ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುವ ಪೀಳಿಗೆಯಲ್ಲೊಂದು ಟ್ರೆಂಡ್ ಆಗಿ ಮಾರ್ಪಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗೋ ಹುಚ್ಚು. ಹೆಚ್ಚು ಲೈಕ್ಸ್, ಕಾಮೆಂಟ್ ಹಾಗೂ ಫಾಲೋವರ್ಸ್ ಗಳಿಸಲು ಕೆಲವರು ಅಪಾಯಕಾರಿ ಸಾಹಸಗಳನ್ನು (Dangerous Stunt) ಮಾಡುತ್ತಿದ್ದಾರೆ. ಆದರೆ, ಇಂತಹ ಸಾಹಸಗಳು ಕೆಲವೊಮ್ಮೆ ಪ್ರಾಣಾಪಾಯಕ್ಕೂ ಕಾರಣವಾಗುತ್ತವೆ ಎಂಬುದನ್ನು ನಾವು ಹಲವು ಬಾರಿ ನೋಡಿದ್ದೇವೆ.
ಬಿಜಾಪುರ್‌ನಲ್ಲಿ ಅಪಾಯಕಾರಿ ಸಾಹಸ :
ಇತ್ತೀಚೆಗೆ ಛತ್ತೀಸ್‌ಗಢದ ಬಿಜಾಪುರ್ (Bijapur, Chhattisgarh) ನಲ್ಲಿ ನಡೆದ ಘಟನೆಯೊಂದು ಇದೀಗ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ. ಐವರು ಯುವಕರು ಒಂದೇ ಸ್ಕೂಟರ್‌ನಲ್ಲಿ ಕುಳಿತುಕೊಂಡು ಹೈವೇ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ (Stunt) ಮಾಡಿದ್ದಾರೆ. ಈ ದೃಶ್ಯ ಪಾದಚಾರಿಯೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ಸೆರೆಯಾಗಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ.
ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಸ್ಕೂಟರ್ ಮೇಲೆ ಐವರು ಯುವಕರು :
ವಿಡಿಯೋದಲ್ಲಿ ನಾಲ್ವರು ಯುವಕರು ಒಂದೇ ಸ್ಕೂಟರ್‌ನಲ್ಲಿ ಸಾಮಾನ್ಯವಾಗಿ ಕುಳಿತಿರುವುದು, ಇನ್ನೊಬ್ಬನು ಅವರ ಹೆಗಲ ಮೇಲೆಯೇ ಮಲಗಿ ನೇತಾಡುತ್ತಿರುವುದು ಕಾಣಿಸುತ್ತದೆ. ತಮ್ಮ ಸಾಹಸವನ್ನು “ಸ್ಟಂಟ್ (Stunt) ಚೆನ್ನಾಗಿದೆ, ಒಳ್ಳೆಯದಾಗಲಿ” ಎಂದು ಪ್ರಶಂಸಿಸಿದ ಪಾದಚಾರಿಗೆ, ಯುವಕರು ಧನ್ಯವಾದ ಹೇಳುತ್ತಿರುವುದೂ ಸ್ಪಷ್ಟವಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ :
ಸೆಪ್ಟೆಂಬರ್ 29 ರಂದು ಎಕ್ಸ್ ಪ್ಲಾಟ್‌ಫಾರ್ಮ್ (ಹಳೆಯ Twitter) ನಲ್ಲಿ ಹಂಚಲಾದ ಈ ವಿಡಿಯೋ ಈಗಾಗಲೇ 8 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಆದರೆ, ಇದನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಕೆಲವರು “ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
- ಮತ್ತೊಬ್ಬರು “ಇಂತಹ ಸಾಹಸಗಳಲ್ಲಿ ಧರ್ಮವನ್ನು ಎಳೆಯುವುದು ತಪ್ಪು” ಎಂದು ಪ್ರತಿಕ್ರಿಯಿಸಿದ್ದಾರೆ.
- ಇನ್ನೊಬ್ಬರು “ಯುವಕರು ಫೇಮಸ್ ಆಗೋ ಹುಚ್ಚಿನಲ್ಲಿ ತಮ್ಮ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವರ್ಷಕ್ಕೊಮ್ಮೆ ಈ Fruit ತಿನ್ನಿ ಸಾಕು ; ವಯಸ್ಸು 60 ದಾಟಿದರೂ ಕನ್ನಡಕ ಬರಲ್ಲ.!
ಅಪಾಯದ ಜೊತೆ ಆಟ :
ವೀಡಿಯೊ ವೈರಲ್ ಆದ ಬಳಿಕ, “ಇಂತಹ ಅಪಾಯಕಾರಿ ಸ್ಟಂಟ್ (Stunt) ಗಳನ್ನು ತಡೆಯದಿದ್ದರೆ ಇನ್ನಷ್ಟು ಯುವಕರು ಪ್ರಾಣಕ್ಕೆ ಹಾನಿ ಮಾಡಿಕೊಂಡರೂ ಅಚ್ಚರಿಯಿಲ್ಲ” ಎಂದು ಹಲವರು ಎಚ್ಚರಿಸಿದ್ದಾರೆ. ತಕ್ಷಣವೇ ಪೊಲೀಸರ ಹಸ್ತಕ್ಷೇಪ ಅಗತ್ಯವಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.
ಹೈವೇಯಲ್ಲಿ ಯುವಕರ ಅಪಾಯಕಾರಿ Stunt ವಿಡಿಯೋ :
शहर के नेशनल हाईवे पर पुराने पेट्रोल पंप के पास वायरल वीडियो में पांच युवक स्कूटी पर क्षमता से अधिक सवार होकर तेज रफ्तार में स्टंट करते दिख रहे हैं। यह खतरनाक व्यवहार आम लोगों की जान के लिए जोखिम है आप से अनुरोध है तुरंत जांच और कार्यवाही की जाए। @BijapurPolice @CG_Police pic.twitter.com/5OHIstO6eK
— Ilyas (@Ilyas_SK_31) September 29, 2025
Gun : “ಗನ್” ಪರಿಶೀಲನೆಯ ವೇಳೆ ಸಂಭವಿಸಿದ ಆಕಸ್ಮಿಕ ಘಟನೆ ; ಸಿಸಿಟಿವಿ ದೃಶ್ಯ ವೈರಲ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಒಂದು ವಿಡಿಯೋ ಜನರನ್ನು ಬೆಚ್ಚಿಬೀಳಿಸಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯವು ಬಂದೂಕಿ (Gun) ನ ಅಜಾಗರೂಕ ಬಳಕೆಯ ಪರಿಣಾಮವನ್ನು ತೀವ್ರವಾಗಿ ತೋರಿಸುತ್ತಿದೆ.
ಬಂದೂಕು ಪರಿಶೀಲನೆ ವೇಳೆ ಅಪಘಾತ :
ವಿಡಿಯೋದಲ್ಲಿ ಅಂಗಡಿಯೊಳಗೆ ಕುಳಿತಿದ್ದ ವ್ಯಕ್ತಿಯೊಬ್ಬರು ಬಂದೂಕನ್ನು ಹಿಡಿದು ಪರೀಕ್ಷಿಸಲು ಯತ್ನಿಸುತ್ತಾರೆ. ಪ್ರಾರಂಭದಲ್ಲಿ ಬಂದೂಕು (Gun) ಸರಿಯಾಗಿ ಕೆಲಸ ಮಾಡದ ಕಾರಣ ಅವರು ಅದನ್ನು ಮತ್ತೊಮ್ಮೆ ಪರಿಶೀಲಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಸಿಡಿದು, ಗಂಭೀರ ಅಪಘಾತ ಸಂಭವಿಸುತ್ತದೆ.
SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ :
ಘಟನೆಯ ಇಡೀ ಪ್ರಕ್ರಿಯೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ವ್ಯಕ್ತಿಯು ಬಂದೂಕ (Gun) ನ್ನು ಎತ್ತಿಕೊಂಡು ನೋಡುತ್ತಿದ್ದ ವೇಳೆ ಅಪಘಾತ ಸಂಭವಿಸಿದ ಕ್ಷಣವು ವಿಡಿಯೋದಲ್ಲಿ ಪತ್ತೆಯಾಗಿದೆ.
ಜನರಲ್ಲಿ ಆತಂಕ ಮತ್ತು ಚರ್ಚೆ :
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಅನೇಕರು ಇದನ್ನು ಎಚ್ಚರಿಕೆಯ ಪಾಠವಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. “ಯಾವುದೇ ಆಯುಧವನ್ನು ಅಜಾಗರೂಕವಾಗಿ ಬಳಸುವುದು ಅಪಾಯಕಾರಿ, ಬಂದೂಕುಗಳನ್ನು ಬಳಸುವಾಗ ತೀವ್ರ ಎಚ್ಚರಿಕೆ ಅಗತ್ಯ” ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಸುರಕ್ಷತಾ ಸಂದೇಶ :
ತಜ್ಞರು ಸಹ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಬಂದೂಕು (Gun) ಅಥವಾ ಇತರ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ. ಆಯುಧಗಳನ್ನು ಪರೀಕ್ಷಿಸುವಾಗ ನಿಯಮ ಪಾಲನೆ ಮಾಡದಿದ್ದರೆ ಅಪಾಯ ಉಂಟಾಗಬಹುದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.
ಗನ್ (Gun) ಪರಿಶೀಲನೆಯ ವೇಳೆ ಸಿಡಿದ ಗುಂಡಿನ ವಿಡಿಯೋ :
हल्की सी चूंक और जान चली गई 👇
इसीलिए कभी भी किसी हथियार से खेलना नहीं चाहिए, मज़ाक और खेल में भी न तो अपनी तरफ़ करना चाहिए और न ही किसी वेयक्ति की तरफ़।
क्योंकि ज़िंदगी जाने के बाद, वापस नहीं आती। pic.twitter.com/CjqvuSmDv4
— Md Ashfaque Alam (@ashfaque80035) September 29, 2025







