Saturday, July 27, 2024
spot_img
spot_img
spot_img
spot_img
spot_img
spot_img

LS Election – 2024 : ಮತದಾನ ಬಹಿಷ್ಕರಿಸಿದ್ದ ಗ್ರಾಮದಲ್ಲಿ ಮತಯಂತ್ರ – ಮತಗಟ್ಟೆ ಪುಡಿ ಪುಡಿ.!

spot_img

ಜನಸ್ಪಂದನ ನ್ಯೂಸ್‌,  ಚಾಮರಾಜನಗರ : ರಾಜ್ಯದಲ್ಲಿ ಇಂದು ನಡೆಯುತ್ತಿರುವ ಪ್ರಥಮ ಃಂತದ ಚುನಾವಣೆ ಶಾಂತವಾಗಿ ನಡೆಯುತ್ತಿರವ ಸಮಯದಲ್ಲಿಯೇ ಮತದಾನ ಬಹಿಷ್ಕರಿಸಿದ್ದ ಗ್ರಾಮದಲ್ಲಿ ಮತಯಂತ್ರ – ಮತಗಟ್ಟೆ ಪುಡಿ ಪುಡಿ ಮಾಡಿದ ಘಟನೆ ನಡೆದು ಹೋಗಿದೆ.

ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮನವೊಲಿಕೆಗೆ ತೆರಳಿದ್ದ ವೇಳೆ ಗ್ರಾಮದ ಕೆಲವರು ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

ಇಂಡಿಗನತ್ತ ಗ್ರಾಮದಲ್ಲಿ ಕೆಲ ಉದ್ರಿಕ್ತ ಜನರು ಇವಿಎಂ ಯಂತ್ರ, ಮತಗಟ್ಟೆಯ ಬಾಗಿಲು, ಮೇಜು- ಕುರ್ಚಿ, ಯಂತ್ರ ಇತರೆ ಪರಿಕರಗಳನ್ನು ಧ್ವಂಸ ಮಾಡಿದ್ದಾರೆ. ಈ ವೇಳೆ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಕಲ್ಲು ತೂರಾಟವೂ ನಡೆದಿದೆ. ಈ ಘಟನೆ ವೇಳೆ ಗ್ರಾಮದ ಮಹಿಳೆಯರು ಸೇರಿ ಮತಗಟ್ಟೆಯ ಅಧಿಕಾರಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನು ಓದಿ : Election – 2024 : ಮತಗಟ್ಟೆಯಲ್ಲಿಯೇ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು.!

ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಚುನಾವಣಾ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹನೂರು ತಹಸೀಲ್ದಾರ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು, ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರವಿದ್ದರು. ತಮಗೆ ಮೂಲ ಸೌಕರ್ಯ ಕೊಡಬೇಕು ಇಲ್ಲದಿದ್ದರೆ ತಾವು ಮತ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದರು‌.

ಇದನ್ನು ಓದಿ : ವಿದೇಶದಲ್ಲಿ ದುಡಿಯುತ್ತಿರುವ ಪತಿ : ಇತ್ತ ಇಬ್ಬರೊಂದಿಗೆ ಪತ್ನಿಯ ಅಕ್ರಮ ಸಂಬಂಧ ; ಮುಂದೆ.?

ವಿಚಾರ ಅರಿತ ಪೊಲೀಸ್ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು ಮತದಾರರ ಮನವೊಲಿಸಲು ತೆರಳಿದ್ದರು. ಈ ವೇಳೆ, ಕೆಲವರನ್ನು ಮತದಾನಕ್ಕೆ ಮನವೊಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ಜನರಿಂದ ಘಟನೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ಉದೇಶ್ ಭೇಟಿ ನೀಡಿದ್ದಾರೆ. (ಎಜೇನ್ಸಿಸ್)

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img