ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ, ಏಳು ಮದುವೆಯಾಗಿದ್ದ (A woman who had seven marriages) ವಿಚಾರ ಮುಚ್ಚಿಟ್ಟ ಕಿಲಾಡಿ ಲೇಡಿ, ಎಂಟನೇ ಮದುವೆಯಾಗಿ ಪತಿಯ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಆತನ ವಿರುದ್ದವೇ ಸುಳ್ಳು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಸುಳ್ಳು ಪ್ರಕರಣ (false case) ದಾಖಲಿಸಿದ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಬೈಕ್ ರಿಪೇರಿಗೆ ಹಣ ಕೇಳಿದ ಮೆಕ್ಯಾನಿಕ್ಗೆ ಬೆದರಿಕೆ ಹಾಕಿದ PSI ಸಸ್ಪೆಂಡ್.!
ಮೋಸ ಹೋದ ರಾಮ ಕೃಷ್ಣ (62) ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರು ಟೌನ್ನ (Maddur Town of Mandya District) ಎಚ್. ಎಂ. ವಿಜಯಲಕ್ಷ್ಮಿ (54), ಮಂಡ್ಯದ ರೇಖಾ (40), ವನಜಾ (45) ಮತ್ತು ನಂದೀಶ (30) ಎಂಬುವವರ ವಿರುದ್ಧ ಬಿಎನ್ 2 0 314, 316(2), 318(4), 351(2), 351(3), 61(2), 82(1), 82(2), 83, 3(5) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆ :
ದೂರುದಾರ ರಾಮಕೃಷ್ಣ ಅವರು ಪತ್ನಿ ಸಾವನ್ನಪ್ಪಿದ್ದಾರೆ. 2020ರ ನವೆಂಬರ್ನಲ್ಲಿ ಅವರಿಗೆ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಎಚ್. ಎಂ. ವಿಜಯಲಕ್ಷ್ಮೀ ಪರಿಚಯವಾಗಿದೆ. ನಂತರ ರಾಮನಗರದ ದೇವಸ್ಥಾನವೊಂದರಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ವಿಜಯಲಕ್ಷ್ಮೀ ಅವರನ್ನು ರಾಮಕೃಷ್ಣ ಎರಡನೇ ಮದುವೆಯಾಗಿದ್ದರಂತೆ (second marriage).
ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?
ಈ ಮದುವೆಗೂ ಮುಂಚೆ ಈ ಹಿಂದೆ ನನಗೆ ಮದುವೆಯಾಗಿದ್ದು, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವಿಜಯಲಕ್ಷ್ಮೀ ರಾಮಕೃಷ್ಣಗೆ ತಿಳಿಸಿದ್ದರು.
ಬಳಿಕ ರಾಮಕೃಷ್ಣ ಅವರನ್ನು ಮದುವೆಯಾದ ಕೆಲ ದಿನಗಳ ಬಳಿಕ ಅವರ ಪಿಎಫ್ ಹಣ ಕಬಳಿಸುವ ಉದ್ದೇಶದಿಂದ ಸಣ್ಣಪುಟ್ಟ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡುವುದು, ಮಾನಸಿಕ ಮತ್ತು ದೈಹಿಕ ಹಿಂಸೆ (Mental and physical violence) ನೀಡುವುದು, ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ರಾಮಕೃಷ್ಣ ಆರೋಪಿಸಿದ್ದಾರೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ತಾನು ಏಳು ಮದುವೆಯಾಗಿರುವ ವಿಚಾರವನ್ನು ವಿಜಯಲಕ್ಷ್ಮಿ ಮುಚ್ಚಿಟ್ಟಿದ್ದಾರೆ. ಮದುವೆ ಆದ ಗಂಡಂದಿರಿಗೆ ಗೊತ್ತಾಗದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಸ್ಸು ಕೊಡು ಎಂದು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರಂತೆ. ಇದೇ ರೀತಿ ರಾಮಕೃಷ್ಣ ಅವರಿಗೆ ತಿಳಿಯದಂತೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25 ಲಕ್ಷ ನಗದು ಕದ್ದೊಯ್ದಿದ್ದಾರೆ.
ಅಲ್ಲದೇ ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಎಂದು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹಿಂದಿನ ಸುದ್ದಿ : ಬೈಕ್ ರಿಪೇರಿಗೆ ಹಣ ಕೇಳಿದ ಮೆಕ್ಯಾನಿಕ್ಗೆ ಬೆದರಿಕೆ ಹಾಕಿದ PSI ಸಸ್ಪೆಂಡ್.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬೈಕ್ ರಿಪೇರಿ ಮಾಡಿದ ಹಣ ಕೇಳಿದ್ದಕ್ಕೆ (For asking money for repairing the bike) ದಿಂಡಿಗಲ್ ಮೂಲದ ಮೆಕ್ಯಾನಿಕ್ ಮೇಲೆ ಸಬ್ ಇನ್ಸ್ಪೆಕ್ಟರ್ ಓರ್ವ ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ (Madurai, Tamil Nadu) ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!
ಮೆಕ್ಯಾನಿಕ್ ಶ್ರೀನಿವಾಸ್ ಮೇಲೆ ಪಾಳಮೇಡು ಎಸ್ಐ ಈ ರೀತಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ (It has gone viral on social media) ಬಳಿಕ ಎಸ್ಐ ಅಣ್ಣಾದೊರೈಯನ್ನು ಸಸ್ಪೆಂಡ್ ಆದೇಶ ಹೊರಡಿಸಲಾಗಿದೆ.
ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಮಧುರೈ ವಾಡಿಪಟ್ಟಿಯಲ್ಲಿರುವ ವರ್ಕ್ಶಾಪ್ಗೆ ಹಲವು ದಿನಗಳಿಂದ ಎಸ್ಐ ಅಣ್ಣಾದೊರೈ ಬೈಕ್ ರಿಪೇರಿ ಮಾಡಿಸಿಕೊಳ್ಳಲು ಬರುತ್ತಿದ್ದರು. ಅಲ್ಲದೇ ಅವರು ಹಣ ನೀಡದೇ ಹಲವು ಸಲ ಫ್ರೀಯಾಗಿ ಬೈಕ್ ರಿಪೇರಿ ಮಾಡಿಸಿಕೊಂಡಿದ್ದಾರೆ. ಮೆಕ್ಯಾನಿಕ್ ಸುಮಾರು 8 ಸಾವಿರ ರೂ. ಮೌಲ್ಯದ ಬಿಡಿಭಾಗಗಳನ್ನು ಬಳಸಿ (Use accessories) ಎಸ್ಐ ಅವರ ಬೈಕ್ ರಿಪೇರಿ ಮಾಡಿದ್ದರು. ಆದರೆ ಆ ಹಣವನ್ನು ಎಸ್ಐ ನೀಡಿರಲಿಲ್ಲ ಎಂದು ವರದಿಯಾಗಿದೆ.
ಇನ್ನೂ ಕಳೆದ ವಾರ ಮತ್ತೆ ಬೈಕ್ ರಿಪೇರಿ ಮಾಡಿದಾಗ ಎಲ್ಲಾ ಸೇರಿ 10 ಸಾವಿರ ರೂಪಾಯಿ ಬಿಲ್ ಆಗಿದೆ ಎಂದು ಮೆಕ್ಯಾನಿಕ್ ಶ್ರೀನಿವಾಸ್ ಹೇಳಿದ್ದಾರೆ. ಅಲ್ಲದೇ ಇನ್ನುಮುಂದೆ ಹಣ ಕೊಟ್ಟರೆ ಮಾತ್ರ ಬೈಕ್ ರಿಪೇರಿ ಮಾಡುತ್ತೇನೆ. ಇಲ್ಲವಾದ್ರೆ ರಿಪೇರಿ ಮಾಡಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
ಈ ಮಾತುಗಳಿಂದ ಕೋಪಗೊಂಡ ಎಸ್ಐ ಅಣ್ಣಾದೊರೈ, ಸುಮ್ನೆ ಬೈಕ್ ರಿಪೇರಿ ಮಾಡಿ, ಇಲ್ಲಾಂದ್ರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ. ಗ್ಯಾರೇಜ್ಗೆ ಅಣ್ಣಾದೊರೈ ಹಿಂದಿರುಗಿ (return) ಬಂದಾಗ, ಬೈಕ್ ರಿಪೇರಿ ಮಾಡದೆ ಇರುವುದನ್ನು ಗಮನಿಸಿದ್ದಾರೆ. ಇದರಿಂದ ಸಿಟ್ಟಾದ ಅಣ್ಣಾದೊರೈ, ಮೆಕ್ಯಾನಿಕ್ ಶ್ರೀನಿವಾಸ್ ಅವರಿಗೆ ಕಪಾಳಮೋಕ್ಷ (A slap in the face) ಮಾಡಿದ್ದಾರೆ. ಎಸ್ಐ ಮಾತಿಗೆ ಬೆಲೆ ಕೊಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅಣ್ಣಾದೊರೈ ಜೊತೆಯಲ್ಲಿದ್ದ ಸ್ನೇಹಿತ ಕೂಡ ಬೆದರಿಕೆ (threat) ಹಾಕಿದ್ದಾನೆ.
ಹೀಗಾಗಿ ಶ್ರೀನಿವಾಸ್, ಎಸ್ಐ ಬೆದರಿಕೆ ಹಿನ್ನೆಲೆ ನೇರವಾಗಿ ಜಿಲ್ಲಾಧಿಕಾರಿ ಬಳಿ ತೆರಳಿ (Go directly to the Collector) ಅಣ್ಣಾದೊರೈ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಣ್ಣಾದೊರೈ ಅವರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.