ಜನಸ್ಪಂದನ ನ್ಯೂಸ್, ಬೆಂಗಳೂರು : ಭಾರತದಲ್ಲಿ ಸಂಬಂಧ (Relationships) ಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ತಂದೆ-ತಾಯಿ, ಪತಿ-ಪತ್ನಿ, ಅಣ್ಣ-ತಂಗಿ ಮುಂತಾದ ಸಂಬಂಧಗಳ ಸುತ್ತಲೇ ಭಾರತೀಯ ಸಂಸ್ಕೃತಿ, ಹಬ್ಬ ಹಾಗೂ ಸಂಪ್ರದಾಯಗಳು ಕಟ್ಟಿಕೊಂಡಿವೆ.
ಆದರೆ ಆಧುನಿಕ ಜೀವನಶೈಲಿಯ ಪ್ರವಾಹದಲ್ಲಿ ಈ ಸಂಬಂಧಗಳ ಮೌಲ್ಯ ಭಾರತದಲ್ಲಿ ಕುಗ್ಗುತ್ತಿದೆ ಎಂಬ ಚರ್ಚೆಗಳು ಕೆಲಕಾಲದಿಂದ ನಡೆಯುತ್ತಿವೆ. ಇದೀಗ ಗ್ಲೀಡನ್ (Gleeden) ಆಪ್ ನಡೆಸಿದ ಸಮೀಕ್ಷೆಯ ಫಲಿತಾಂಶವು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.
ವರದಿ ಪ್ರಕಾರ, ಭಾರತದಲ್ಲಿ ಅಕ್ರಮ ಸಂಬಂಧ (Illicit Relationships) ಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಅತೀ ಹೆಚ್ಚು ಅಕ್ರಮ ಸಂಬಂಧಗಳಿರುವ ನಗರ “ನಮ್ಮ ಬೆಂಗಳೂರು” ಎಂದು ಪಟ್ಟಿ ಮಾಡಲಾಗಿದೆ.
ಟ್ರಾಫಿಕ್ ನಂತರ ಇನ್ನೊಂದು ಕಳಂಕವೇ?
ಬೆಂಗಳೂರು ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ನಗರ ಎಂಬ ಟೀಕೆಗಳನ್ನು ಎದುರಿಸುತ್ತಿದೆ. ಇದಕ್ಕೆ ಜೊತೆಗೆ “ಅಕ್ರಮ ಸಂಬಂಧಗಳಲ್ಲಿ ಅಗ್ರಸ್ಥಾನ” ಎಂಬ ಹೊಸ ಕಳಂಕ ಅಂಟಿಕೊಂಡಿದೆ. ಗ್ಲೀಡನ್ ವರದಿ ಹೊರಬಂದ ನಂತರ, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.
ಗ್ಲೀಡನ್ ಸಮೀಕ್ಷೆಯಲ್ಲಿ ಅಗ್ರ 5 ನಗರಗಳು :
ವರದಿ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧ (Illicit Relationships) ಗಳು ದಾಖಲಾಗಿರುವ ಟಾಪ್ 5 ನಗರಗಳು ಇವು:
- ಬೆಂಗಳೂರು.
- ಮುಂಬೈ.
- ಕೋಲ್ಕತಾ.
- ದೆಹಲಿ.
- ಪುಣೆ.
ಸಣ್ಣ ನಗರಗಳಲ್ಲಿಯೂ ಆಘಾತಕಾರಿ ಬೆಳವಣಿಗೆ :
ಹೆಚ್ಚಿನವರು ಮಹಾನಗರಗಳಲ್ಲಿ ಇಂತಹ ಪ್ರವೃತ್ತಿ ಹೆಚ್ಚು ಎಂದೇ ಭಾವಿಸುತ್ತಾರೆ. ಆದರೆ ಗ್ಲೀಡನ್ ವರದಿ ಪ್ರಕಾರ ಟೈರ್-2 ಮತ್ತು ಟೈರ್-3 ನಗರಗಳು ಅಕ್ರಮ ಸಂಬಂಧಗಳ ಹಾಟ್‌ಸ್ಪಾಟ್ ಆಗುತ್ತಿವೆ. ಡೇಟಿಂಗ್ ಮತ್ತು ರಿಲೇಶನ್‌ಶಿಪ್ ಆ್ಯಪ್‌ಗಳ ಬಳಕೆ ಈ ಸಣ್ಣ ನಗರಗಳಲ್ಲಿ ಮಹಾನಗರಗಳಿಗಿಂತಲೂ ವೇಗವಾಗಿ ಬೆಳೆಯುತ್ತಿದೆ.
ಡೇಟಿಂಗ್ ಹಾಗೂ ರಿಲೇಶನ್‌ಶಿಪ್ (Relationships) ಆ್ಯಪ್ ಹೆಚ್ಚು ಬಳಸುವ ಸಣ್ಣ ನಗರಗಳು :
- ಜೈಪುರ.
- ಚಂಡೀಗಢ.
- ಲಖನೌ.
- ಪಾಟ್ನಾ.
ಈ ಬದಲಾವಣೆಗೆ ಪ್ರಮುಖ ಕಾರಣ ಎಂದರೆ, ಸಣ್ಣ ನಗರಗಳಲ್ಲಿ ಜನರು ಕುಟುಂಬ ಮತ್ತು ಸಂಪ್ರದಾಯಗಳ ನಡುವೆ ಬದುಕುತ್ತಿದ್ದರೂ, ಆನ್‌ಲೈನ್ ಆ್ಯಪ್‌ಗಳ ಮೂಲಕ ಗುಪ್ತವಾಗಿ ಸಂಬಂಧ (Relationships) ಗಳನ್ನು ಬೆಳೆಸುತ್ತಿರುವುದು ಎಂದು ವರದಿ ತಿಳಿಸಿದೆ.
ಸಂಪಾದಕೀಯ :
ಗ್ಲೀಡನ್ ವರದಿ ತೋರಿಸುತ್ತಿರುವ ಅಂಕಿಅಂಶಗಳು ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳ ಪ್ರತಿಫಲವೆಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಸಂಬಂಧಗಳ ಪಾವಿತ್ರ್ಯಕ್ಕೆ ಹೆಸರಾಗಿದ್ದ ಭಾರತದಲ್ಲಿ, ತಂತ್ರಜ್ಞಾನ ಮತ್ತು ಆಧುನಿಕ ಜೀವನಶೈಲಿಯ ಪ್ರಭಾವದಿಂದ ಅಕ್ರಮ ಸಂಬಂಧ (Illicit Relationships) ಗಳ ಪ್ರಮಾಣ ಹೆಚ್ಚುತ್ತಿದೆ ಎಂಬುದು ಆತಂಕಕಾರಿ ವಿಚಾರವಾಗಿದೆ.
Courtesy : Asianet Suvarna News
“ಬಕೆಟ್, ಮಗ್ ಕೊಳಕಾಗಿವೆಯೇ? ಕಡಿಮೆ ಖರ್ಚಿನಲ್ಲಿ ಕೆಲವೇ ನಿಮಿಷಗಳಲ್ಲಿ ಹೀಗೆ Clean ಮಾಡಿ.!”
ಜನಸ್ಪಂದನ ನ್ಯೂಸ್, ಡೆಸ್ಕ್ : ಬಹುತೇಕರು ತಮ್ಮ ಮನೆ ಹಾಗೂ ಸ್ನಾನಗೃಹವನ್ನು ಸ್ವಚ್ಛವಾಗಿ ಇಡುವುದರಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಬಾತ್‌ರೂಂನಲ್ಲಿ ದಿನನಿತ್ಯ ಬಳಸುವ ಬಕೆಟ್ ಮತ್ತು ಮಗ್‌ಗಳ ಸ್ವಚ್ಛತೆ (Clean) ಕಡೆಗಣಿಸಲಾಗುತ್ತದೆ.
ಇವುಗಳನ್ನು ಸರಿಯಾಗಿ ತೊಳೆಯದೇ ಇದ್ದರೆ, ಗಡಸು ನೀರಿನ ಕಾರಣದಿಂದ ಹಳದಿ ಬಣ್ಣದ ಕಲೆಗಳು, ಮೊಂಡುತನ ಹಾಗೂ ಕಸ ಜಮೆಯಾಗುತ್ತದೆ. ಒಮ್ಮೆ ಜಮಾದ ಈ ಕಲೆಗಳನ್ನು ತೆಗೆಯುವುದು ಕಷ್ಟವಾಗಬಹುದು. ಆದರೆ ಮನೆಲ್ಲಿಯೇ ದೊರೆಯುವ ಕೆಲವು ಸರಳ ಪದಾರ್ಥಗಳನ್ನು ಬಳಸಿದರೆ, ಬಕೆಟ್ ಮತ್ತು ಮಗ್‌ಗಳನ್ನು ಹೊಸದಿನಂತೆ ಹೊಳೆಯುವಂತೆ ಮಾಡಬಹುದು.
Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಈ ಕೆಳಗಿನ ಮನೆ ಮದ್ದು ಬಳಸಿ ಕೊಳೆಯಾದ ಮಗ್ – ಬಕೆಟ್ ಸ್ವಚ್ಛ (Clean) ವಾಗಿಸಿ :
1. ಅಡುಗೆ ಸೋಡಾ ಮತ್ತು ನಿಂಬೆ ರಸ :
ಅಡುಗೆ ಸೋಡಾ (Baking Soda) ಎಲ್ಲರ ಮನೆಯಲ್ಲಿಯೂ ದೊರೆಯುತ್ತದೆ. ಇದನ್ನು ಬಕೆಟ್ ಮತ್ತು ಮಗ್ ಸ್ವಚ್ಛತೆ (Clean) ಗೆ ಬಳಸಬಹುದು.
- ಮೊದಲು ಬಕೆಟ್‌ನ್ನು ನೀರಿನಿಂದ ತೊಳೆದುಹಾಕಿ.
- ಒಂದು ಬಟ್ಟಲಿನಲ್ಲಿ ಅಡುಗೆ ಸೋಡಾ + ಪಾತ್ರೆ ತೊಳೆಯುವ ಲಿಕ್ವಿಡ್ ಸೋಪ್ + ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ.
- ಟೂತ್ ಬ್ರಷ್ ಅಥವಾ ಸ್ಕ್ರಬ್ ಸಹಾಯದಿಂದ ಬಕೆಟ್ ಮತ್ತು ಮಗ್ ಮೇಲೆ ಹಚ್ಚಿ ಚೆನ್ನಾಗಿ ಉಜ್ಜಿ.
- ಹೆಚ್ಚು ಕಲೆಗಳಿದ್ದರೆ 5–10 ನಿಮಿಷ ಪೇಸ್ಟ್ ಹಚ್ಚಿದಂತೆಯೇ ಬಿಟ್ಟು ನಂತರ ತೊಳೆದುಹಾಕಿ.
ಇದರ ನಂತರ ಬಕೆಟ್ ಮತ್ತು ಮಗ್‌ಗಳು ಹೊಸದಾಗಿ ಹೊಳೆಯುತ್ತವೆ.
Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!
2. ಬಿಳಿ ವಿನೆಗರ್ ಬಳಕೆ :
ಗಡಸು ನೀರಿನ ಕಾರಣದಿಂದ ಬಕೆಟ್‌ಗಳು ಮತ್ತು ಮಗ್‌ಗಳು ಹಳದಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇದನ್ನು (Clean) ತೆಗೆಯಲು ಬಿಳಿ ವಿನೆಗರ್ ಉತ್ತಮ ಆಯ್ಕೆ.
- ಎರಡು ಕಪ್ ಬಿಳಿ ವಿನೆಗರ್ ತೆಗೆದು ನೀರಿನಲ್ಲಿ ಬೆರೆಸಿ.
- ಸ್ಪಂಜ್‌ನ್ನು ಈ ದ್ರಾವಣದಲ್ಲಿ ತೋಯಿಸಿ ಬಕೆಟ್ ಮತ್ತು ಮಗ್‌ಗಳನ್ನು ಸ್ಕ್ರಬ್ ಮಾಡಿ.
- ಹಳದಿ ಬಣ್ಣ ಕಣ್ಮರೆಯಾಗುತ್ತದೆ ಮತ್ತು ಬಕೆಟ್, ಮಗ್ ಹೊಳೆಯುತ್ತವೆ.
3. ಹೈಡ್ರೋಜನ್ ಪೆರಾಕ್ಸೈಡ್ :
ಹೈಡ್ರೋಜನ್ ಪೆರಾಕ್ಸೈಡ್ ಕೂಡ ಕಲೆ (Clean) ತೆಗೆಯಲು ಪರಿಣಾಮಕಾರಿ.
- ಸ್ವಲ್ಪ ಹೈಡ್ರೋಜನ್ ಪೆರಾಕ್ಸೈಡ್‌ನ್ನು ನೀರಿನಲ್ಲಿ ಬೆರೆಸಿ.
- ಬ್ರಷ್‌ನ್ನು ಅದರಲ್ಲಿ ತೋಯಿಸಿ ಬಕೆಟ್ ಮತ್ತು ಮಗ್‌ಗಳನ್ನು ಉಜ್ಜಿ.
- ನಂತರ ಶುದ್ಧ ನೀರಿನಿಂದ ತೊಳೆದು ಒಣಗಿಸಿ.
ಇದು ಹಳದಿ ಬಣ್ಣದ ಕಲೆ ಮಾತ್ರವಲ್ಲ, ಮೊಂಡುತನದ ಕಲೆಗಳನ್ನೂ ತೆಗೆಯುತ್ತದೆ.
Minor ಬಾಲಕಿಯರ ಶೋಷಣೆ ಪ್ರಕರಣ ಬಯಲು ; ಇಬ್ಬರು ಬಂಧನ, ಬಾಲಕಿ ರಕ್ಷಣೆ.!
ಸಂಪಾದಕೀಯ :
ಬಕೆಟ್ ಮತ್ತು ಮಗ್‌ಗಳನ್ನು ನಿಯಮಿತವಾಗಿ ತೊಳೆಯದೇ ಇದ್ದರೆ ಅವು ಬೇಗ ಕೊಳಕಾಗುತ್ತವೆ. ಅಡುಗೆ ಸೋಡಾ, ನಿಂಬೆ ರಸ, ಬಿಳಿ ವಿನೆಗರ್ ಹಾಗೂ ಹೈಡ್ರೋಜನ್ ಪೆರಾಕ್ಸೈಡ್ – ಇಂತಹ ಸರಳ ಮನೆಮದ್ದುಗಳನ್ನು ಬಳಸುವುದರಿಂದ ಬಕೆಟ್ ಮತ್ತು ಮಗ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಹೊಳೆಯುವಂತೆ (Clean) ಮಾಡಬಹುದು.
ಸ್ನಾನಗೃಹದ ಸ್ವಚ್ಛತೆಗೆ ಇದು ಮುಖ್ಯ ಭಾಗವಾಗಿರುವುದರಿಂದ, ತಿಂಗಳಿಗೆ ಕನಿಷ್ಠ ಒಂದೆರಡು ಬಾರಿ ಈ ವಿಧಾನಗಳನ್ನು ಪ್ರಯೋಗಿಸುವುದು ಒಳಿತು. ಹೀಗೆ ಮಾಡಿದರೆ ಸಲಿಸಾಗಿ Clean ಮಾಡಬಹುದು.