Friday, June 14, 2024
spot_img
spot_img
spot_img
spot_img
spot_img
spot_img

Comedy ಶೋನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಕಾಮುಕ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿನಿಮಾ, ಸೀರಿಯಲ್’ಗಳಲ್ಲಿ ಅವಕಾಶಕ್ಕಾಗಿ ಅಲೆಯುವ ಯುವ ಪ್ರತಿಭೆಗಳು (Young talents) ಅವಸರದ ನಿರ್ಧಾರ ತೆಗೆದುಕೊಂಡು ಜೀವನವನ್ನೇ ಹಾಳು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ.

ಅಷ್ಟೇ ಅಲ್ಲದೇ ಶೋಗಳಲ್ಲಿ (Show) ಅವಕಾಶ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಇದನ್ನು ಓದಿ : ತಾಳಿ ಕಟ್ಟಿದ ಬಳಿಕ ವಧುವಿಗೆ ಮುತ್ತಿಟ್ಟ ವರ : ರಣರಂಗವಾಯ್ತು ಮದುವೆ ಮಂಟಪ.!

ಹಾಸ್ಯನಟ ಕಪಿಲ್ ಶರ್ಮಾ ಅವರ ಕಪಿಲ್ ಶೋನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ (rape) ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಕಾಸ್ಟಿಂಗ್ ಏಜೆಂಟ್ ಆನಂದ್ ಎಂಬಾತ ಸಂತ್ರಸ್ತ ಯುವತಿಗೆ 20 ದಿನಗಳ ಹಿಂದಷ್ಟೇ ಆನ್​ಲೈನ್​ನಲ್ಲಿ ಪರಿಚಯವಾಗಿದ್ದನಂತೆ. ಬಳಿಕ ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ನಟಿಸುವ ಆಸೆ ಹೊಂದಿದ್ದ ಈಕೆಗೆ ಆನಂದ್​ ಬಣ್ಣ ಬಣ್ಣದ ಕಾಗೆ ಹಾರಿಸಿ ಮಾತಿನಲ್ಲೇ ಮರಳು ಮಾಡಿದ್ದಾನೆ.

ಅಲ್ಲದೇ ಕಪಿಲ್ ಶರ್ಮಾ ಶೋನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದ. ಒಂದು ದಿನ ಆಡಿಷನ್​​ಗೆಂದು ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಮೇ 20ರಂದು ಮುಂಬೈನಲ್ಲಿ (Mumbai) ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಇದನ್ನು ಓದಿ : Belagavi : ಯುವತಿಯ ಮನೆಯ ಮೇಲೆ ಕಲ್ಲು ತೂರಿ ಹುಚ್ಚಾಟ ಮೆರೆದ ಯುವಕ.!

ಘಟನೆಯ ನಂತರ ಆರೋಪಿ ಆನಂದ್ ಸಿಂಗ್, ಅತ್ಯಾಚಾರದ ಬಗ್ಗೆ ಯಾರಾದ್ರೂ ಮು‌ಂದೆ ಬಾಯ್ಬಿಟ್ರೆ ಕೊಲ್ಲುವುದಾಗಿ ಸಂತ್ರಸ್ತೆಗೆ ಆತ ಬೆದರಿಕೆ (threat) ಕೂಡ ಹಾಕಿದ್ದ. ಬಳಿಕ ಸಂತ್ರಸ್ತೆ ಆತನ ವಿರುದ್ಧ ನಲಸೋಪಾರಾದ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ಐಪಿಸಿ ಸೆಕ್ಷನ್ 376, 323, 504, ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

spot_img
spot_img
- Advertisment -spot_img