ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಸಾಕ್ಷಿಯಾಗುವಂತೆ, ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಊಟಕ್ಕೆ (Meal) ಕುಳಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ನಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಘಾತಕ್ಕೊಳಗಾಗಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಜನರು ಸಾಮಾನ್ಯವಾಗಿ ಊಟ (Meal) ಮಾಡುತ್ತಿದ್ದರು. ಅಷ್ಟರಲ್ಲೇ, ಕನ್ನಡಕ ಧರಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಕುರ್ಚಿಯಲ್ಲಿ ಕುಳಿತು ಫೋನ್ ನೋಡುತ್ತಾ ಇದ್ದರು.
Heart Attack ಬರುವ ಮುನ್ನ ಕಾಣಿಸುವ 7 ಪ್ರಮುಖ ಎಚ್ಚರಿಕೆ ಲಕ್ಷಣಗಳು.!
ಕೆಲವೇ ಕ್ಷಣಗಳಲ್ಲಿ ಅವರು ತೀವ್ರ ಅಸ್ವಸ್ಥತೆಯಿಂದ ಎದೆ ಹಿಡಿದುಊಟ (Meal) ದ ಮೇಜಿನ ಮೇಲೆ ಬಿದ್ದು ಬಿಟ್ಟಿದ್ದಾರೆ. ಕುಟುಂಬ ಸದಸ್ಯರು ಹಾಗೂ ಹತ್ತಿರ ಕುಳಿತವರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳದೆ ಪ್ರಜ್ಞಾಹೀನಗೊಂಡಿದ್ದರು. ಬಳಿಕ ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವರು ಈ ರೀತಿಯ ಹಠಾತ್ ಸಾವುಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
LIC : 5 ವರ್ಷ ಹೂಡಿದ್ರೆ ಸಾಕು, ಜೀವನಪರ್ಯಂತ ತಿಂಗಳಿಗೆ 15 ಸಾವಿರ ರೂ. ಲಭ್ಯ.
ಕೆಲವು ಬಳಕೆದಾರರು, “ಇತ್ತೀಚೆಗೆ ಹೃದಯಾಘಾತದಿಂದ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಜವಾದ ಕಾರಣ ಪತ್ತೆಹಚ್ಚಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವೈದ್ಯರ ಪ್ರಕಾರ, ಅನಿಯಮಿತ ಜೀವನಶೈಲಿ, ಒತ್ತಡ, ಒಳ್ಳೆಯ ಊಟ (Meal)ದ ಬದಲಾಗಿ ಅತಿಯಾದ ಫಾಸ್ಟ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಬಹುದು. ತೀವ್ರ ಎದೆನೋವು, ಉಸಿರಾಟದ ತೊಂದರೆ, ಬೆವರು ಇವು ಹೃದಯಾಘಾತದ ಆರಂಭಿಕ ಎಚ್ಚರಿಕೆ ಲಕ್ಷಣಗಳಾಗಿದ್ದು, ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಜೀವ ಉಳಿಸಲು ಸಹಾಯಕ.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಊಟಕ್ಕೆ (Meal) ಕುಳಿತ ವ್ಯಕ್ತಿಯ ಹೃದಯಾಘಾತದ ವಿಡಿಯೋ :
इंदौर का एक रेस्टोरेंट – दोपहर 2 बजे…
फ़ोन पर बात हो रही है, खाने का आर्डर दिया गया, थाली तो आई लेकिन खाने से पहले मौत आ गई।
केवल 30 सेकंड में सब ख़त्म..
ज़िंदगी इतनी अनिश्चित है कि पता नहीं किस पल ऊपरवाले का बुलावा आ जाए।🥺 pic.twitter.com/5BrVuSkl3a— 𝙼𝚛 𝚃𝚢𝚊𝚐𝚒 (@mktyaggi) September 22, 2025
ಟೀಚರ್ ಫೋನ್‌ನಲ್ಲಿ 2500ಕ್ಕೂ ಅಧಿಕ Private moments ವಿಡಿಯೋ ; ಮಹಿಳೆಯ ಗಂಭೀರ ಆರೋಪ.!
ಜನಸ್ಪಂದನ ನ್ಯೂಸ್, ಬೆಂಗಳೂರು : ನಗರದಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ (Private moments) ಪ್ರಕರಣ ಹೊರಬಿದ್ದಿದೆ. ಖಾಸಗಿ ಶಾಲೆಯೊಂದರ ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ಆತ ತನ್ನ ಬಳಿ ಅನೇಕ ಅಶ್ಲೀಲ ವಿಡಿಯೋ (Video) ಗಳನ್ನು ಸಂಗ್ರಹಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಮಹಿಳೆಯ ಆಕ್ಷೇಪಣೆ :
ದೂರು ನೀಡಿದ ಮಹಿಳೆಯ ಪ್ರಕಾರ, ಮ್ಯಾಥ್ಯೂ ಎಂಬ ಶಿಕ್ಷಕ ತನ್ನೊಂದಿಗೆ ವೈಯಕ್ತಿಕವಾಗಿ ವಾಸಿಸುತ್ತಿದ್ದ ವೇಳೆ ಹಲವಾರು ಖಾಸಗಿ ಕ್ಷಣಗಳನ್ನು (Private moments) ರಹಸ್ಯವಾಗಿ ವಿಡಿಯೋ ಮಾಡಿ ಸಂಗ್ರಹಿಸಿದ್ದಾನೆ.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಸಂತ್ರಸ್ತೆಯ ಪ್ರಕಾರ, ಮ್ಯಾಥ್ಯೂ ಕೇವಲ ತನ್ನದ್ದೇ ಅಲ್ಲ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನೂ (Private moments) ದಾಖಲು ಮಾಡಿಕೊಂಡಿದ್ದು, ಸುಮಾರು 25 ಸಾವಿರಾರು ವಿಡಿಯೋಗಳು ಆತನ ಬಳಿ ಇವೆ ಎಂಬುದು ಮಹಿಳೆಯ ಆರೋಪ.
ಹೇಗೆ ಪರಿಚಯ ಬೆಳೆದಿತು?
ಮಹಿಳೆ ತನ್ನ ಮಗಳನ್ನು ಓದುವ ಖಾಸಗಿ ಶಾಲೆಯ ಮೂಲಕ ಮ್ಯಾಥ್ಯೂ ಅವರನ್ನು ಪರಿಚಯಿಸಿಕೊಂಡಿದ್ದರು. ಅಲ್ಲಿ ಆತ ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹೀಗೆ ಪರಿಚಯ ಬೆಳೆದು, ಇಬ್ಬರು ಬಳಿಕ ಒಟ್ಟಿಗೆ ವಾಸಿಸಲು ಶುರುಮಾಡಿದರು.
Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!
ಸಂತ್ರಸ್ತೆಯ ಪ್ರಕಾರ, ಇಬ್ಬರು ಚರ್ಚ್‌ನಲ್ಲಿ ಮದುವೆಯಾದ ನಂತರ, ಮ್ಯಾಥ್ಯೂ ತನ್ನ ನಿಜಸ್ವರೂಪ ತೋರಿಕೊಂಡನು. ಆ ಸಮಯದಲ್ಲಿ ಖಾಸಗಿ ಕ್ಷಣಗಳನ್ನು (Private moments) ಆತ ವಿಡಿಯೋ ಮಾಡಿ ಸಂಗ್ರಹಿಸುತ್ತಿದ್ದಾನೆ ಎಂಬುದರ ಅರಿವು ಆಕೆಗೆ ಬಂದಿತು ಎಂದು ಆಕೆ ಹೇಳಿಕೊಂಡಿದ್ದಾಳೆ.
ಸಂತ್ರಸ್ತೆಯ ಸಾಕ್ಷ್ಯ ಮತ್ತು ಎಫ್‌ಐಆರ್ :
ಮಹಿಳೆಯ ಪ್ರಕಾರ, ಮ್ಯಾಥ್ಯೂ ತನ್ನ ಖಾಸಗಿ ವಿಡಿಯೋಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದನು. ಇದರಲ್ಲಿ ಕೆಲವು ಭಾಗಗಳನ್ನು ಸಂತ್ರಸ್ತೆ ಆತನ ಬಾರದಂತೆ ತನ್ನ ಮೊಬೈಲ್‌ಗೆ ಕಾಪಿ ಮಾಡಿಕೊಂಡಿದ್ದರು. ಇವುಗಳನ್ನು ಆತ ಮಾಡಿದ ಕೃತ್ಯಗಳಿಗೆ ಸಾಕ್ಷ್ಯವಾಗಿ ಉಳಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಆದರೆ ಸಂತ್ರಸ್ತೆಯ ಮೊಬೈಲ್‌ನಲ್ಲಿ ಆ ವಿಡಿಯೋಗಳ ‘ನಗ್ನ ರಹಸ್ಯ’ ಮ್ಯಾಥ್ಯೂ ಗಮನಕ್ಕೆ ಬಂದ ನಂತರ, ಆತ ತಕ್ಷಣ ಆಕೆಯ ಮೊಬೈಲ್ ಸಹಿತ ಪರಾರಿಯಾದನು. ಈ ವಿಷಯದ ಆಧಾರದ ಮೇಲೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.
ಸಂತ್ರಸ್ತೆಯ ಪ್ರಕಾರ, ಆ ಮೊಬೈಲ್‌ನಲ್ಲಿ ಸಾಕಷ್ಟು ಪ್ರಮುಖ ಸಾಕ್ಷ್ಯಗಳಿದ್ದು, ತನಿಖೆ ವೇಳೆ ಅವುಗಳನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ. ಪ್ರಸ್ತುತ ಪ್ರಕರಣದ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿಗೆ 30 ವರ್ಷ ಶಿಕ್ಷೆ.!
👉 ಮುಖ್ಯ ಸೂಚನೆ (Disclaimer):
ಈ ಲೇಖನದಲ್ಲಿ ಉಲ್ಲೇಖಿಸಿರುವ ಆರೋಪಗಳು (Private moments) ದೂರುದಾರೆಯ ಹೇಳಿಕೆ ಆಧಾರಿತವಾಗಿದ್ದು, ಅಧಿಕೃತ ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ. ಈ ವರದಿ ಮಾಹಿತಿ ಹಂಚುವ ಉದ್ದೇಶಕ್ಕಾಗಿ ಮಾತ್ರ.