ಜನಸ್ಪಂದನ ನ್ಯೂಸ್, ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ (Mudhol of Bagalkote district) ನಗರದ ಹೊರವಲಯದಲ್ಲಿರುವ ಯಾದವಾಡ ಸೇತುವೆಯ ಕಂಬಕ್ಕೆ ದಂಪತಿ ಹಗ್ಗ ಕಟ್ಟಿ ನೇಣಿಗೆ ಕೊರಳೊಡ್ಡಿದ (Surrender by tying a rope to a bridge post) ಘಟನೆ ನಡೆದಿದೆ.
ಮೃತ ದಂಪತಿ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಲಾಳಿ ಹಾಗೂ ಮಹಾದೇವಿ ಲಾಳಿ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ Car ಪಾರ್ಕ್ ಮಾಡತ್ತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.!
ಅತಿಯಾದ ಸಾಲದಿಂದ (Excessive debt) ಮನನೊಂದಿದ್ದ ದಂಪತಿ ಸೇತುವೆಯ ಬಳಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ :
ಈ ದಂಪತಿ ಮೂಲತಃ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದವರಾಗಿದ್ದು, ಕುಟುಂಬ ನಿರ್ವಹಣೆ ಹಾಗೂ ಕೃಷಿಗೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನು ಓದಿ : ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ಬಂದಿದ್ದ ಬಾಲಕರು ನದಿ ನೀರಲ್ಲಿ ಮುಳುಗಿ ಸಾವು.!
ಆದರೆ ಸಾಲ ತೀರಿಸಲಾಗದೆ ತೀವ್ರ ಮನನೊಂದಿದ್ದ ಇವರು ಸಾಯಲು ನಿರ್ಧರಿಸಿದ್ದಾರೆ. ಇಬ್ಬರು ರಾತ್ರಿ ಸೇತುವೆ ಬಳಿ ಬಂದು ಕಂಬಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ ಈ ಮಾರ್ಗದಲ್ಲಿ ತೆರಳುತ್ತಿದ್ದ ಸಾರ್ವಜನಿಕರು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಟ್ರೈನ್‌ನಲ್ಲಿ ಬೆಂಕಿ ವದಂತಿ : ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 10 ಜನರ ಸಾ*ವು ; ವಿಡಿಯೋ.!
ಸ್ಥಳಕ್ಕೆ ಮುಧೋಳ ಸಿಪಿಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಂದಿನ ಸುದ್ದಿ : ವಿಚ್ಛೇದನದ ಕೇಸ್ ನಲ್ಲಿ ಪುರುಷರು ಸಹ ಸಂತ್ರಸ್ತರು : ಹೈಕೋರ್ಟ್.
ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚೆಗೆ ವೈವಾಹಿಕ ವಿವಾದಗಳ ಪ್ರಕರಣಗಳಲ್ಲಿ (A case of matrimonial disputes) ಮಹಿಳೆಯರು ಹೆಚ್ಚಾಗಿ ಬಲಿಪಶುಗಳಾಗಿದ್ದರೂ, ಅಂತಹ ಪ್ರಕರಣಗಳಲ್ಲಿ ಪುರುಷರು ಸಹ ಸಂತ್ರಸ್ತರು. ಹೀಗಾಗಿ ಲಿಂಗ ಸಮಾನತೆಯ ಸಮಾಜ ಈಗಿನ ಅಗತ್ಯವಾಗಿದೆ (A gender egalitarian society is the need of the hour) ಎಂದು ಕರ್ನಾಟಕ High court ಅಭಿಪ್ರಾಯಪಟ್ಟಿದೆ.
ಇದನ್ನು ಓದಿ : Super glue ಹಾಕಿ ತುಟಿಗಳನ್ನು ಮುಚ್ಚಿದ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.!
ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು ಹೊರಡಿಸಿದ ಆದೇಶದಲ್ಲಿ ಈ ಬಗ್ಗೆ ತಿಳಿಸಲಾಗಿದೆ.
ಮಹಿಳೆಯೊಬ್ಬರು ತಮ್ಮ Divorce ಕುರಿತು ತಾವು ಹಾಜರಾಗಬೇಕಿರುವ ಕೋರ್ಟ್ ತಮ್ಮ ಮನೆಯಿಂದ 130 ಕಿಲೋಮೀಟರ್ ದೂರದಲ್ಲಿದೆ.
ಇದನ್ನು ಓದಿ : ರಸ್ತೆಯಲ್ಲಿ ಮಲಗಿದ್ದ ನಾಯಿಮರಿಯ ಮೇಲೆ ಕಾರು ಹತ್ತಿಸಿದ ಕ್ರೂರ ನಿವೃತ್ತ Police ಸಿಬ್ಬಂದಿ.!
ಹೀಗಾಗಿ ಪ್ರತಿ ಸಲವೂ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವರ್ಗಾವಣೆ ಅರ್ಜಿಯನ್ನು (Transfer application) ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ (Dismissed).
ಮಹಿಳೆ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ಪ್ರಕರಣದಲ್ಲಿ ಪ್ರತಿವಾದಿ ಆಕೆಯ ಪತಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿದರೆ, ಪತಿಗೆ ಇನ್ನಷ್ಟು ತೊಂದರೆಯಾಗುತ್ತೆ ಎಂದು ವಾದಿಸಿದ್ದು, ಇದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.
ಇದನ್ನು ಓದಿ : ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!
ಮಹಿಳೆಗೆ ಪುರುಷನಂತೆಯೇ ಸಮಾನ ಹಕ್ಕುಗಳಿವೆ. ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಪ್ರಾಥಮಿಕ ಬಲಿಪಶುಗಳು. ಆದರೆ ಪುರುಷರು ಸ್ತ್ರೀಯರ ಕ್ರೌರ್ಯದಿಂದ ಪ್ರಭಾವಿತರಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಆದ್ದರಿಂದ, ಲಿಂಗ ಸಮಾನ ಸಮಾಜದ ಅವಶ್ಯಕತೆ ಇದೆ. ಆ ರೀತಿಯ ಸಮಾಜ ಲಿಂಗ ಅಥವಾ ಲಿಂಗದ ಆಧಾರದ ಮೇಲೆ ಕರ್ತವ್ಯಗಳನ್ನು ಬೇರ್ಪಡಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೈಕೋರ್ಟ್ ತಿಳಿಸಿದೆ.