ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಯುಸಿ ವಿದ್ಯಾರ್ಥಿಯೋರ್ವ ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ (Third Floor of College Building) ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ (Andra pradesh) ನಾರಾಯಣ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ (The shocking video has gone viral on social media).
ಇದನ್ನು ಓದಿ : ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ Car ಪಾರ್ಕ್ ಮಾಡತ್ತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.!
ಇಂದು (ಜ.23) ಬೆಳಿಗ್ಗೆ 10.15ಕ್ಕೆ ಕ್ಲಾಸ್ ನಡೆಯುತ್ತಿದ್ದ ವೇಳೆಯೇ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಕ್ಲಾಸ್ ರೂಮ್ ನಿಂದ ಹೊರಗೆ ಬಂದಿದ್ದಾನೆ.
ಆತ ಹೊರಗೆ ಬರುವುದನ್ನು ಇತರ ವಿದ್ಯಾರ್ಥಿಗಳು ನೋಡುತ್ತಿದ್ದರು. ಈ ವೇಳೆ ವಿದ್ಯಾರ್ಥಿ ಕಾರಿಡಾರಿನ ಕಟ್ಟೆ ಹತ್ತಿ 3ನೇ ಫ್ಲೋರ್ನಿಂದ ಕೆಳಗೆ ಹಾರಿದ್ದಾನೆ. ಇದರಿಂದ ಶಾಕ್ ಆದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊರಗೆ ಬಂದು ನೋಡುವಷ್ಟರಲ್ಲಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ.
😞😞Student Suicide 😳😳
A student from Anantapur who is studying intermediate 1st year at Narayana College committed suicide…Details are yet to be known 🙂↕️#CollegePressure #Suicide #StudentLife pic.twitter.com/AIFeNWSDfY
— Nikhil Sai (@Nikhilsai887) January 23, 2025
ಹಿಂದಿನ ಸುದ್ದಿ : ವಿಚ್ಛೇದನದ ಕೇಸ್ ನಲ್ಲಿ ಪುರುಷರು ಸಹ ಸಂತ್ರಸ್ತರು : ಹೈಕೋರ್ಟ್.
ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚೆಗೆ ವೈವಾಹಿಕ ವಿವಾದಗಳ ಪ್ರಕರಣಗಳಲ್ಲಿ (A case of matrimonial disputes) ಮಹಿಳೆಯರು ಹೆಚ್ಚಾಗಿ ಬಲಿಪಶುಗಳಾಗಿದ್ದರೂ, ಅಂತಹ ಪ್ರಕರಣಗಳಲ್ಲಿ ಪುರುಷರು ಸಹ ಸಂತ್ರಸ್ತರು. ಹೀಗಾಗಿ ಲಿಂಗ ಸಮಾನತೆಯ ಸಮಾಜ ಈಗಿನ ಅಗತ್ಯವಾಗಿದೆ (A gender egalitarian society is the need of the hour) ಎಂದು ಕರ್ನಾಟಕ High court ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು ಹೊರಡಿಸಿದ ಆದೇಶದಲ್ಲಿ ಈ ಬಗ್ಗೆ ತಿಳಿಸಲಾಗಿದೆ.
ಮಹಿಳೆಯೊಬ್ಬರು ತಮ್ಮ Divorce ಕುರಿತು ತಾವು ಹಾಜರಾಗಬೇಕಿರುವ ಕೋರ್ಟ್ ತಮ್ಮ ಮನೆಯಿಂದ 130 ಕಿಲೋಮೀಟರ್ ದೂರದಲ್ಲಿದೆ.
ಇದನ್ನು ಓದಿ : ಚಲಿಸುವ ರೈಲಿನಿಂದ ಕೆಳಗೆ Phone ಬಿದ್ದರೆ ಏನು ಮಾಡಿಬೇಕು ಗೊತ್ತೇ.?
ಹೀಗಾಗಿ ಪ್ರತಿ ಸಲವೂ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವರ್ಗಾವಣೆ ಅರ್ಜಿಯನ್ನು (Transfer application) ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ (Dismissed).
ಮಹಿಳೆ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ಪ್ರಕರಣದಲ್ಲಿ ಪ್ರತಿವಾದಿ ಆಕೆಯ ಪತಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿದರೆ, ಪತಿಗೆ ಇನ್ನಷ್ಟು ತೊಂದರೆಯಾಗುತ್ತೆ ಎಂದು ವಾದಿಸಿದ್ದು, ಇದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.
ಮಹಿಳೆಗೆ ಪುರುಷನಂತೆಯೇ ಸಮಾನ ಹಕ್ಕುಗಳಿವೆ. ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಪ್ರಾಥಮಿಕ ಬಲಿಪಶುಗಳು. ಆದರೆ ಪುರುಷರು ಸ್ತ್ರೀಯರ ಕ್ರೌರ್ಯದಿಂದ ಪ್ರಭಾವಿತರಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಇದನ್ನು ಓದಿ : ಘಟಪ್ರಭಾ ನದಿಯ Bridge ಗೆ ನೇಣು ಬಿಗಿದುಕೊಂಡು ದಂಪತಿ ಆ*ತ್ಮ*ಹ*ತ್ಯೆ.!
ಆದ್ದರಿಂದ, ಲಿಂಗ ಸಮಾನ ಸಮಾಜದ ಅವಶ್ಯಕತೆ ಇದೆ. ಆ ರೀತಿಯ ಸಮಾಜ ಲಿಂಗ ಅಥವಾ ಲಿಂಗದ ಆಧಾರದ ಮೇಲೆ ಕರ್ತವ್ಯಗಳನ್ನು ಬೇರ್ಪಡಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೈಕೋರ್ಟ್ ತಿಳಿಸಿದೆ.