Tuesday, March 18, 2025
HomeSpecial News"ಕೋಚಿಂಗ್ ಗುರು" ಫೆಬ್ರವರಿ 1 ಮತ್ತು 2 ರಂದು ನ್ಯೂಸ್​​ಫಸ್ಟ್​​ನಿಂದ ಮೆಗಾ Coaching Expo ಆಯೋಜನೆ.!
spot_img
spot_img
spot_img
spot_img
spot_img

“ಕೋಚಿಂಗ್ ಗುರು” ಫೆಬ್ರವರಿ 1 ಮತ್ತು 2 ರಂದು ನ್ಯೂಸ್​​ಫಸ್ಟ್​​ನಿಂದ ಮೆಗಾ Coaching Expo ಆಯೋಜನೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ನ್ಯೂಸ್​​ಫಸ್ಟ್ ರಾಜ್ಯದ ಅತ್ಯಂತ ಜನಪ್ರಿಯ ಸುದ್ದಿವಾಹಿನಿಯಾಗಿದ್ದು, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸೈಬರ್ ಕ್ರೈಂ ಸೇರಿದಂತೆ ನಾಡಿನ ಜನರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿಕೊಂಡು ಬಂದಿದೆ.

ಜೊತೆಗೆ ಮೇಲೆ ತಿಳಿಸಿರುವ ಕ್ಷೇತ್ರಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನ್ಯೂಸ್​​ಫಸ್ಟ್ ಕಳೆದ ನಾಲ್ಕುವರ್ಷಗಳಿಂದಲೂ ನಿರಂತರವಾಗಿ ಮಾಡಿಕೊಂಡು ಬಂದಿದೆ.

ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!

ಸದ್ಯ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳಿಗೆಂದೇ ವಿನೂತನ ಎಕ್ಸ್​ಪೋ ಒಂದನ್ನ ಆಯೋಜಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದವಾಗುವ ವಿದ್ಯಾರ್ಥಿಗಳು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು, ಯಾವ ಕೋಚಿಂಗ್ ಸೆಂಟರ್ ಆಯ್ಕೆ ಮಾಡಿಕೊಳ್ಳಬೇಕು, ಅವರಿಂದ ಯಾವ ರೀತಿಯ ಮಾರ್ಗದರ್ಶನ ಪಡೆಯಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಮೆಗಾ ಎಕ್ಸ್ಪೋ ಒಂದನ್ನ ಆಯೋಜಿಸಿದೆ.

ಈ ಎಕ್ಸ್​ಪೋ ನಲ್ಲಿ NEET, CET, JEE, KPSC, UPSC, CLAT, CAT, CA, PSI, PDO, ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಎಲ್ಲಾ ಕೋಚಿಂಗ್ ಸೆಂಟರ್ಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಲಿವೆ.

ಇದನ್ನು ಓದಿ : Belagavi : ಪ್ರತ್ಯೇಕ ಅಪ*ಘಾತ ; ತಹಶೀಲ್ದಾರ ಆಫೀಸ್ ಸಿಬ್ಬಂದಿ ಸೇರಿ ಮೂವರ ಸಾ*ವು.!

ಇದರ ಜೊತೆಗೆ ವಿದ್ಯಾರ್ಥಿಗಳು ಓದಿರುವುದನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ? ಪರೀಕ್ಷೆ ಸಮಯದಲ್ಲಿ ಎದುರಾಗುವ ಮಾನಸಿಕ ಒತ್ತಡದಿಂದ ಆಚೆ ಬರುವುದು ಹೇಗೆ? ಅಲ್ಲದೇ ಪರೀಕ್ಷೆಯ ನಂತರ ಸೀಟ್ ಆಯ್ಕೆ ಮಾಡಿಕೊಳ್ಳುವ ಸರಿಯಾದ ಕ್ರಮ ಯಾವುದು ಎಂಬುದರ ಬಗ್ಗೆ ಆಯಾ ವಿಷಯದಲ್ಲಿ ಪರಿಣಿತಿ ಹೊಂದಿರುವ ತಜ್ಞರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ.

ಅದೇ ರೀತಿ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಯಂತರ ನಾಗರೀಕ ಸೇವೆಗಳಿಗೆ ಸಿದ್ದವಾಗುವಾಗ ಹೇಗೆ ಆಯ್ಕೆ ಮಾಡಿಕೊಳ್ಳಬೇಕು, ಈ ಪರೀಕ್ಷೆಗಳನ್ನು ಎದುರಿಸುವಾಗ ಎದುರಾಗುವ ಸಮಸ್ಯೆಗಳೇನು? ಅದಕ್ಕೆ ಪರಿಹಾರವೇನು ಎಂಬುದನ್ನೂ ಸಹ ತಜ್ಞರು ತಿಳಿಸಿಕೊಡಲಿದ್ದಾರೆ. ಜೊತೆಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಂದರ್ಶನಗಳನ್ನ ಹೇಗೆ ಎದುರಿಸಬೇಕು ಎಂಬುದರ ಬಗ್ಗೆಯೂ ಮಾರ್ಗದರ್ಶನ ಮಾಡಲಿದ್ದಾರೆ.

ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!

ವಿಶೇಷ ಎಂಬಂತೆ ನಮ್ಮ ಎಕ್ಸ್ಪೋನಲ್ಲಿ ಭಾಗವಹಿಸಿ ಕೋಚಿಂಗ್ ಸೆಂಟರ್ಗಳಲ್ಲಿ ನೊಂದಣಿ ಮಾಡಿಕೊಳ್ಳವ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ನ್ಯೂಸ್​​ಫಸ್ಟ್​​ ಸ್ಕಾಲರ್ಶಿಪ್ ಸಹ ನೀಡಲು ಉದ್ದೇಶಿಸಿದೆ.

ಕೋಚಿಂಗ್ ಗುರು ಹೆಸರಿನಲ್ಲಿ ನಡೆಯುತ್ತಿರುವ ಈ ಮೆಗಾ ಎಕ್ಸ್ ಪೋ ಫೆಬ್ರವರಿ 1 ಮತ್ತು 2 ರಂದು ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜ್ಞಾನಜ್ಯೋತಿ ಆವರಣ, ಪ್ಯಾಲೇಸ್ ರಸ್ತೆ, ಮೈಸೂರು ಬ್ಯಾಂಕ್ ಸಮೀಪ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಅತಿಹೆಚ್ಚಿನ ಲಾಭವಾಗುವ ಕಾರಣ. ಶಾಲಾ/ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಎಕ್ಸ್ಪೋನಲ್ಲಿ ಭಾಗವಹಿಸಿ ಅದರ ಲಾಭ ಪಡೆದುಕೊಳ್ಳಬಹುದು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!