Wednesday, February 5, 2025
HomeHealth and FitnessHealth : ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!
spot_img
spot_img
spot_img
spot_img

Health : ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಲವರು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಬಂದರೆ ನೈಸರ್ಗಿಕ ಪರಿಹಾರಗಳನ್ನು (natural remedy) ಬಳಸುತ್ತಾರೆ. ಅವುಗಳಲ್ಲಿ ಮುಲೇಥಿ ಬೇರು (ಲೈಕೋರೈಸ್ ರೂಟ್) ಒಂದಾಗಿದೆ.

ಯಷ್ಟಿಮಧು ಚೂರ್ಣ ಎಂಬ ಹೆಸರಿನಲ್ಲಿ ಈ ಬೇರಿನ ಪುಡಿ ಆಯುರ್ವೇದದ ಅಂಗಡಿಗಳಲ್ಲಿ (Ayurvedic shops) ಸಿಗುತ್ತದೆ. ಇದರ ಬೇರನ್ನು ಅಥವಾ ಈ ಚೂರ್ಣವನ್ನು ಸ್ವಲ್ಪವೇ ಸ್ವಲ್ಪ ತೆಗೆದುಕೊಂಡು ನೀರಿನಲ್ಲಿ ಹತ್ತು ನಿಮಿಷ ಕುದಿಸಿ ಊಟ ಮಾಡುವುದಕ್ಕಿಂತ ಮುಂಚೆ (Boil for ten minutes before eating) ಕುಡಿಯುವುದರಿಂದ ಜಠರದ ಒಳಭಾಗದಲ್ಲಿ (Inside the stomach) ರಕ್ಷಣಾ ಕವಚವೊಂದನ್ನು ನಿರ್ಮಿಸಿ ಉರಿ ಮತ್ತು ಎದೆಯುರಿ ಅಥವಾ ಹುಳಿತೇಗು ಆಗದಂತೆ ತಡೆಯಬಹುದು ಎಂದು ವರದಿಯಾಗಿದೆ.

ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!

ಇಂಡೊಮೆಥಾಸಿನ್- ಪ್ರೇರಿತ ಹುಣ್ಣುಗಳನ್ನು (Indomethacin- induced ulcers) ಹೊಂದಿರುವ ಇಲಿಗಳಿಗೆ ಲೈಕೋರೈಸ್ ಎಫ್‌ಟಿ (ಫಾಮೋಟಿಡಿನ್) ಸಂಯೋಜನೆಯ ಚಿಕಿತ್ಸೆಯನ್ನು ನೀಡಲಾಯಿತು. ಅಚ್ಚರಿಯ ಸಂಗತಿಯೆಂದರೆ ಇತರೆ ಚಿಕಿತ್ಸೆಗಿಂತ ಎಫ್‌ಟಿ ಮತ್ತು ಲೈಕೋರೈಸ್‌ಗಳು ಹುಣ್ಣುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಪಬ್‌ಮೆಡ್‌ನಲ್ಲಿ ಪ್ರಕಟವಾದ ಜೋರ್ಡಾನ್‌ನ ಅಲ್- ಇಸ್ರಾ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಫಾರ್ಮಸಿಯು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಪ್ರಯೋಜನಗಳು :

ಮುಲೇಥಿಯಲ್ಲಿ ಫೈಟೊಈಸ್ಟ್ರೊಜೆನ್‌ಗಳು ಇದ್ದು ಅದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು (regulate hormone levels) ಸಹಾಯ ಮಾಡುತ್ತದೆ.

ಇದನ್ನು ಓದಿ : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!

ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಇದು ತುಂಬಾ ಪ್ರಯೋಜನಕಾರಿ. ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸಿ (Increase the production of mucus in the stomach), ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ಅಲ್ಲದೇ ಗ್ಯಾಸ್ಟ್ರಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಮುಲೇಥಿಯು ಸಕ್ಕರೆಗಿಂತ ಸಿಹಿಯಾಗಿರುತ್ತದೆ. ಹಾಗಾಗಿ ಸಿಹಿತಿಂಡಿಗಳು ಮತ್ತು ಔಷಧಿಗಳನ್ನು ತಯಾರಿಸುವಾಗ ನೈಸರ್ಗಿಕ ಸಿಹಿಕಾರಕವಾಗಿ (Natural sweetener) ಇದನ್ನು ಉಪಯೋಗಿಸಲಾಗುತ್ತದೆ.

ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!

ಸಂಧಿವಾತ, ಅಲರ್ಜಿ ಮತ್ತು ಚರ್ಮದ ಕಿರಿಕಿರಿಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು (Immune system) ಇದು ಬಲಪಡಿಸುತ್ತದೆ.

ನೋಯುತ್ತಿರುವ ಗಂಟಲು ಮತ್ತು ಉಸಿರಾಟದ ಸೋಂಕುಗಳಿಂದ ಮುಲೇಥಿಯು ಪರಿಹಾರವನ್ನು ನೀಡುತ್ತದೆ.

ಇದನ್ನು ಓದಿ : ಅಪಘಾತಕ್ಕೀಡಾದ Truck ಚಾಲಕನಿಗೆ ಜನರು ಮಾಡಿದ್ದೇನು ಗೊತ್ತೇ.? ಈ ವಿಡಿಯೋ ನೋಡಿ.!

ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮುಲೇಥಿ ಸಹಾಯ ಮಾಡುತ್ತದೆ.

ಹಾರ್ಮೋನುಗಳ ಅಸಮತೋಲನ ಅಥವಾ ಋತುಬಂಧದ ಲಕ್ಷಣಗಳನ್ನು (Menopausal symptoms) ಅನುಭವಿಸುತ್ತಿರುವ ಮಹಿಳೆಯರಿಗೆ ಇದರಿಂದ ಪ್ರಯೋಜನ ಪಡೆಯಬಹುದು.

ಆದರೆ ಮುಲೇಥಿಯ ದೀರ್ಘಾವಧಿಯ ಸೇವನೆ ಅಥವಾ ಮಿತಿಮೀರಿದ ಬಳಕೆಯು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ (Long- term consumption or overuse can cause side effects). ಆದ್ದರಿಂದ ನೀವು ನಿಯಮಿತವಾಗಿ ಬಳಸುವ ಯೋಚನೆಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಹಿಂದಿನ ಸುದ್ದಿ : ಖ್ಯಾತ ನಟನ ಕಾರು ಭೀಕರ ಅಪಘಾತ; ಶಾಕಿಂಗ್ ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್, ಬೆಂಗಳೂರು : ದುಬೈನಲ್ಲಿ ಟ್ರೇನಿಂಗ್ ಪಡೆಯುತ್ತಿದ್ದ ವೇಳೆ (While getting training in Dubai) ನಟ ಅಜಿತ್ ಕುಮಾರ್ ರೇಸ್ ಕಾರು ಭೀಕರ ಅಪಘಾತಕ್ಕೀಡಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ವರದಿಗಳ ಪ್ರಕಾರ ಅಪಘಾತವಾದ ನಟ ಅಜಿತ್ ಕಾರು ಚಲಾಯಿಸುತ್ತಿದ್ದರಂತೆ.

ಇದನ್ನು  : Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!

ಇನ್ನೂ ಈ ಅಪಘಾತದ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ಅಜಿತ್ ಕುಮಾರ್ ಕಾರು ಅಪಘಾತದ ವಿಡಿಯೋ (accident video) ಇದೀಗ ಹೊರ ಬಂದಿದೆ.

ಕಾರಿನ ಸ್ಪೀಡ್ ಗೆ ಅದು ತಡೆಗೋಡೆಗೆ ಡಿಕ್ಕಿ ಹೊಡೆಯುವುದನ್ನು (Hit the barrier) ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ವಿಡಿಯೋದಲ್ಲಿ ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿರುವುದನ್ನು (The front of the car was completely crushed in the impact) ನೋಡಬಹುದು. ಕಾರಿನ ಸ್ಥಿತಿ ಕಂಡು ಅಜಿತ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸುದೈವಶಾತ್ ಅಜಿತ್ ಗೆ ಯಾವುದೇ ತೊಂದರೆಯಾಗಿಲ್ಲ. ಅಜಿತ್ ಸ್ಥಿತಿ ಸಹಜವಾಗಿದೆ ಎಂದು ಅವರ ಮ್ಯಾನೇಜರ್ ಸುರೇಶ್ ಚಂದ್ರ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಾರು ಅಪಘಾತಕ್ಕೀಡಾಗುತ್ತಿದ್ದ ಹಾಗೆಯೇ ಸ್ಥಳಕ್ಕೆ ಧಾವಿಸಿದ ತುರ್ತು ಘಟಕದ ಸಿಬ್ಬಂದಿ (Emergency Unit Staff) ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಅಜಿತ್ ಕೂಡ ಆರಾಮಾಗಿಯೇ ಕಾರಿನಿಂದ ಇಳಿದು ಸಿಬ್ಬಂದಿ ಜೊತೆಗೆ ಸಾಗುತ್ತಿರುವುದನ್ನು ಕಾಣಬಹುದು.

ಖ್ಯಾತ ನಟನ ಕಾರು ಭೀಕರ ಅಪಘಾತ; Shocking ವಿಡಿಯೋ ನೋಡಿ.!

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!