ಜನಸ್ಪಂದನ ನ್ಯೂಸ್, ಆನೇಕಲ್ : ಪತಿಯೋರ್ವ ತನ್ನ ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ನಲ್ಲಿ ನಡೆದಿದೆ. ಪತಿ, ಪತ್ನಿಗೆ ನಡುರಸ್ತೆಯಲ್ಲಿಯೇ (Middle of road) 7-8 ಬಾರಿ ಚಾಕುವಿನಿಂದ ಇರಿದಿದ್ದಾನೆ.
ಪತ್ನಿ ಮಗುವನ್ನು ಶಾಲೆಗೆ ಬಿಡಲು ಬಂದಾಗ ಪತಿ, ಆಕೆಯ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಈ ದುರ್ಘಟನೆ ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ವಿನಾಯಕನಗರ (Vinayak nagar) ದಲ್ಲಿ ಘಟನೆ ನಡೆದಿದೆ. ಹತ್ಯೆಗೀಡಾಡ ಮಹಿಳೆಯನ್ನು 29 ವರ್ಷದ ಶ್ರೀಗಂಗಾ ಎಂದು ಕೊಲೆ ಆರೋಪಿಯನ್ನು 32 ವರ್ಷದ ಆಕೆಯ ಪತಿ ಮೋಹನ್ ರಾಜು ಎಂದು ಗುರುತಿಸಲಾಗಿದೆ.
ಇದನ್ನು ಓದಿ : ವೆಸ್ಟರ್ನ್ ಉಡುಪಿನಲ್ಲಿ ಗ್ಲಾಮರಸ್ ಬೆಡಗಿಯಾದ ಮೋನಾಲಿಸಾ? ವಿಡಿಯೋ ವೈರಲ್.!
ಆರೋಪಿ ಮತ್ತು ಹತ್ಯೆಯಾದ ಮಹಿಳೆ ಇಬ್ಬರೂ ಕೂಡ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿದ್ದು, ಕಳೆದ 7 ವರ್ಷದ ಹಿಂದೆ ಮದುಗೆಯಾಗಿದ್ದರು. ದಂಪತಿಗಳಿಗೆ ಆರು ವರ್ಷದ ಮಗ ಇವರಿಗೆ ಇದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿತ ಪತಿ ಮೋಹನ್ ರಾಜ್‌ಗೆ ತನ್ನ ಸ್ನೇಹಿತನ ಜೊತೆಗೆ ಪತ್ನಿ ಶ್ರೀಗಂಗಾ ಅಕ್ರಮ ಸಂಬಂಧ (Illicit relationship) ಹೊಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಎರಡು ಮೂರು ವರ್ಷದಿಂದ ಪತ್ನಿಯ ಜೊತೆ ಮೋಹನ್ ರಾಜ್ ಗಲಾಟೆ ಮಾಡುತ್ತಿದ್ದ.
ಗಲಾಟೆಯಿಂದ ಬೇಸತ್ತು ಇದೀಗ ಪತ್ನಿ ಕಳೆದ ಎಂಟು ತಿಂಗಳಿನಿಂದ ಪತಿಯಿಂದ ದೂರವಾಗಿದ್ದರು. ಪತಿ ಮೋಹನ್ ರಾಜ್ ರಾತ್ರಿ ಮಗುವನ್ನ ನೋಡಲು ಬಂದಿದ್ದ, ಆವಾಗ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಇದನ್ನು ಓದಿ : ಸಸ್ಪೆಂಡ್ ಮಾಡಿದ ಹಿರಿಯ ಅಧಿಕಾರಿಯ ಕಚೇರಿ ಮುಂದೆಯೇ Tea Shop ಇಟ್ಟ ಇನ್ಸ್‌ಪೆಕ್ಟರ್ ; ವಿಡಿಯೋ ವೈರಲ್.!
ಇಂದು ಬೆಳಿಗ್ಗೆ ಶಾಲೆಗೆ ಮಗುವನ್ನು ಬಿಡಲು ಪತ್ನಿ ಬೈಕ್ (Bike) ನಲ್ಲಿ ಬಂದಿದ್ದರು. ಪತ್ನಿಯ ಬರುವಿಕೆಯನ್ನೇ ಕಾದು ಕುಳಿತಿದ್ದ ಪತಿ ಮೋಹನ್ ರಾಜ್, ಶ್ರೀಗಂಗಾ ಬರುತ್ತಿದಂತೆಯೇ ಆಕೆಯ ಮೇಳೆ ದಾಳಿ ಮಾಡಿ 7-8 ಬಾರಿ ಆಕೆಗೆ ಚಾಕುವಿನಿಂದ ಚುಚ್ಚಿದ್ದಾನೆ.
ಚಾಕೂವಿನ ದಾಳಿಯಿಂದ ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಸಾವಿಗೀಡಾಗಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು (Hebbagodi Police) ಭೇಟಿ ನೀಡಿದ್ದು, ಆರೋಪಿ ಮೋಹನ್ ರಾಜ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿಂದಿನ ಸುದ್ದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.!
ಜನಸ್ಪಂದನ ನ್ಯೂಸ್, ಬೆಳಗಾವಿ : ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಭಾಗದ ಜನರಿಗೆ ಮಹಾಕುಂಭ ಮೇಳ (Mahakumbh Mela) ಕ್ಕೆ ಹೋಗುವವರಿಗೆ ರೈಲ್ವೆ ಇಲಾಖೆ Good news ವೊಂದನ್ನು ಕೊಟ್ಟಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ವಿಶೇಷ ರೈಲು ಸೇವೆ ನೀಡಲಾಗುತ್ತಿದೆ.
ಹೀಗಾಗಿ ರೈಲ್ವೆ ಮಂಡಳಿಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ (SSS Hubblli) ಹಾಗೂ ಉತ್ತರ ಪ್ರದೇಶದ ವಾರಣಾಸಿ (Varanasi) ನಡುವೆ ಮೂರು ಟ್ರಿಪ್ (Three trips) ವಿಶೇಷ ಎಕ್ಸ್‌ಪ್ರೆಸ್ ರೈಲು (Special express train) ಸೇವೆಗಳಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಇದನ್ನು ಓದಿ : ಸಸ್ಪೆಂಡ್ ಮಾಡಿದ ಹಿರಿಯ ಅಧಿಕಾರಿಯ ಕಚೇರಿ ಮುಂದೆಯೇ Tea Shop ಇಟ್ಟ ಇನ್ಸ್‌ಪೆಕ್ಟರ್ ; ವಿಡಿಯೋ ವೈರಲ್.!
144 ವರ್ಷಗಳಿಗೆ ಒಮ್ಮೆ ನಡೆಯುವ ಈ ವಿಶೇಷ ಕುಂಭಮೇಳಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪವಿತ್ರ ಮಹಾಕುಂಭ ಮೇಳದಲ್ಲಿ ಯುಪಿ ಸರ್ಕಾರದಿಂದ ಒದಗಿಸಿರುವ ಉತ್ತಮವಾದ ವ್ಯವಸ್ಥೆಯ ಬಗ್ಗೆ ಭಕ್ತಾಧಿ (Devotee) ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಲ್ತುಳಿತ ದುರಂತ ಪ್ರಕರಣದ ನಂತರ ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಮತ್ತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗದಲ್ಲಿ ರೈಲ್ವೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ವಿಶೇಷ ರೈಲುಗಳ ಸೇವೆ (Special train service) ಯನ್ನು ಪರಿಚಯಿಸಲಾಗಿದೆ.
ಮಹಾಕುಂಭಮೇಳಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ವೇಳೆ ಪ್ರಯಾಣಿಕರ/ಭಕ್ತಾಧಿಗಳ ದಟ್ಟಣೆಯನ್ನು ತಪ್ಪಿಸುವುದಕ್ಕೆ ರೈಲ್ವೆ (Railway) ಮತ್ತೇ ಮುಂದಾಗಿದೆ.
ಇದನ್ನು ಓದಿ : ಪತಿಗೆ ‘ಹೆತ್ತವರನ್ನು ಬಿಟ್ಟು ನನ್ನ ಜೊತೆ ವಾಸಿಸು’ ಎಂದು ಹೇಳುವುದು ಕ್ರೌರ್ಯಕ್ಕೆ ಸಮ : Highcourt
ವಿಶೇಷ ರೈಲುಗಳ ವಿವರ ಇಲ್ಲಿದೆ :
ಹುಬ್ಬಳ್ಳಿ ಹಾಗೂ ವಾರಣಾಸಿ ನಡುವೆ ವಿಶೇಷ ರೈಲು (07383/84) : ರೈಲು ಸಂಖ್ಯೆ 07383 ಎಸ್‌ಎಸ್‌ಎಸ್ ಹುಬ್ಬಳ್ಳಿ – ವಾರಣಾಸಿ ವಿಶೇಷ ಎಕ್ಸ್‌ಪ್ರೆಸ್ ರೈಲು (SSS Hubli – Varanasi Special Express Train) ಸಂಚರಿಸಲಿದೆ. ಈ ರೈಲು ಫೆಬ್ರವರಿ 14, 21 ಮತ್ತು 28ರ ಶುಕ್ರವಾರದ ದಿನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಭಾನುವಾರ ಬೆಳಿಗ್ಗೆ 5.30ರ ವೇಳೆಗೆ ವಾರಣಾಸಿ ತಲುಪಲಿದೆ.
ವಾರಣಾಸಿ ಹಾಗೂ ಹುಬ್ಬಳ್ಳಿ ನಡುವೆ ವಿಶೇಷ ರೈಲು (07384) : ರೈಲು ಸಂಖ್ಯೆ 07384 ವಾರಣಾಸಿ – ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (Varanasi – SSS Hubli Special Express Train) ಸಹ ಸಂಚರಿಸಲಿದೆ. ಇದು ಫೆಬ್ರವರಿ 17, 24 ಮತ್ತು ಮಾರ್ಚ್ 3ರಂದು (ಸೋಮವಾರ) ಬೆಳಿಗ್ಗೆ 5 ಗಂಟೆಗೆ ವಾರಣಾಸಿಯಿಂದ ಹೊರಟು ಬುಧವಾರ ಮಧ್ಯಾಹ್ನ 12.45ಕ್ಕೆ ಹುಬ್ಬಳ್ಳಿಗೆ ಹಿಂದಿರುಗಲಿದೆ.
ಇದನ್ನು ಓದಿ : ವೆಸ್ಟರ್ನ್ ಉಡುಪಿನಲ್ಲಿ ಗ್ಲಾಮರಸ್ ಬೆಡಗಿಯಾದ ಮೋನಾಲಿಸಾ? ವಿಡಿಯೋ ವೈರಲ್.!
ಹುಬ್ಬಳ್ಳಿ – ವಾರಣಾಸಿ ರೈಲು ನಿಲ್ದಾಣಗಳ ವಿವರ : ಇನ್ನು ಈ ವಿಶೇಷ ರೈಲುಗಳು “ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹಮದ್‌ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ತಳವಾಡ, ತಲವಾ, ಪಿಪಾರಿಯಾ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಛೋಕಿ, ಮಿರ್ಜಾಪುರ್ ಹಾಗೂ ಚುನಾರ್” ನಿಲ್ದಾಣಗಳಲ್ಲಿ ರೈಲು ನಿಲುಗಡೆ ನೀಡಲಿದೆ ಎಂದು ಹೇಳಲಾಗಿದೆ.
ಇನ್ನು ಪ್ರತಿ ನಿಲ್ದಾಣದಲ್ಲಿ ರೈಲುಗಳ ಆಗಮನ ಹಾಗೂ ನಿರ್ಗಮನದ ನಿಖರ ಸಮಯ (Exact time) ವನ್ನು ನೋಡುವುದಕ್ಕೆ ಪ್ರಯಾಣಿಕರು ಭಾರತೀಯ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 139 (Helpline number 139) ಕ್ಕೆ ಕರೆ ಸಹ ಮಾಡಬಹುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.