ಜನಸ್ಪಂದನ ನ್ಯೂಸ್, ಡೆಸ್ಕ್ : ಧರ್ಮಪುರಿ ಜಿಲ್ಲೆಯ ಶಾಲೆ (School) ಯೊಂದರಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಹರೂರು ತಾಲ್ಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆ (School) ಯಲ್ಲಿ ಸುಮಾರು 30 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯೊಬ್ಬರು ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!
ವೈರಲ್ ಆಗಿರುವ ವಿಡಿಯೋದಲ್ಲಿ, ತರಗತಿಯೊಳಗೆ ಮಕ್ಕಳಿಗೆ ತನ್ನ ಕಾಲುಗಳನ್ನು ಒತ್ತುವಂತೆ ಸೂಚಿಸುತ್ತಾ ಮೇಜಿನ ಮೇಲೆ ಮಲಗಿರುವ ಶಿಕ್ಷಕಿಯ ಚಿತ್ರಣ ಕಂಡುಬಂದಿದೆ.
ಆ ಶಿಕ್ಷಕಿಯನ್ನು ಕಲೈವಾಣಿ ಎಂದು ಗುರುತಿಸಲಾಗಿದ್ದು, ಈ ವಿಡಿಯೋ ಹೊರಬಂದ ನಂತರ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Girl : “ಕಿಸ್ ಕೊಟ್ರೆ ಮಾತ್ರ ಫೋನ್ ವಾಪಸ್”, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?
ವಿದ್ಯಾಭ್ಯಾಸಕ್ಕಾಗಿ ಶಾಲೆ (School) ಗೆ ಬರುವ ಬಡ ಮಕ್ಕಳನ್ನು ಈ ರೀತಿ ದುರುಪಯೋಗಪಡಿಸಿಕೊಂಡ ಶಿಕ್ಷಕಿಯ ನಡೆ ಅನೇಕ ವಲಯಗಳಿಂದ ತೀವ್ರ ಖಂಡನೆಗೆ ಗುರಿಯಾಗಿದೆ. ಈ ಕುರಿತು ಸ್ಥಳೀಯ ಆಡಳಿತವೂ ಮಾಹಿತಿ ಪಡೆದಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದೆ.
ಶಾಲೆ (School) ಯಲ್ಲಿ ಕಾಲು ಒತ್ತಿಸಿಕೊಳ್ಳುತ್ತಿರುವ ಮುಖ್ಯೋಪಾಧ್ಯಾಯಿನಿ ವಿಡಿಯೋ :
மேஜையில் படுத்துக்கொண்டு மாணவர்களை கை, கால் அமுக்கிவிடச் சொன்ன தலைமை ஆசிரியை வீடியோ வெளியாகி அதிர்ச்சி அங்கிள் மாமா ஆட்சியில் இன்னும் என்னென்ன கொடுமைகள் பார்க்க வேண்டியதா இருக்கப் போகிறதோ🤦♂️#Dharmapuri pic.twitter.com/AaxiC20Uap
— Siva karthick (@SivakarthikTVK) September 3, 2025
Girl : “ಕಿಸ್ ಕೊಟ್ರೆ ಮಾತ್ರ ಫೋನ್ ವಾಪಸ್”, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?
ಜನಸ್ಪಂದನ ನ್ಯೂಸ್, ಬೆಂಗಳೂರು : ಚಾರ್ಜ್ ಹಾಕಿದ ಮೊಬೈಲ್ ವಾಪಸ್ ಕೊಡಲು ಖಾಸಗಿ ಬಸ್ ಚಾಲಕನೋರ್ವ ಅಪ್ರಾಪ್ತೆ (Girl) ಗೆ “KISS” ಬೇಡಿಕೆ ಇಟ್ಟ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ 15 ವರ್ಷದ ಅಪ್ರಾಪ್ತೆ (Girl) ಯೊಬ್ಬಳಿಗೆ ಚಾಲಕನೋರ್ವ ಮುತ್ತು (Kiss) ಕೊಡುವಂತೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.
Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ಖಾಸಗಿ ಬಸ್ ಚಾಲಕನ ಈ ವರ್ತನೆಯ ಬಳಿಕ ಬಾಲಕಿ (Girl) ಯ ಕುಟುಂಬಸ್ಥರು ಆಕ್ರೋಶಗೊಂಡು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.
ಘಟನೆ ಹೀಗಿದೆ :
ಮಾಹಿತಿಯ ಪ್ರಕಾರ, ರಾತ್ರಿ ಪ್ರಯಾಣದ ವೇಳೆ ಬಾಲಕಿ (Girl) ಯ ಮೊಬೈಲ್ ಫೋನ್‌ನಲ್ಲಿ ಚಾರ್ಜ್ ಖಾಲಿಯಾಗಿದ್ದರಿಂದ ಆಕೆ ಸ್ಪೇರ್ ಚಾಲಕನ ಬಳಿ ಫೋನ್ ಚಾರ್ಜ್ ಹಾಕುವಂತೆ ನೀಡಿದ್ದಳು. ಸ್ವಲ್ಪ ಹೊತ್ತಿನ ನಂತರ ಫೋನ್ ಹಿಂತಿರುಗಿಸಲು ಕೇಳಿದಾಗ, ಸ್ಪೇರ್ ಚಾಲಕ ಆರೀಫ್ ಅಸಭ್ಯವಾಗಿ ವರ್ತಿಸಿ “ಮುತ್ತು ಕೊಟ್ಟರೆ ಮಾತ್ರ ಫೋನ್ ಕೊಡುತ್ತೇನೆ” ಎಂದು ಒತ್ತಾಯಿಸಿದ್ದು, ಇದರಿಂದ ಬಾಲಕಿ ಬೆಚ್ಚಿಬಿದ್ದಿದ್ದಾಳೆ.
ವಾಹನಗಳ Number Plate ಮೇಲೆ ಹೆಸರು, ಲೋಗೋ & ಲಾಂಛನ ಹಾಕುವುದು ನಿಷೇಧ.!
ಅಷ್ಟೇ ಅಲ್ಲದೇ, ಮಲಗಿದ್ದಾಗ ಸೀಟ್ ಹತ್ತಿರ ಬಂದು ಆಕೆಗೆ ಪದೇ ಪದೇ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೂಡ ಕೇಳಿಬಂದಿದೆ. ರಾತ್ರಿ ಪೂರ್ತಿ ತೊಂದರೆ ಅನುಭವಿಸಿದ ಬಾಲಕಿ ಭಯದಿಂದ ಕುಟುಂಬಸ್ಥರ ಸಹಾಯವನ್ನು ಕೇಳಿದ್ದಾಳೆ.
ಕೊನೆಗೆ ಬಾಲಕಿ (Girl) ಹೇಗೋ ಫೋನ್ ಇಸ್ಕೊಂಡು ತನ್ನ ಅಣ್ಣ ಮತ್ತು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಪೋಷಕರ ಆಕ್ರೋಶ :
ಇಂದು ಬೆಳಗ್ಗೆ ಬಸ್ ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ತಲುಪಿದಾಗ ಬಾಲಕಿಯ ತಾಯಿ ಮತ್ತು ಸಹೋದರರು ಚಾಲಕ ಆರೀಫ್‌ನನ್ನು ಕೆಳಗಿಳಿಸಿ ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಆತ ಕೈ ಮುಗಿದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾನೆ.
ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”
ಇದರಿಂದ ಕೋಪಗೊಂಡ ಕುಟುಂಬಸ್ಥರು ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಚಾಲಕನನ್ನು ಥಳಿಸಿದ್ದಾರೆ. ಇನ್ನಷ್ಟು ಅವಮಾನ ಮಾಡುವ ಉದ್ದೇಶದಿಂದ ಅವನನ್ನು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ.
ಪೊಲೀಸರು ವಶಕ್ಕೆ ಪಡೆದ ಆರೋಪಿ :
ಘಟನೆಯ ನಂತರ, ಪೊಲೀಸರು ಆರೋಪಿ ಸ್ಪೇರ್ ಚಾಲಕ ಆರೀಫ್‌ನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ. ಬಸ್‌ನಲ್ಲಿ ಅಪ್ರಾಪ್ತ ಬಾಲಕಿ (Girl) ಯ ಮೇಲೆ ನಡೆದ ಕಿರುಕುಳದ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.