Sunday, September 8, 2024
spot_img
spot_img
spot_img
spot_img
spot_img
spot_img
spot_img

ವಿದೇಶದಲ್ಲಿ ದುಡಿಯುತ್ತಿರುವ ಪತಿ : ಇತ್ತ ಇಬ್ಬರೊಂದಿಗೆ ಪತ್ನಿಯ ಅಕ್ರಮ ಸಂಬಂಧ ; ಮುಂದೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವಿದೇಶದಲ್ಲಿ ಪತಿ ಕಷ್ಟಪಟ್ಟು ದುಡಿದ ಹಣದಲ್ಲಿ ಎಂಜಾಯ್​ ಮಾಡುತ್ತಿದ್ದ ಪತ್ನಿ, ವ್ಯಕ್ತಿಯೊಬ್ಬನ ಜತೆ ಅಕ್ರಮ ಸಂಬಂಧ (illicit relationship) ಇಟ್ಟುಕೊಂಡಿದ್ದಳು. ಒಬ್ನೆ ಸಾಲದು ಅಂತ ಮತ್ತೊಬ್ಬನ ಜತೆಯೂ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮೊದಲ ಪ್ರೇಮಿಗೆ ತಿಳಿದು ನಡೆಯಬಾರದ ದುರ್ಘಟನೆ ಸಂಭವಿಸಿದೆ.

ಆಂಧ್ರ ಪ್ರದೇಶದ (Andra Pradesh) ಅಂಬೇಡ್ಕರ್ ಕೋಣಸೀಮಾ ಜಿಲ್ಲೆಯ ಅಲ್ಲಾವರಂ ಮಂಡಲದ ರೆಳ್ಳುಗಡ್ಡ ಗ್ರಾಮದಲ್ಲಿ ಮಣಿಕುಮಾರಿ ಅವರ ಪತಿ ಗಲ್ಫ್‌ನಲ್ಲಿ ನೆಲೆಸಿದ್ದಾರೆ. ಮಣಿಕುಮಾರಿ ಮಾತ್ರ ರೆಳ್ಳುಗಡ್ಡಾ ಗ್ರಾಮದಲ್ಲಿ ತನ್ನ ಅತ್ತೆಯೊಂದಿಗೆ ವಾಸವಿದ್ದಳು. ಈಕೆಯನ್ನು ಹತ್ಯೆ ಮಾಎಲಾಗಿತ್ತು.

ಇದನ್ನು ಓದಿ : Health : ಒಂದು ತಿಂಗಳು ಅನ್ನ ಸೇವಿಸುವುದನ್ನು ಬಿಟ್ಟರೆ ಏನಾಗುವುದು.?

ಮಣಿಕುಮಾರಿ ಕೊಲೆಗೆ (murder) ಅಕ್ರಮ ಸಂಬಂಧವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಆಕೆಗೆ ಮನೆ ಪಕ್ಕದ ನವೀನ್ ಕುಮಾರ್ ಎಂಬ ಯುವಕನ ಪರಿಚಯವಾಯಿತು. ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕೆಲ ತಿಂಗಳ ಹಿಂದೆ ನವೀನ್ ಮತ್ತು ಮಣಿಕುಮಾರಿ ನಡುವಿನ ಸಂಬಂಧ ಆಕೆಯ ಪತಿಯ ಕುಟುಂಬ ಸದಸ್ಯರಿಗೆ (family members) ಗೊತ್ತಾಗಿತ್ತು. ಹೀಗಾಗಿ ಪಂಚಾಯಿತಿ ಮಾಡಿದ್ದರು. ಇನ್ಮುಂದೆ ಬೇರೆ ಬೇರೆಯಾಗಿಯೇ ಇರುತ್ತೇವೆ ಎಂದು ಇಬ್ಬರು ಹೇಳಿದ್ದರು. ಆದರೆ, ಕೆಲ ತಿಂಗಳುಗಳ ಕಾಲ ಸುಮ್ಮನಿದ್ದ ಇಬ್ಬರು ಮತ್ತೆ ತಮ್ಮ ಹಳೆಚಾಳಿ ಮುಂದುವರೆಸಿದ್ದರು.

ಈ ನಡುವೆ ಮಣಿಕುಮಾರಿ, ನವೀನ್‌ನನ್ನು ಅವೈಡ್ ಮಾಡಲು ಶುರುಮಾಡಿದ್ದಳು. ಈಕೆಯ ವರ್ತನೆಯಿಂದ (behavior) ಅನುಮಾನಗೊಂಡ ಆತ ಮಣಿಕುಮಾರಿ ಮೇಲೆ ನಿಗಾ ಇಟ್ಟಿದ್ದ. ಆಗ ಅವನಿಗೆ ಆಕೆ ಮತ್ತೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಗೊತ್ತಾಯಿತು.

ಇದನ್ನು ಓದಿ : Election – 2024 : ಮತಗಟ್ಟೆಯಲ್ಲಿಯೇ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು.!

ಇದರ ಜೊತೆಗೆ ಇನ್ನೊಂದು ವಾರದಲ್ಲಿ ತನ್ನ ಗಂಡನ ಬಳಿಗೆ ಹೋಗುವುದಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾಳೆ ಎಂಬ ವಿಚಾರ ತಿಳಿಯಿತು. ಇದರಿಂದ ಆಕ್ರೋಶಗೊಂಡ ನವೀನ್, ಮಣಿಕುಮಾರಿಯನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದ.

ಮಣಿಕುಮಾರಿಯ ಮನೆಗೆ ನುಗ್ಗಿ ಬಾತ್​ರೂಂನಲ್ಲಿ ಅಡಗಿ ಕುಳಿತು ಆಕೆಯ ಫೋನ್ ಸಂಭಾಷಣೆಗಳನ್ನು (Conversations) ಕದ್ದು ಕೇಳಿಸಿಕೊಂಡಿದ್ದನು. ಆಕೆ ಬೇರೊಬ್ಬನ ಜತೆ ಲಲ್ಲೆ ಹೊಡೆಯುತ್ತಿರುವುದು ಖಚಿತವಾಗುತ್ತಿದ್ದಂತೆ ಆಕೆಯ ಮನೆಯಲ್ಲಿದ್ದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಮಣಿಕುಮಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ. (ಎಜೇನ್ಸಿಸ್)

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img