Friday, June 14, 2024
spot_img
spot_img
spot_img
spot_img
spot_img
spot_img

Belagavi : ಯುವತಿಯ ಮನೆಯ ಮೇಲೆ ಕಲ್ಲು ತೂರಿ ಹುಚ್ಚಾಟ ಮೆರೆದ ಯುವಕ.!

spot_img

ಜನಸ್ಪಂದನ ನ್ಯೂಸ್, ಬೆಳಗಾವಿ : ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿ ಅವರ ಭೀಕರ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ನೆರೆಯ ಬೆಳಗಾವಿಯಲ್ಲೂ ಸಹಾ ಅದೇ ಮಾದರಿಯ ಪ್ರೇಮ ಪ್ರಕರಣದ ಬೆದರಿಕೆ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ಘಟನೆಯಂತೆ ಬೆಳಗಾವಿಯಲ್ಲಿ ಈ ಯುವಕ ತಾನು ಪ್ರೀತಿಸುತ್ತಿರುವ ಯುವತಿಯನ್ನು ಕೊಲೆ ಮಾಡುವ ಬೆದರಿಕೆಯೊಡ್ಡಿರುವುದು ಇದೀಗ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ.‌

Health : ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಕಿಣಿಯೇ ಗ್ರಾಮದ ತಿಪ್ಪಣ್ಣ ಡೋಕ್ರೆ (27), ಇದೇ ಗ್ರಾಮದ ಯುವತಿ ಮತ್ತು ಅವರ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನೀನು ನನ್ನನ್ನು ಪ್ರೀತಿಸು ಮದುವೆ ಆಗೋಣ ಎಂದು ತಿಪ್ಪಣ್ಣ ಕಳೆದ ಮೂರು ವರ್ಷಗಳಿಂದ ಇನ್ನಿಲ್ಲದಂತೆ ಯುವತಿಯಲ್ಲಿ ಗೋಗೆರೆಯುತ್ತಿದ್ದಾನೆ. ಯುವತಿ ಪ್ರತಿದಿನ ಕಾಲೇಜಿಗೆ ಹೋಗುವಾಗ ಆಕೆಯ ಬೆನ್ನಟ್ಟಿ ಮನವೊಲಿಸುತ್ತಿದ್ದಾನೆ. ಯುವತಿ ಕಿಣಿಯೆದಲ್ಲಿ ವಾಸವಾಗಿದ್ದು ಇದೀಗ ತಿಪ್ಪಣ್ಣನ ಇನ್ನಿಲ್ಲದ ಕಾಟಕ್ಕೆ ತನ್ನ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ಮೊಟಕುಗೊಳಿಸಿದ್ದಾಳೆ.

ಯುವಕ ಮತ್ತು ಯುವತಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಯುವತಿಯ ಮನೆಯವರಿಗೆ ಅವಳನ್ನು ತಿಪ್ಪಣ್ಣನಿಗೆ ಮದುವೆ ಮಾಡಿಕೊಡುವುದು ಸ್ವಲ್ಪವೂ ಇಷ್ಟವಿಲ್ಲ.

2 ವರ್ಷದಿಂದ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು SI ಪತಿಯ ವಿರುದ್ಧ ಠಾಣೆಯ ಮುಂದೆ ಪತ್ನಿಯ ಪ್ರತಿಭಟನೆ.!

ಆದರೂ ಸುಮ್ಮನಿರದ ತಿಪ್ಪಣ್ಣ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಯುವತಿಯ ತಾಯಿಗೆ ಪೀಡಿಸುತ್ತಿದ್ದು, ಈತನ ಕಿರಿಕಿರಿಗೆ ಬೇಸತ್ತು ಆ ತಾಯಿ, ಏನು ಮಾಡುವುದು ಎಂದು ತಿಳಿಯದೆ ಕೊನೆಗೆ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತಿಪ್ಪಣ್ಣನನ್ನು ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ತಿಪ್ಪಣ್ಣನನ್ನು ಕರೆಸಿ, ಆ ಯುವತಿಯ ತಂಟೆಗೆ ಇನ್ನು ಮುಂದೆ ಹೋಗದಿರುವಂತೆ ತಾಕೀತು ಮಾಡಿದರೂ ಆತ ಮಾತ್ರ ಹಳೆ ಚಾಳಿಯನ್ನು ಮಾತ್ರ ಮರೆತಿಲ್ಲ. ಯುವತಿಯ ಮನೆ ಮೇಲೆ ಕಲ್ಲು ತೂರಿ ಮತ್ತಷ್ಟು ಪ್ರಚೋದನೆ ನೀಡುತ್ತಿದ್ದಾನೆ. ಇದರಿಂದ ಬೇಸತ್ತು ಯುವತಿ ಮತ್ತು ಯುವತಿಯ ತಾಯಿ ಪೊಲೀಸರ ರಕ್ಷಣೆ ಕೋರಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ಯುವತಿ ಮನೆಗೆ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

spot_img
spot_img
- Advertisment -spot_img