Sunday, September 8, 2024
spot_img
spot_img
spot_img
spot_img
spot_img
spot_img
spot_img

LPG : ಇಷ್ಟು ದಿನಗಳಲ್ಲಿ ಈ ಕೆಲಸ ಮಾಡದಿದ್ರೆ ನಿಮಗೆ ಸಿಗೋದಿಲ್ವಂತೆ ಸಿಲಿಂಡರ್ ಸಬ್ಸಿಡಿ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಹಲೋ, ನೀವು LPG ಬಳಕೆದಾರರಾಗಿದ್ದೀರಾ.? ಹಾಗಿದ್ರೆ ಈ ಸುದ್ದಿಯನ್ನು ಗಮನದಲ್ಲಿಟ್ಟು ಓದಿ. LPG ಬಳಕೆದಾರರು KYC ಪೂರ್ಣಗೊಳಿಸಲು ಹಲವು ದಿನಗಳಿಂದ ಸೂಚನೆ ನೀಡಲಾಗುತ್ತಿದೆ.

ಈಗಾಗಲೇ ಕೇಂದ್ರ ಸರ್ಕಾರವು (central government) ಇಕೆವೈಸಿ ಕಡ್ಡಾಯ ಎಂದು ಘೋಷಿಸಿದೆ. ಹೀಗಾಗಿ ಇಂಡಿಯನ್, ಎಚ್‌ಪಿ, ಭಾರತ್ ಗ್ಯಾಸ್‌ನಂತಹ ಅನೇಕ ಇಂಧನ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. eKYC ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬುದು ಸ್ಪಷ್ಟವಾಗಿದೆ.

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ ಯಾರಾದರೂ KYC ಮಾಡದಿದ್ದರೆ, ಚಿಂತಿಸಬೇಕಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೇ 31ರೊಳಗೆ ಕೆವೈಸಿ ಮಾಡದಿದ್ದರೆ ಸಬ್ಸಿಡಿ (subsidy) ಸಿಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿವೆ. ಆದರೆ ಇದೆಲ್ಲಾ ಸುಳ್ಳು ಸುದ್ದಿಯಾಗಿದೆ ಎನ್ನಲಾಗಿದೆ.

ಇ-ಕೆವೈಸಿ ಯಾರಾದರೂ ಮಾಡದಿದ್ದರೆ ಚಿಂತಿಸಬೇಕಾಗಿಲ್ಲ, ಭಯಪಡುವ ಅಗತ್ಯವಿಲ್ಲ. ವರದಿಗಳ ಪ್ರಕಾರ, ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗದವರಿಗೆ ಸಬ್ಸಿಡಿ ಈಗ ನಿಲ್ಲುವುದಿಲ್ಲ.

ಏಕೆಂದರೆ ಕೆವೈಸಿ ಪೂರ್ಣಗೊಳಿಸಲು ಯಾವುದೆ ಗಡುವು (the deadline) ಇಲ್ಲ. ಸಿಲಿಂಡರ್ ಗ್ರಾಹಕರ ಮನೆಗಳಿಗೆ ತಲುಪಿಸುವಾಗ ಡೆಲಿವರಿ ಸಿಬ್ಬಂದಿ EKYC ಆಧಾರ್ ಪರಿಶೀಲಿಸಿ, ಅವರೇ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಾರೆ

ಎಲ್‌ಪಿಜಿ ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕವಿಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ತಿಳಿಸಿವೆ. ಇದಲ್ಲದೆ, ಇಂಡೇನ್ ಆಯಿಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆಧಾರ್ ಅನ್ನು ಪರಿಶೀಲಿಸಿ EKYC ಅನ್ನು ಸುಲಭವಾಗಿ ಮಾಡಬಹುದು. ಇಂಡೇನ್ ಗ್ಯಾಸ್ ಹೊಂದಿರುವವರು ಈ ಸೌಲಭ್ಯವನ್ನು ಪಡೆಯಬಹುದು.

ಗ್ರಾಹಕರು ಗ್ಯಾಸ್ ಡೀಲರ್‌ ಹತ್ತಿರ ಹೋಗಿ ಎಲ್‌ಪಿಜಿ ಸಿಲಿಂಡರ್‌ಗಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು.

ಇದನ್ನು ಓದಿ : Lokasabha election : ಮತದಾನದ ವೇಳೆ ಕಲ್ಲಿನಿಂದ ಹೊಡೆದ ಜನರು ; ಎದ್ದು ಬಿದ್ದು ಓಡಿದ ಅಭ್ಯರ್ಥಿ.!

ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಇ-ಕೆವೈಸಿಗಾಗಿ, ಗ್ರಾಹಕರು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಲ್ಲಿ ಹೆಸರು ಮತ್ತು ಗ್ರಾಹಕರ ಸಂಖ್ಯೆಯನ್ನು ನೀಡಬೇಕು. ಇದರೊಂದಿಗೆ ಗಂಡ ಅಥವಾ ತಂದೆಯ (husband or father) ಹೆಸರನ್ನೂ ನೀಡಬೇಕು. ವಿಳಾಸ ಪುರಾವೆಯನ್ನೂ ಒದಗಿಸಬೇಕು.

ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲೀಸ್ ಅಗ್ರಿಮೆಂಟ್ ಅಥವಾ ವೋಟರ್ ಐಡಿ ಕಾರ್ಡ್, ರೇಷನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಜೆರಾಕ್ಸ್‌ನಂತಹ ದಾಖಲೆಗಳೊಂದಿಗೆ ವಿಳಾಸದ ಪುರಾವೆಯಾಗಿ ಸಲ್ಲಿಸಬಹುದಾಗಿದೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img