ಜನಸ್ಪಂದನ ನ್ಯೂಸ್, ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ (Inspector of Mangalore North Traffic Police Station in Dakshina Kannada District) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಕಾನ್ಸ್ಟೇಬಲ್ ಪ್ರವೀಣ್ ನಾಯ್ಕ ಅವರನ್ನು ಮಂಗಳೂರು ಲೋಕಾಯುಕ್ತ (Lokayukta) ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನು ಓದಿ : ಶೀಘ್ರದಲ್ಲಿಯೇ 1200 PSI, 12000 ಪೋಲಿಸ್ ಸಿಬ್ಬಂದಿಗಳ ನೇಮಕ : ಗೃಹ ಸಚಿವ ಜಿ ಪರಮೇಶ್ವರ್.!
ವ್ಯಕ್ತಿಯೊಬ್ಬರ ಸ್ಕೂಟರ್ನ್ನು ಬಿಡುಗಡೆಗೊಳಿಸುವ ಸಲುವಾಗಿ (In order to release) ಲಂಚ ಸ್ವೀಕರಿಸುತ್ತಿದ್ದ ವೇಳೆ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಬಲೆಗೆ ಬಿದ್ದಿದ್ದಾರೆ.
ನ್ಯಾಯಾಲಯದ ಆದೇಶದಂತೆ ಸ್ಕೂಟರ್ ಬಿಡುಗಡೆಗೊಳಿಸಲು ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್ ರನ್ನು ಭೇಟಿಯಾದಾಗ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು (He demanded a bribe) ಎನ್ನಲಾಗಿದೆ.
ಇದನ್ನು ಓದಿ : ವೇದಿಕೆ ಮೇಲೆಯೇ ಕುಸಿದು ಬಿದ್ದ Police ಅಧಿಕಾರಿ ; ವಿಡಿಯೋ ವೈರಲ್.!
ಪೊಲೀಸರ ವಶದಲ್ಲಿದ್ದ ಸ್ಕೂಟರ್ನ್ನು ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ನೀಡಿತ್ತು. ಈ ಸಲುವಾಗಿ ದೂರುದಾರರು ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಷರೀಫ್ ಅವರನ್ನು ಭೇಟಿಯಾಗಿದ್ದರು. ಸ್ಕೂಟರ್ ಬಿಡುಗಡೆಗೊಳಿಸಲು ₹ 5 ಸಾವಿರ ಬೇಕೆಂದು ಲಂಚಕ್ಕೆ ಇಟ್ಟಿದ್ದರು ಎನ್ನಲಾಗಿದೆ.
ಸ್ವಲ್ಪ ದುಡ್ಡು ಮಾಡಿ ಎಂದು ಕೇಳಿಕೊಂಡಾಗ ಠಾಣಾ ಬರಹಗಾರರಾದ ನಾಗರತ್ನ ಅವರನ್ನು ಭೇಟಿಯಾಗಿ ಎಂದು ತಿಳಿಸಿದ್ದರು. ಅವರ ಬಳಿ ಹೋಗಿ ವಿಚಾರಿಸಿದಾಗ ಅವಾಚ್ಯವಾಗಿ ಬೈದು ₹ 3 ಸಾವಿರ ಲಂಚ ನೀಡುವಂತೆ ಹೇಳಿದ್ದರು.
ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!
ಲಂಚ ನೀಡಲು ದೂರುದಾರರಿಗೆ ಮನಸ್ಸಿಲ್ಲದ ಕಾರಣ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಹಿಂದಿನ ಸುದ್ದಿ : ಸರ್ಕಾರಿ ನೌಕರಿ ಸಿಗುತ್ತಿದಂತೆಯೇ ಕಷ್ಟಪಟ್ಟು ಓದಿಸಿದ ಪತಿ ಬಿಟ್ಟು ಪತ್ನಿ ಎಸ್ಕೇಪ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಗಂಡ ; ಏನದು ಗೊತ್ತಾ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಜ್ಯೋತಿ ಮೌರ್ಯ ಪ್ರಕರಣ ಬಹಳಷ್ಟು ಜನರಿಗೆ ಗೊತ್ತಿರಬಹುದು. ಕಷ್ಟ ಪಟ್ಟು ಓದಿಸಿದ (He studied hard) ಗಂಡನನ್ನು ಬಿಟ್ಟು ಪತ್ನಿ ಜ್ಯೋತಿ ಬೇರೊಬ್ಬನನ್ನು ಮದುವೆಯಾದ ಘಟನೆ ಇದು.
ಇದನ್ನು ಓದಿ : “ಕೋಚಿಂಗ್ ಗುರು” ಫೆಬ್ರವರಿ 1 ಮತ್ತು 2 ರಂದು ನ್ಯೂಸ್ಫಸ್ಟ್ನಿಂದ ಮೆಗಾ Coaching Expo ಆಯೋಜನೆ.!
ಫ್ಯೂನ್ ಆಗಿದ್ದ ಗಂಡ, ಜ್ಯೋತಿಗೆ ಉನ್ನತ ಶಿಕ್ಷಣ ಕೊಡಿಸಿದ, ಅದು ತುಂಬಾ ಕಷ್ಟಪಟ್ಟು. ಆದರೆ ಪತ್ನಿ ಜ್ಯೋತಿ ಗಂಡನನ್ನು ಬಿಟ್ಟು ಸರ್ಕಾರಿ ನೌಕರಿ ಸಿಕ್ಕ ನಂತರ ಬೇರೆ ಪುರುಷನನ್ನು ಮದುವೆಯಾದಳು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಇಂತದ್ದೆ ಮತ್ತೊಂದು ಘಟನೆ ವರದಿಯಾಗಿದ್ದು, ಈ ಬಾರಿ ತನ್ನನ್ನು ತೊರೆದ ಪತ್ನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟು ಹೆಂಡತಿಗೆ ಭರ್ಜರಿ ಶಾಕ್ ನೀಡಿದ್ದಾನೆ.
ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!
ಗಂಡನ ಸಹಾಯ ಮತ್ತು ಸಹಕಾರದಿಂದ ಓದಿ ಉದ್ಯೋಗ (job) ಗಿಟ್ಟಿಸಿದ್ದ ಪತ್ನಿ ಉದ್ಯೋಗ ದೊರೆತ ಬಳಿಕ ಪತಿಯನ್ನೇ ತೊರೆದಿದ್ದು, ಆಕೆ ಮಾಡಿದ ಕೆಲಸಕ್ಕೆ ತಕ್ಕ ಪಾಠ ಕಲಿಸಲು ಪತಿ, ಪತ್ನಿ ಮಾಡಿದ್ದ ಎಡವಟ್ಟನ್ನು ಜಗಜ್ಜಾಹಿರು ಮಾಡಿ ಆಕೆ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ತಂದಿದ್ದಾನೆ.
ಘಟನೆಯ ವಿವರ :
ಕೆಲ ವರ್ಷಗಳ ಹಿಂದೆ ರಾಜಸ್ಥಾನದ ಕೋಟಾದ (Khota of Rajasthan) ಮನೀಶ್ ಮೀನಾ ಮತ್ತು ಸಪ್ನಾ ಮೀನಾ ಮದುವೆಯಾಗಿದ್ದರು. ಆದರೆ, ಸಪ್ನಾಗೆ ಓದುವ ಆಸೆ ಇದೆ ಎಂದು ಅರಿತ ಪತಿ ಮನೀಶ್, ಉನ್ನತ ವ್ಯಾಸಂಗ ಮಾಡಲು ನೆರವಾದರು. ಯಾವುದೇ ಬೆಲೆ ತೆತ್ತಾದರೂ ತನ್ನ ಪತ್ನಿಗೆ ಉನ್ನತ ಶಿಕ್ಷಣಕ್ಕೆ (Higher education) ಕೊಡಿಸಲು ಮನೀಶ್ ನಿರ್ಧರಿಸಿದ್ದ. ಆತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ ಆತ ಮಾತ್ರ ತನ್ನ ಹೆಂಡತಿಯನ್ನು ಓದಿಸಬೇಕು ಎಂಬ ಸಂಕಲ್ಪ (determination) ಮಾಡಿಕೊಂಡಿದ್ದ.
ಇದನ್ನು ಓದಿ : ಒಂದು ತಿಂಗಳು Tea ಕುಡಿಯುವುದನ್ನು ಬಿಡಬೇಕು ಅಂತ ಅನ್ಕೊಂಡಿದ್ದೀರಾ.? ಅದಕ್ಕೂ ಮುಂಚೆ ಈ ಸುದ್ದಿ ಓದಿ.
ಅದರಂತೆ ಆತನ ಕಷ್ಟಕ್ಕೆ ಪ್ರತಿಫಲವೆಂಬಂತೆ ರೈಲ್ವೆ ಪರೀಕ್ಷೆಯಲ್ಲಿ (Railway exam) ಪತ್ನಿ ಸಪ್ನಾ ಪಾಸ್ ಆದಳು. ಆಕೆಗೆ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಕೂಡ ಸಿಕ್ಕಿತು. ಆದರೆ ಕೆಲಸ ಸಿಕ್ಕ ಬಳಿಕ ಸಪ್ನಾ ಬದಲಾಗುತ್ತಾ ಹೋದಳು. ಅದರಲ್ಲೂ ಗಂಡನ ಕುರಿತು ಸಪ್ನಾಳ ನಡೆಯೇ ಬದಲಾಗಿತ್ತು. ಗಂಡನನ್ನು ಕೀಳಾಗಿ ಕಂಡು, ಕೊನೆಗೆ ಜಗಳ ಮಾಡಿಕೊಂಡು ಗಂಡನನ್ನೇ ಬಿಟ್ಟಳು.
ಸಪ್ನಾಳ ನಡೆಯಿಂದ ಸಿಟ್ಟಾಗಿದ್ದ ಗಂಡ ಮನೀಶ್ ಆಕೆಗೆ ಬುದ್ಧಿವಾದ ಹೇಳಿದರೂ, ಆತನ ಯಾವುದೇ ಸಂಧಾನಕ್ಕೂ (negotiation) ಒಪ್ಪದ ಸಪ್ನಾ ಆತನಿಂದ ದೂರ ಉಳಿಯಲು ನಿರ್ಧರಿಸಿದಳು.
ಇದನ್ನು ಓದಿ : ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!
ಇದರಿಂದ ಆಕ್ರೋಶಗೊಂಡ ಗಂಡ ಮನೀಶ್ ರೈಲ್ವೆ ಇಲಾಖೆಗೆ ದೂರು ನೀಡಿದ್ದ. ದೂರಿನಲ್ಲಿ ಸಪ್ನಾ ತನ್ನ ಸ್ವಂತ ಪ್ರತಿಭೆಯಿಂದ ಕೆಲಸ ಪಡೆಯಲು ಸಾಧ್ಯವಿಲ್ಲ (sapna cannot get a job by your own talent) ಎಂದು ಆರೋಪಿಸಿ, ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳನ್ನು (Evidence) ಸಹ ತೋರಿಸಿದ್ದ.
ತನ್ನ ಪತ್ನಿ ಸಪ್ನಾ, ಇನ್ನೊಬ್ಬ ಅಭ್ಯರ್ಥಿಯ (ಡಮ್ಮಿ ಅಭ್ಯರ್ಥಿ) ಸಹಾಯದಿಂದ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ (Railway Recruitment Board Exam) ಪಾಸ್ ಆಗಿದ್ದಾರೆ ಎಂದು ಪ್ರೂವ್ ಮಾಡಿದ.
ಇದನ್ನು ಓದಿ : ರಸ್ತೆಯಲ್ಲಿ ಮಲಗಿದ್ದ ನಾಯಿಮರಿಯ ಮೇಲೆ ಕಾರು ಹತ್ತಿಸಿದ ಕ್ರೂರ ನಿವೃತ್ತ Police ಸಿಬ್ಬಂದಿ.!
ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೆ ಅಂದು ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ (An investigation has been initiated against all the candidates) ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಸೌರಭ್ ಜೈನ್ (Saurabh Jain, Senior Divisional Commercial Officer, Kota Division) ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.