ ಧಾರ್ಮಿಕ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿರುವುದು ಜನರಲ್ಲಿ ಅಚ್ಚರಿ ಹಾಗೂ ಆತಂಕವನ್ನು ಉಂಟುಮಾಡಿದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments