ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾನಗರಗಳಲ್ಲಿ ಸಂಚಾರ ದಟ್ಟಣೆ (Traffic jam) ಸಾಮಾನ್ಯ ಸಂಗತಿ. ವಾಹನಗಳ ಅಡ್ಡಾದಿಡ್ಡಿ ಓಡಾಟ, ರಸ್ತೆ ಮೂಲ ಸೌಕರ್ಯಗಳ ಕೊರತೆ, ನಿಯಮ ಉಲ್ಲಂಘನೆ ಇವು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣಗಳಾಗಿವೆ.
ಇತ್ತೀಚೆಗೆ ಮುಂಬೈ ನಗರದ ಲೋಖಂಡ್ವಾಲಾ ಮುಖ್ಯ ಮಾರುಕಟ್ಟೆ ಬಳಿಯಲ್ಲಿ ಟ್ರಾಫಿಕ್ ಜಾಮ್ (Traffic jam) ಗೆ ವಿಶೇಷ ಕಾರಣವೊಂದು ಬೆಳಕಿಗೆ ಬಂದಿದೆ.
ಇದನ್ನು ಓದಿ : ಮನೆಗೆ ಅಚಾನಕ್ ಬಂದ ಪತಿ : Lover ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪತ್ನಿ ; ಮುಂದೆ.?
ಕೆಂಪು ಬಣ್ಣದ ಕಾರೊಂದು ರಸ್ತೆ ಮಧ್ಯೆ ನಿಲ್ಲಿಸಿದ್ದರಿಂದಾಗಿ ಬಸ್ ಸೇರಿದಂತೆ ಅನೇಕ ವಾಹನಗಳು Traffic jam ಆದ ಹಿನ್ನಲೆಯಲ್ಲಿ ಸಾಲಾಗಿ ನಿಂತಿದ್ದವು. ವಾಹನಗಳು Traffic jam ಉಂಟಾದ ಪರಿಣಾಮವಾಗಿ ಮುಂದೆ ಸಾಗದೆ ಇದ್ದ ಕಾರಣ, ತಾಳ್ಮೆ ಕಳೆದುಕೊಂಡ ಕೆಲ ವಾಹನ ಸವಾರರು ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಅಚ್ಚರಿ ಸಂಗತಿ ಕಂಡು ಶಾಕ್ ಆಗಿದ್ದಾರೆ.
ಹೌದು, ಇದೀಗ ಆ ಅಚ್ಚರಿ ಸಂಗತಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, “ಅಂಧೇರಿ ಲೋಕ” ಎಂಬ ಇನ್‌ಸ್ಟಾಗ್ರಾಂ ಪುಟವು ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ, ಕಾರು ರಸ್ತೆಯ ನಡುಕಡೆ ನಿಲ್ಲಿಸಿದ್ದರಿಂದ ಜನತೆಗೆ ಅನೇಕ ಸಮಸ್ಯೆಗಳು (Traffic jam) ಉಂಟಾಗಿವೆ ಎಂದು ಹೇಳಲಾಗಿದೆ. ಕೆಲವರು ಕಾರಿನ ಮಾಲೀಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 01 ರ ದ್ವಾದಶ ರಾಶಿಗಳ ಫಲಾಫಲ.!
ಅಷ್ಟಕ್ಕೂ ಕಾರಿನ ಸಮೀಪಕ್ಕೆ ಹೋಗಿ ನೋಡಿದಾಗ ಕಂಡ ಅಚ್ಚರಿ ಸಂಗತಿಯಾದರೂ ಏನು ಗೊತ್ತಾ.?
ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತು ಆ ಕಡೆ ಈ ಕಡೆ ನೋಡುತ್ತಿರುವದು ಚಾಲಕನಲ್ಲ, ಅದಲಿಗೆ ಅಲ್ಲಿ ಕುಳಿಒತದ್ದು ಮಾತ್ರ ಶ್ವಾನ (ನಾಯಿ). ಈ ದೃಶ್ಯ ಕಂಡು ಕೆಲವರಿಗೆ ನಗು ತರಿಸಿದರೂ, ಕೆಲವರಿಗೆ ಇದು ಅಪಾಯಕಾರಿ ಮತ್ತು ಗಂಭೀರ ವಿಷಯವಾಗಿದೆ ಎಂಬ ಭಾವನೆ ಉಂಟುಮಾಡಿದೆ. ಕಾರಿನಲ್ಲಿ ನಾಯಿಯನ್ನು ಹೀಗೆ ಬಿಟ್ಟು ಹೋಗುವುದು ಅಪಾಯಕಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದರ ಹಿನ್ನೆಲೆಯಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗೊಂಡ ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಒಬ್ಬರು ಪೋಸ್ಟ್‌ನಲ್ಲಿ “ಫೋಟೋ ತೆಗೆದು ಮುಂಬೈ ಟ್ರಾಫಿಕ್ ಪೊಲೀಸ್ ಆಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ದಂಡ ತಾನಾಗೆ ಬೀಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!
ಇಂತಹ ಘಟನೆಗಳು ಜರುಗದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸುವುದರಿಂದ ಸಾರ್ವಜನಿಕರ ಸಾರ್ವಜನಿಕರ ವಾಹನ ಸಂಚಾರಕ್ಕೆ (Traffic jam) ತೊಂದರೆ ಉಂಟಾಗುತ್ತದೆ ಹಾಗೂ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ.
Traffic jam ಗೆ ಕಾರಣವಾದ ವಿಡಿಯೋ :
View this post on Instagram
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
Heart-Test : ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಪರೀಕ್ಷೆ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಿಮಗಿದು ಗೊತ್ತೇ.? ಹೃದಯಾಘಾತವನ್ನು ಮುಂಚಿತವಾಗಿ ಪತ್ತೆ ಮಾಡುವ 3 ಸೆಕೆಂಡಿನ ಸರಳ (Heart-Test) ಪರೀಕ್ಷೆ ಒಂದಿದೆ. ಆ ಮೂಲಕ ಆಗಬಹುದಾದ ದೊಡ್ಡ ಸಮಸ್ಯೆಯನ್ನು ಮುಂಚಿತವಾಗಿಯೇ ತಡೆಯಬಹುದು. ಬನ್ನಿ ಈಗ ಆ ಸರಳ ಪರೀಕ್ಷೆಯ ಬಗ್ಗೆ ತಿಳಿಯೋಣ.
ಹೃದಯಾಘಾತ ಎಂದರೆ ತೀವ್ರ ನೋವು, ಎದೆಬಡಿತ ಹೆಚ್ಚಳ ಮತ್ತು ತುರ್ತು ಚಿಕಿತ್ಸೆ ಎಂಬುದು ಬಹುತೇಕ ಜನರ ಕಲ್ಪನೆ. ಆದರೆ ‘ಸೈಲೆಂಟ್ ಹೃದಯಾಘಾತ’ ಎನ್ನುವುದು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಆಗುವ ಒಂದು ಅಪಾಯಕಾರಿ ಘಟನೆ. ಕೆಲವೊಮ್ಮೆ ವ್ಯಕ್ತಿಯು ಈ ರೀತಿಯ ಹೃದಯಾಘಾತವನ್ನು ಅನುಭವಿಸಿದ್ದರೂ ತಾನೇ ಅದನ್ನು ಅರಿಯದೇ ಇರುತ್ತಾರೆ.
ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
ಬೆಳಿಗ್ಗೆ ಎದ್ದ ತಕ್ಷಣವೇ ತಾವು ಮಾಡಬಹುದಾದ ಒಂದು ಸರಳ ಪರೀಕ್ಷೆ (Heart-Test) ಯ ಮೂಲಕ ಶರೀರದ ರಕ್ತ ಸಂಚಾರದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದು ಆರಂಭಿಕ ಹೃದಯ ಸಂಬಂಧಿತ ತೊಂದರೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗಬಹುದು.
ಈ ಕುರಿತು ವೈದ್ಯರು ಸೋಶಿಯಲ್ ಮೀಡಿಯಾದಲ್ಲಿ ಪರೀಕ್ಷೆ (Heart-Test) ಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅನೇಕರು ಇದರಿಂದ ಲಾಭಪಡೆಯುತ್ತಿದ್ದಾರೆ.
ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪರೀಕ್ಷೆ (Heart-Test) ಹೇಗೆ ಮಾಡುವುದು?
- ಬೆಳಿಗ್ಗೆ ಎದ್ದು ಹಾಸಿಗೆಯ ಮೇಲೆ ನೇರವಾಗಿ ಕುಳಿತುಕೊಳ್ಳಿ.
- ನಿಮ್ಮ ಎರಡು ತೋಳುಗಳನ್ನು ತಲೆಯ ಮೇಲೆ ಉದ್ದನೆಯಾಗಿ ಎತ್ತಿ.
- ಈ ಸ್ಥಿತಿಯಲ್ಲಿ 3 ಸೆಕೆಂಡುಗಳ ಕಾಲ ಹಾಗೆಯೇ ಹಿಡಿದುಕೊಳ್ಳಿ.

ಈಗ ಕೆಳಗಿನ ಲಕ್ಷಣಗಳಿವೆಯೇ ಎನ್ನುವುದನ್ನು ಗಮನವಿಡಿ :
- ಎದೆಯಲ್ಲಿ ಬಿಗಿತ ಅಥವಾ ಅಸಹಜ ಭಾವನೆ ಇದೆಯೇ?
- ಬೆರಳಿನಲ್ಲಿ ಗಡ್ಡೆಗಟ್ಟಿದ ಅನುಭವವಾಗುತ್ತಿದೆಯೇ?
- ತಲೆಭಾರ, ತೀವ್ರ ದಣಿವಿನ ಭಾವನೆ ಇದ್ದಕ್ಕಿದ್ದಂತೆ ಬರುತ್ತಿದೆಯೇ?
ಇದನ್ನು ಓದಿ : Gastric-problems : ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯೇ.? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು.
ಈ Heart-Test ಮಾಡುವಾಗ ಏನಾದರೂ ತೊಂದರೆ ಕಂಡುಬಂದರೆ ಎಚ್ಚರಿಕೆ ಅಗತ್ಯ.!
ಈ ಪರೀಕ್ಷೆಯಲ್ಲಿ ನೀವು ಒಂದು ಬದಿಯ ತೋಳು ಸರಿಯಾಗಿ ಎತ್ತಲು ಅಸಾಧ್ಯವಾಯಿತೆ? ಅಥವಾ ತಕ್ಷಣವೇ ತಳಕ್ಕೆ ಬೀಳುತ್ತಿದೆಯೆ? ಇಂತಹ ಸಂದರ್ಭಗಳಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಇದೊಂದು ಪ್ರಾಥಮಿಕ ಎಚ್ಚರಿಕೆಯ ಸೂಚನೆಯಾಗಬಹುದು. ಇದು ದೇಹದಲ್ಲಿ ರಕ್ತದ ಹರಿವಿನ ಸಮಸ್ಯೆ ಉಂಟಾಗುತ್ತಿರುವ ಸೂಚನೆ.
ಈ ಪರೀಕ್ಷೆಯ ಅಗತ್ಯತೆ ಮತ್ತು ಪ್ರಯೋಜನಗಳು :
ರಕ್ತದ ಹಾರಿಯುವ ದಾರಿಗಳಲ್ಲಿ (Arteries) ಸಂಕುಚನೆಯಾಗಿದೆಯೆಂಬುದನ್ನು ಈ ಸರಳ ಪರೀಕ್ಷೆಯು ಸೂಚಿಸಬಹುದು. ಆರಂಭಿಕ ಹಂತದಲ್ಲಿಯೇ ಈ ತೊಂದರೆಯನ್ನು ಗುರುತಿಸಿ ತಕ್ಕ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹೃದಯಾಘಾತದ ಅಪಾಯವನ್ನು ಶೇ.50ರಷ್ಟು ಕಡಿಮೆ ಮಾಡಬಹುದಾಗಿದೆ. ತಜ್ಞ ವೈದ್ಯರ ಪ್ರಕಾರ, ಸಮಯಕ್ಕೆ ಸರಿಯಾದ ಕ್ರಮ ಸಾವು ಹಾಗೂ ಗಂಭೀರ ಹೃದಯ ಸಮಸ್ಯೆಗಳನ್ನು ತಪ್ಪಿಸಬಹುದಾದ ಪ್ರಮುಖ ಮಾರ್ಗವಾಗಿದೆ.
ಇದನ್ನು ಓದಿ : IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!
> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.





