Saturday, January 18, 2025
HomeNewsShocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!
spot_img

Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣ (Social media) ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಯುವಜನತೆಯಂತೂ ಈ ಸೋಶಿಯಲ್ ಮೀಡಿಯಾಗಳಿಗೆ ಅದೆಷ್ಟು ಅಡಿಕ್ಟ್ ಆಗಿದ್ದಾರೆ ಎಂದರೆ ನಿಮಗೆ ನಂಬಲು ಅಸಾಧ್ಯವೆನಿಸುತ್ತದೆ ಈ ಆಘಾತಕಾರಿ ಘಟನೆ.

ಅದೇನೆಂದರೆ 10 ವರ್ಷದ ಬಾಲಕಿಯೊಬ್ಬಳು (girl) ಅಪ್ರಾಪ್ತ ವಯಸ್ಸಿನ ಬಾಲಕನ ಜತೆ ಓಡಿ ಹೋದ ಘಟನೆ ಗುಜರಾತ್‌ನ ಧನ್ಸೂರಾ (Dhansoora in Gujarat) ಗ್ರಾಮದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಶಿಕ್ಷಕಿ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ; DDPI ಕಚೇರಿಯ ಅಧಿಕಾರಿ ಲೋಕಾಯುಕ್ತ ಬಲೆಗೆ.!

ತನ್ನ ತಾಯಿಯ ಮೊಬೈಲ್‌ನಲ್ಲಿ 10ರ ಬಾಲಕಿಯೋರ್ವಳು ಕಳೆದ ಕೆಲ ದಿನಗಳಿಂದ ಇನ್ಸ್ಟಾಗ್ರಾಮ್‌ ಖಾತೆಯ ಮೂಲಕ 16ರ ವರ್ಷದ ಬಾಲಕನ ಜತೆ ಚಾಟಿಂಗ್‌ ಮಾಡಲು ಶುರು ಮಾಡಿದ್ದು, ಇಬ್ಬರ ನಡುವಿನ ಮೆಸೇಜ್‌ ಅತ್ಮೀಯತೆಗೆ (Intimacy) ತಿರುಗಿದೆ. ಇದು ತುಂಬಾ ಗಾಢವಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಬಳಿಕ ಬಾಲಕಿ ಮನೆ ಬಿಟ್ಟು ಹೊರಗೆ ಹೋಗಿದ್ದಾಳೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಮ್ಮ ಮಗಳನ್ನು ಅಪಹರಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಬಾಲಕಿಯ ಮನೆಯವರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ (missing case) ದಾಖಲಿಸಿದ್ದಾರೆ.

ಇದನ್ನು ಓದಿ : ರೊಮ್ಯಾಂಟಿಕ್‌ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!

ದೂರು ದಾಖಲಿಸಿದ ಕೆಲವೇ ಗಂಟೆಗಳಲ್ಲಿ (In a few hours) ಇಬ್ಬರು ಅಪ್ರಾಪ್ತರನ್ನು ಪೊಲೀಸರು ಪತ್ತೆ ಮಾಡಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಾವಿಬ್ಬರು ಇನ್ಸ್ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದೇವೆ. ಅಲ್ಲದೆ ನಾವಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ (We both love each other). ಸ್ನೇಹಿತರ ಸಹಾಯ ಪಡೆದು ಓಡಿ ಹೋಗಲು ಪ್ಲ್ಯಾನ್ ಮಾಡಿ, ಮನೆ ಬಿಟ್ಟು ಬಂದಿರುವುದಾಗಿ ಪೊಲೀಸರ ಮುಂದೆ ಇಬ್ಬರು ಅಪ್ರಾಪ್ತರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಹಿಂದಿನ ಸುದ್ದಿ : Health : ನಿಮ್ಮ ಉಗುರುಗಳು ಈ ರೀತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನ ದೇಹದ ಪ್ರತಿಯೊಂದು ಭಾಗವು ಮುಖ್ಯ. ಸ್ವಲ್ಪ ಕಡೆಗಣಿಸಿದರೆ ದೇಹದ ಆರೋಗ್ಯ ದೊಡ್ಡ ಹಾನಿಯನ್ನು ಉಂಟು ಮಾಡಬಹುದು (Can cause great damage). ಕೆಲವರ ಉಗುರುಗಳು ಸುಮ್ಮಸುಮ್ಮನೆ ಉದುರುವುದು, ಬಣ್ಣ ಬದಲಾಗಿರುತ್ತವೆ.

ಇದನ್ನು ಓದಿ : ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ದುರ್ಬಲ ಉಗುರುಗಳು ಆಂತರಿಕ ಅಂಶಗಳಿಂದ, ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗಬಹುದು (Weak nails can be caused by internal factors, mainly our diet) ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶ ಕೊರತೆಯಿಂದಲೇ ಉಗುರುಗಳು ದುರ್ಬಲವಾಗುವುದು.

* ಕೆಲವರ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೀಗಾಗಲು ಅತಿಯಾದ ಧೂಮಪಾನ (smoking) ಸಾಮಾನ್ಯ ಕಾರಣವಾಗಿರಬಹುದು. ಅಲ್ಲದೇ ಹಳದಿ ಉಗುರುಗಳು ಮಧುಮೇಹದ ಚಿಹ್ನೆಯಾಗಿರಬಹುದು (A sign of diabetes). ಈ ರೀತಿಯ ಉಗುರುಗಳು ಥೈರಾಯ್ಡ್ ಕಾಯಿಲೆ, ಉಸಿರಾಟದ ಕಾಯಿಲೆ, ಶಿಲೀಂಧ್ರಗಳ ಸೋಂಕು, ರುಮಟಾಯ್ಡ್ ಮತ್ತು ಸಂಧಿವಾತ ಕಾಯಿಲೆಗಳನ್ನು ಸೂಚಿಸುತ್ತವೆ.

ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!

* ಕೆಲವರ ಉಗುರುಗಳು ಚಮಚದ ಆಕಾರದಲ್ಲಿರುತ್ತವೆ. ಇವರು ರಕ್ತಹೀನತೆ, ಹೈಪೋಥೈರಾಯ್ಡಿಸಮ್ ಅಥವಾ ಯಕೃತ್ತಿನ ಸಮಸ್ಯೆಗಳನ್ನು ತುತ್ತಾಗಿರಬಹುದು. ಆಹಾರದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ, ಮುಖ್ಯವಾಗಿ ಕಬ್ಬಿಣ ಭರಿತ ಆಹಾರಗಳ ಮೇಲೆ ಗಮನ ನೀಡಬೇಕು.

* ತೆಳುವಾದ ಮತ್ತು ಮೃದುವಾದ ಉಗುರುಗಳನ್ನು ಹೊಂದಿದ್ದರೆ ಅದು ವಿಟಮಿನ್ ಬಿ ಕೊರತೆಯನ್ನು ಸೂಚಿಸುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಆಹಾರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕೊಬ್ಬಿನಾಮ್ಲ ಇರುವ ಆಹಾರ ಸೇವಿಸುವುದು ಉತ್ತಮ.

ಇದನ್ನು ಓದಿ : C. T ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಸಚಿವೆ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR.!

* ಉಗುರುಗಳು ಕುಣಿಕೆಯ ರೀತಿ ಇದ್ದರೆ ಕಾಣಿಸಿಕೊಂಡರೆ, ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತ ಎಂದು ಪೌಷ್ಟಿಕತಜ್ಞರ (Nutritionist) ಅಭಿಪ್ರಾಯ. ಅಲ್ಲದೇ ಹೃದಯದ ಸಮಸ್ಯೆಯನ್ನು ಕೂಡ ಇರಬಹುದು.

* ಉಗುರುಗಳ ಮೇಲಿನ ಬಿಳಿ ಚುಕ್ಕೆಗಳು ಕೇವಲ ಚುಕ್ಕೆಗಳಲ್ಲ, ಇವು ಸತು ಕೊರತೆ ಅಥವಾ ಶಿಲೀಂಧ್ರಗಳ ಸೋಂಕಿನ (Fungal infection) ಸಂಕೇತವಾಗಿರಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!