ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನೋರ್ವ ಸಾರ್ವಜನಿಕರ ಎದುರೇ (In front of the public) ತನ್ನ ಯುವತಿಯ ಮೇಲೆ ಮಾರಣಾಂತಿಕವಾಗಿ (deadly) ಹಲ್ಲೆ ನಡೆಸಿದ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಿರಾತಕನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ Constable ಆತ್ಮಹತ್ಯೆಗೆ ಶರಣು.!
ನೂರಾರು ಜನರ ಮುಂದೆಯೇ ಯುವಕ ಯುವತಿಯನ್ನು ಕೊಲೆ ಮಾಡಿದ್ದಾನೆ. ಯುವಕ ಚಾಕುವಿನಿಂದ ಯುವತಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು (The young woman was severely assaulted with a knife), ರಕ್ತದ ಮಡುವಿನಲ್ಲಿ ಆಕೆ ನೆಲದ ಮೇಲೆ ಕುಳಿತಿದ್ದಾಳೆ. ಈ ವೇಳೆ ಯುವಕ ಕೈಯಲ್ಲಿ ಚಾಕು ಹಿಡಿದು ಅತ್ತ ಇತ್ತ ಓಡಾಡುತ್ತಿದ್ದಾನೆ. ಅಲ್ಲಿದ್ದವರು ನಿಂತು ನೋಡುತ್ತಿದ್ದಾರೆ ಹೊರತು ಒಬ್ಬರು ಸಹಾಯ ಮಾಡಲು ಮುಂದಾಗಲಿಲ್ಲ.
ಬಳಿಕ ಯುವಕ ಚಾಕುವನ್ನು ಕೆಳಗಿಳಿಸಿ ಜನರ ಜೊತೆ ಮಾತನಾಡಲು ಮುಂದಾದಾಗ, ಗುಂಪು ಗುಂಪಾಗಿ ಅವನ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಯುವಕನನ್ನು ಥಳಿಸಿ ಎಳೆದೊಯ್ದಿದ್ದಾರೆ.
ಇದನ್ನು ಓದಿ : ಬೈಕ್ ರಿಪೇರಿಗೆ ಹಣ ಕೇಳಿದ ಮೆಕ್ಯಾನಿಕ್‌ಗೆ ಬೆದರಿಕೆ ಹಾಕಿದ PSI ಸಸ್ಪೆಂಡ್.!
ಕೊಲೆಯಾದ ಯುವತಿ ಹಾಗೂ ಆರೋಪಿ ಯುವಕ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಯುವಕ ಯುವತಿಗೆ ಸಾಲ ಕೊಟ್ಟಿದ್ದ, ಬಹಳ ದಿನಗಳು ಕಳೆದರೂ ಯುವತಿ ಸಾಲವನ್ನು ಮರಳಿ ಕೊಟ್ಟಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಯುವಕ ಕಚೇರಿಯ ಪಾರ್ಕಿಂಗ್ ಸ್ಥಳದಲ್ಲಿಯೇ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ (Brutally murdered) ಎಂದು ವರದಿಯಿಂದ ತಿಳಿದು ಬಂದಿದೆ.
ವಿಡಿಯೋ ಲಿಂಕ್ ಇಲ್ಲಿದೆ :
ಹಿಂದಿನ ಸುದ್ದಿ : ಬೈಕ್ ರಿಪೇರಿಗೆ ಹಣ ಕೇಳಿದ ಮೆಕ್ಯಾನಿಕ್‌ಗೆ ಬೆದರಿಕೆ ಹಾಕಿದ PSI ಸಸ್ಪೆಂಡ್.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬೈಕ್ ರಿಪೇರಿ ಮಾಡಿದ ಹಣ ಕೇಳಿದ್ದಕ್ಕೆ (For asking money for repairing the bike) ದಿಂಡಿಗಲ್ ಮೂಲದ ಮೆಕ್ಯಾನಿಕ್ ಮೇಲೆ ಸಬ್ ಇನ್‌ಸ್ಪೆಕ್ಟರ್ ಓರ್ವ ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ (Madurai, Tamil Nadu) ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?
ಮೆಕ್ಯಾನಿಕ್ ಶ್ರೀನಿವಾಸ್ ಮೇಲೆ ಪಾಳಮೇಡು ಎಸ್‌ಐ ಈ ರೀತಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ (It has gone viral on social media) ಬಳಿಕ ಎಸ್‌ಐ ಅಣ್ಣಾದೊರೈಯನ್ನು ಸಸ್ಪೆಂಡ್ ಆದೇಶ ಹೊರಡಿಸಲಾಗಿದೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ಮಧುರೈ ವಾಡಿಪಟ್ಟಿಯಲ್ಲಿರುವ ವರ್ಕ್‌ಶಾಪ್‌ಗೆ ಹಲವು ದಿನಗಳಿಂದ ಎಸ್‌ಐ ಅಣ್ಣಾದೊರೈ ಬೈಕ್ ರಿಪೇರಿ ಮಾಡಿಸಿಕೊಳ್ಳಲು ಬರುತ್ತಿದ್ದರು. ಅಲ್ಲದೇ ಅವರು ಹಣ ನೀಡದೇ ಹಲವು ಸಲ ಫ್ರೀಯಾಗಿ ಬೈಕ್ ರಿಪೇರಿ ಮಾಡಿಸಿಕೊಂಡಿದ್ದಾರೆ. ಮೆಕ್ಯಾನಿಕ್ ಸುಮಾರು 8 ಸಾವಿರ ರೂ. ಮೌಲ್ಯದ ಬಿಡಿಭಾಗಗಳನ್ನು ಬಳಸಿ (Use accessories) ಎಸ್‌ಐ ಅವರ ಬೈಕ್ ರಿಪೇರಿ ಮಾಡಿದ್ದರು. ಆದರೆ ಆ ಹಣವನ್ನು ಎಸ್ಐ ನೀಡಿರಲಿಲ್ಲ ಎಂದು ವರದಿಯಾಗಿದೆ.
ಇನ್ನೂ ಕಳೆದ ವಾರ ಮತ್ತೆ ಬೈಕ್ ರಿಪೇರಿ ಮಾಡಿದಾಗ ಎಲ್ಲಾ ಸೇರಿ 10 ಸಾವಿರ ರೂಪಾಯಿ ಬಿಲ್ ಆಗಿದೆ ಎಂದು ಮೆಕ್ಯಾನಿಕ್ ಶ್ರೀನಿವಾಸ್ ಹೇಳಿದ್ದಾರೆ. ಅಲ್ಲದೇ ಇನ್ನುಮುಂದೆ ಹಣ ಕೊಟ್ಟರೆ ಮಾತ್ರ ಬೈಕ್ ರಿಪೇರಿ ಮಾಡುತ್ತೇನೆ. ಇಲ್ಲವಾದ್ರೆ ರಿಪೇರಿ ಮಾಡಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಇದನ್ನು ಓದಿ : ಅಪಘಾತಕ್ಕೀಡಾದ Truck ಚಾಲಕನಿಗೆ ಜನರು ಮಾಡಿದ್ದೇನು ಗೊತ್ತೇ.? ಈ ವಿಡಿಯೋ ನೋಡಿ.!
ಈ ಮಾತುಗಳಿಂದ ಕೋಪಗೊಂಡ ಎಸ್ಐ ಅಣ್ಣಾದೊರೈ, ಸುಮ್ನೆ ಬೈಕ್ ರಿಪೇರಿ ಮಾಡಿ, ಇಲ್ಲಾಂದ್ರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ. ಗ್ಯಾರೇಜ್‌ಗೆ ಅಣ್ಣಾದೊರೈ ಹಿಂದಿರುಗಿ (return) ಬಂದಾಗ, ಬೈಕ್ ರಿಪೇರಿ ಮಾಡದೆ ಇರುವುದನ್ನು ಗಮನಿಸಿದ್ದಾರೆ. ಇದರಿಂದ ಕೋಪಗೊಂಡ ಅಣ್ಣಾದೊರೈ, ಶ್ರೀನಿವಾಸ್ ಅವರಿಗೆ ಕಪಾಳಮೋಕ್ಷ (A slap in the face) ಮಾಡಿದ್ದಾರೆ. ಎಸ್ಐ ಮಾತಿಗೆ ಬೆಲೆ ಕೊಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅಣ್ಣಾದೊರೈ ಜೊತೆಯಲ್ಲಿದ್ದ ಸ್ನೇಹಿತ ಕೂಡ ಬೆದರಿಕೆ (threat) ಹಾಕಿದ್ದಾನೆ.
ಹೀಗಾಗಿ ಶ್ರೀನಿವಾಸ್, ಎಸ್‌ಐ ಬೆದರಿಕೆ ಹಿನ್ನೆಲೆ ನೇರವಾಗಿ ಜಿಲ್ಲಾಧಿಕಾರಿ ಬಳಿ ತೆರಳಿ (Go directly to the Collector) ಅಣ್ಣಾದೊರೈ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಣ್ಣಾದೊರೈ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.