ಜನಸ್ಪಂದನ ನ್ಯೂಸ್, ಬೆಂಗಳೂರು : ರಸ್ತೆ ಅಪಘಾತ ಸಂಭವಿಸಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು (The driver was seriously injured), ಸೀಟಿನಲ್ಲಿ ಸಿಲುಕಿಕೊಂಡ ಅವರು ಅಲ್ಲಿದ್ದ ಜನರಿಗೆ ಸಹಾಯ ಮಾಡುವಂತೆ ಕೇಳಿದ್ದಾರೆ. ಆದರೆ ಮಾನವೀಯತೆ ಮರೆತ ಜನರು ಚಾಲಕನ ಮಾತು ಕೇಳಿಸಿಕೊಳ್ಳದೇ ಅವರು ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಕದಿಯುತ್ತಿದ್ದಾರೆ.
ಸದ್ಯ ಇಂತದ್ದೊಂದು ಹೃದಯವಿದ್ರಾವಕ ಘಟನೆಯ (heartbreaking incident) ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ನಡುರಸ್ತೆಯಲ್ಲೇ ಮೈಮರೆತ ಜೋಡಿ : ಪೊಲೀಸ್ ಎಂಟ್ರಿ ; ವಿಡಿಯೋ Viral.!
ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ (Where did it happen)? ಯಾವಾಗ ನಡೆದಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಅಪಘಾತವಾದ ಟ್ರಕ್ ನ ಮುಂದಿನ ಗಾಜುಗಳು ಪುಡಿಪುಡಿಯಾಗಿವೆ. ಈ ವೇಳೆ ಟ್ರಕ್ ಚಾಲಕ ಗಾಯಗೊಂಡು ಸೀಟಿನಲ್ಲಿ ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!
ಇಂತಹ ಪರಿಸ್ಥಿತಿಯಲ್ಲಿ ಚಾಲಕನನ್ನು ರಕ್ಷಿಸಬೇಕಾದ ಜನರು ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಮಾನವೀಯತೆ ಇಲ್ಲದ (Without humanity) ವ್ಯಕ್ತಿಗಳು ಸಹಾಯ ಮಾಡುವ ಬದಲು ಅವರ ಮೊಬೈಲ್, ಹಣ ಮತ್ತಿತರ ವಸ್ತುಗಳನ್ನು ಕದ್ದುಕೊಂಡು ಅಲ್ಲಿಂದ ತೆರಳುತ್ತಿದ್ದಾರೆ.
ಈ ವಿಡಿಯೋ ನೋಡಿದ ಚಾಲಕನ ಮಕ್ಕಳಿಗೆ ಏನನ್ನಿಸುತ್ತದೆ? ಎಂದು ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.
ವಿಡಿಯೋ ನೋಡಿ :
Humanity Died on the Road
An injured truck driver cried for help, but instead of helping, people looted his phone and wallet.
When greed replaces compassion, humanity dies#bangalore #bengaluru #humanity #driver@DgpKarnataka @KarnatakaCops @BlrCityPolice @blrcitytraffic @CPBlr… pic.twitter.com/2wSkDqsCkv— Karnataka Portfolio (@karnatakaportf) January 3, 2025
ಸಂಪಾದಕೀಯ : “ಮಾನವೀಯತೆ” ಎಂಬ ಪದವು ಸಾಮಾನ್ಯವಾಗಿ ಮಾನವನೊಳಗಿನ ದಯೆ, ಸಹಾನುಭೂತಿ, ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ನ್ಯಾಯತತ್ವಗಳನ್ನು ಸೂಚಿಸುತ್ತದೆ. ಇದು ಇತರರಿಗೆ ನೋವು, ದುಃಖ ಮತ್ತು ಅನ್ಯಾಯದಿಂದ ದೂರ ಇರುವ ಪ್ರಕ್ರಿಯೆಯಾಗಿದೆ. ಮಾನವೀಯತೆ ಎನ್ನುವುದು ಸಂಬಂಧಗಳನ್ನು, ಸಮುದಾಯವನ್ನು ಮತ್ತು ಜಗತ್ತನ್ನು ಉತ್ತಮವಾಗಿ ರೂಪಿಸಲು ಮಾನವನ ತಮ್ಮ ಸ್ವಭಾವ, ಪದ್ಧತಿಗಳು ಮತ್ತು ಕ್ರಿಯೆಗಳ ಮೂಲಕ ತೊಡಗಿಕೊಳ್ಳುವ ಹಿತಚಿಂತನೆಗಳನ್ನು ವ್ಯಕ್ತಪಡಿಸುವುದೇ ಆಗಿದೆ.
ಆದರೆ ಈ ಮೇಲಿನ ವಿಡಿಯೋ ನೋಡಿದರೆ.?
ಹಿಂದಿನ ಸುದ್ದಿ : Health : ನಿಮ್ಮ ಉಗುರುಗಳು ಈ ರೀತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನ ದೇಹದ ಪ್ರತಿಯೊಂದು ಭಾಗವು ಮುಖ್ಯ. ಸ್ವಲ್ಪ ಕಡೆಗಣಿಸಿದರೆ ದೇಹದ ಆರೋಗ್ಯ ದೊಡ್ಡ ಹಾನಿಯನ್ನು ಉಂಟು ಮಾಡಬಹುದು (Can cause great damage). ಕೆಲವರ ಉಗುರುಗಳು ಸುಮ್ಮಸುಮ್ಮನೆ ಉದುರುವುದು, ಬಣ್ಣ ಬದಲಾಗಿರುತ್ತವೆ.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
ದುರ್ಬಲ ಉಗುರುಗಳು ಆಂತರಿಕ ಅಂಶಗಳಿಂದ, ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗಬಹುದು (Weak nails can be caused by internal factors, mainly our diet) ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶ ಕೊರತೆಯಿಂದಲೇ ಉಗುರುಗಳು ದುರ್ಬಲವಾಗುವುದು.
* ಕೆಲವರ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೀಗಾಗಲು ಅತಿಯಾದ ಧೂಮಪಾನ (smoking) ಸಾಮಾನ್ಯ ಕಾರಣವಾಗಿರಬಹುದು. ಅಲ್ಲದೇ ಹಳದಿ ಉಗುರುಗಳು ಮಧುಮೇಹದ ಚಿಹ್ನೆಯಾಗಿರಬಹುದು (A sign of diabetes). ಈ ರೀತಿಯ ಉಗುರುಗಳು ಥೈರಾಯ್ಡ್ ಕಾಯಿಲೆ, ಉಸಿರಾಟದ ಕಾಯಿಲೆ, ಶಿಲೀಂಧ್ರಗಳ ಸೋಂಕು, ರುಮಟಾಯ್ಡ್ ಮತ್ತು ಸಂಧಿವಾತ ಕಾಯಿಲೆಗಳನ್ನು ಸೂಚಿಸುತ್ತವೆ.
ಇದನ್ನು ಓದಿ : ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
* ಕೆಲವರ ಉಗುರುಗಳು ಚಮಚದ ಆಕಾರದಲ್ಲಿರುತ್ತವೆ. ಇವರು ರಕ್ತಹೀನತೆ, ಹೈಪೋಥೈರಾಯ್ಡಿಸಮ್ ಅಥವಾ ಯಕೃತ್ತಿನ ಸಮಸ್ಯೆಗಳನ್ನು ತುತ್ತಾಗಿರಬಹುದು. ಆಹಾರದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ, ಮುಖ್ಯವಾಗಿ ಕಬ್ಬಿಣ ಭರಿತ ಆಹಾರಗಳ ಮೇಲೆ ಗಮನ ನೀಡಬೇಕು.
* ತೆಳುವಾದ ಮತ್ತು ಮೃದುವಾದ ಉಗುರುಗಳನ್ನು ಹೊಂದಿದ್ದರೆ ಅದು ವಿಟಮಿನ್ ಬಿ ಕೊರತೆಯನ್ನು ಸೂಚಿಸುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಆಹಾರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕೊಬ್ಬಿನಾಮ್ಲ ಇರುವ ಆಹಾರ ಸೇವಿಸುವುದು ಉತ್ತಮ.
ಇದನ್ನು ಓದಿ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
* ಉಗುರುಗಳು ಕುಣಿಕೆಯ ರೀತಿ ಇದ್ದರೆ ಕಾಣಿಸಿಕೊಂಡರೆ, ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತ ಎಂದು ಪೌಷ್ಟಿಕತಜ್ಞರ (Nutritionist) ಅಭಿಪ್ರಾಯ. ಅಲ್ಲದೇ ಹೃದಯದ ಸಮಸ್ಯೆಯನ್ನು ಕೂಡ ಇರಬಹುದು.
* ಉಗುರುಗಳ ಮೇಲಿನ ಬಿಳಿ ಚುಕ್ಕೆಗಳು ಕೇವಲ ಚುಕ್ಕೆಗಳಲ್ಲ, ಇವು ಸತು ಕೊರತೆ ಅಥವಾ ಶಿಲೀಂಧ್ರಗಳ ಸೋಂಕಿನ (Fungal infection) ಸಂಕೇತವಾಗಿರಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.