Tuesday, October 14, 2025

Janaspandhan News

HomeGeneral News8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು...
spot_img
spot_img
spot_img

8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧ್ಯಪ್ರದೇಶದ ಭೋಪಾಲದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಬಳಿಕ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆಯಾಗಿದ್ದ ಯುವ ದಂಪತಿ (Couple), ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಗಂಡ–ಹೆಂಡತಿಯ ನಡುವಿನ ಕಲಹಕ್ಕೆ ಕಾರಣ ಅತ್ತೆ–ಮಾವ ಅಲ್ಲ, ಬದಲಿಗೆ ಇವರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಅಕ್ವೇರಿಯಂ ಮೀನು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಹೇಗೆ ಶುರುವಾಯಿತು ಕಲಹ?

ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚನ್ನಾಗಿಯೆ ಸಾಗಿತ್ತು. ಗಂಡನು ಮದುವೆಗೂ ಮುಂಚೆ ನಾಯಿ, ಮೊಲ ಮತ್ತು ಅಕ್ವೇರಿಯಂ ಮೀನುಗಳನ್ನು ಸಾಕುತ್ತಿದ್ದ. ಇತ್ತ ಹೆಂಡತಿ ತನ್ನ ಉತ್ತರ ಪ್ರದೇಶದ ಮನೆಯಲ್ಲಿ ಬೆಕ್ಕನ್ನು ಸಾಕಿಕೊಂಡಿದ್ದಳು.

ಮದುವೆಯಾದ ಬಳಿಕ ಹೆಂಡತಿ ತನ್ನ ಬೆಕ್ಕನ್ನು ಗಂಡನ ಮನೆಗೆ ಕರೆದುಕೊಂಡು ಬಂದಳು. ಇಬ್ಬರೂ ಪ್ರಾಣಿಪ್ರೇಮಿಗಳಾಗಿದ್ದರಿಂದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಸಮಸ್ಯೆಗಳು ಶುರುವಾಯಿತು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಪತ್ನಿಯ ಹೇಳಿಕೆಯ ಪ್ರಕಾರ, ಗಂಡನ ನಾಯಿ ತನ್ನ ಸಾಕಿದ ಬೆಕ್ಕನ್ನು ನಿರಂತರವಾಗಿ ಹೆದರಿಸುತ್ತಿದೆ, ಬೊಗಳುತ್ತದೆ ಮತ್ತು ಕೆಲವೊಮ್ಮೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಬೆಕ್ಕು ಆಹಾರ ತಿನ್ನಲು ಹೆದರಿಕೊಳ್ಳುತ್ತಿದೆ. ಇದು ನನಗೆ ಮಾನಸಿಕ ಹಿಂಸೆಯಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.

ಇತ್ತ ಗಂಡನ ವಾದವೇನೆಂದರೆ, ಪತ್ನಿಯ ಬೆಕ್ಕು ಸದಾ ಅಕ್ವೇರಿಯಂ ಬಳಿ ಕಾದು ಕುಳಿತು ಮೀನು ಹಿಡಿಯಲು ಪ್ರಯತ್ನಿಸುತ್ತದೆ. ಜೊತೆಗೆ ನಾಯಿ ಮೇಲೆಯೂ ದಾಳಿ ಮಾಡಲು ಮುಂದಾಗುತ್ತದೆ. ಹೀಗಾಗಿ ಮನೆತನದಲ್ಲಿ ಪ್ರತಿದಿನ ಕಲಹ, ಅಶಾಂತಿ ನಡೆಯುತ್ತಿದೆ ಎಂದು ಆತ ತಿಳಿಸಿದ್ದಾನೆ.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ದಂಪತಿ (Couple) ಗಳು ಡಿವೋರ್ಸ್‌ಗೆ ಮೊರೆ :

ಪ್ರಾಣಿಗಳ ಕಾರಣದಿಂದ ದಿನದಿಂದ ದಿನಕ್ಕೆ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಬ್ಬರೂ ದಂಪತಿ (Couple) ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದರಿಂದ, ನ್ಯಾಯಾಧೀಶರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದಂಪತಿ (Couple) ಗಳಿಗೆ ಕೌನ್ಸಿಲಿಂಗ್ ಸೂಚನೆ :

ನ್ಯಾಯಾಧೀಶರು ಪ್ರಕರಣವನ್ನು ಆಲಿಸಿ, “ಮದುವೆಗೆ ಕೇವಲ ಎಂಟು ತಿಂಗಳು ಕಳೆದಿದೆ, ಇಂತಹ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದಂಪತಿ (Couple) ಗೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಸಾಕು ಪ್ರಾಣಿಗಳ ಕಾರಣದಿಂದಲೂ ಗಂಡ–ಹೆಂಡತಿ ನಡುವಿನ ಕಲಹ ವಿಚ್ಛೇದನದ ಹಂತಕ್ಕೇರಬಹುದು ಎಂಬುದನ್ನು ಸಾಬೀತುಪಡಿಸಿದೆ.


Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

Lady

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಲಾವೋಸ್‌ (Laos) ನ ಒಂದು ಹಳ್ಳಿಯಲ್ಲಿ ವಿದೇಶಿ ಪ್ರವಾಸಿ ಮಹಿಳೆ (Lady) ಯೊಬ್ಬಳಿಗೆ ಅಚ್ಚರಿಯ ಅನುಭವ ಎದುರಾಯಿತು. ಬಿಳಿ ಚರ್ಮ ಹೊಂದಿದ್ದ ಆ ಮಹಿಳೆಯನ್ನು ಕಂಡ ಸ್ಥಳೀಯ ಮಕ್ಕಳು ಭಯದಿಂದ ಜೋರಾಗಿ ಅತ್ತಿದ್ದು, ಅಲ್ಲದೆ ಕೆಲವರು ದೂರ ಓಡಿಹೋದರು.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ (Lady) ಯು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ತನ್ನನ್ನು ಕಂಡ ತಕ್ಷಣ ಗಾಬರಿಗೊಂಡು ಓಡಿಹೋಗುತ್ತಿರುವುದನ್ನು ನೋಡಿ ಮೊದಲಿಗೆ ಗೊಂದಲಕ್ಕೊಳಗಾದಳು.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!

ಬಳಿಕ, ತನ್ನ ಬಿಳಿ ಚರ್ಮವೇ ಇದಕ್ಕೆ ಕಾರಣವೆಂದು ಅವಳು ಅರ್ಥಮಾಡಿಕೊಂಡಳು. ಹಳ್ಳಿಗಳಿಗೆ ವಿದೇಶಿ ಪ್ರವಾಸಿಗರು ಬಹಳ ವಿರಳವಾಗಿ ಬರುತ್ತಾರೆ ಎಂಬುದನ್ನು ಮಹಿಳೆ (Lady) ಯು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯ ಜನರ ಗಮನ ಸೆಳೆದಿದೆ. ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಗಂಭೀರ ಚರ್ಚೆಗೆ ಇಳಿದರು. ಕೆಲವು ಸಂಸ್ಕೃತಿಗಳಲ್ಲಿ ಬಿಳಿ ಬಣ್ಣವನ್ನು ದೆವ್ವ ಅಥವಾ ದುಷ್ಟಶಕ್ತಿಗಳೊಂದಿಗೆ ಸಂಪರ್ಕಿಸುವ ನಂಬಿಕೆ ಇರುವುದರಿಂದ ಮಕ್ಕಳು ಹೆದರಿರಬಹುದು ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟರು.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!

ಅದೇ ವೇಳೆ, ವಿಡಿಯೋ ಹಂಚಿಕೆ ಮಾಡುವ ವಿಧಾನವನ್ನೂ ಹಲವರು ಟೀಕಿಸಿದ್ದಾರೆ. ಮಕ್ಕಳ ಪೋಷಕರ ಅನುಮತಿಯಿಲ್ಲದೆ ಅವರನ್ನು ಚಿತ್ರೀಕರಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಹಲವು ಜನರಿಂದ ವ್ಯಕ್ತವಾಗಿದೆ. ಮಹಿಳೆ (Lady) ತನ್ನ ಅನುಭವವನ್ನು ಮಕ್ಕಳನ್ನು ಫ್ರೇಮ್‌ನಲ್ಲಿ ತೋರಿಸದೆ ಹೇಳಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ಘಟನೆಯನ್ನು ನೋಡಿ ಕೆಲವರು “ಮಕ್ಕಳು ನಿಜವಾಗಿಯೂ ಭಯಗೊಂಡಿದ್ದರೆ, ಅವರ ಮೇಲೆ ನಗುವುದು ಅಥವಾ ಅವರನ್ನು ಹಿಂಬಾಲಿಸುವ ಬದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಇನ್ನೂ ಕೆಲವರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಾಧ್ಯಮದ ಪ್ರಭಾವವನ್ನು ಉಲ್ಲೇಖಿಸಿ, ಮಕ್ಕಳು ಚಿತ್ರಗಳಲ್ಲೋ ಅಥವಾ ಮಾಧ್ಯಮದಲ್ಲೋ ಬಿಳಿ ಜನರನ್ನು ಕಂಡು ಭಿನ್ನ ಕಲ್ಪನೆ ಮಾಡಿಕೊಂಡಿರಬಹುದು ಎಂದೂ ಹೇಳಿದ್ದಾರೆ. ಈ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಹಿಳೆ (Lady) ಯನ್ನು ಕಂಡು ಓಡುತ್ತಿರುವ ಮಕ್ಕಳ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments