Wednesday, February 5, 2025
HomeState Newsನಕಲಿ ದಾಖಲೆ ಪ್ರಮಾಣಪತ್ರ ನೀಡಿದ್ದ ಕೇಸ್ ; PSI ಅಮಾನತು.!
spot_img
spot_img
spot_img
spot_img

ನಕಲಿ ದಾಖಲೆ ಪ್ರಮಾಣಪತ್ರ ನೀಡಿದ್ದ ಕೇಸ್ ; PSI ಅಮಾನತು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಬ್ಯಾಡರಹಳ್ಳಿ ಠಾಣೆ ಸಬ್​ಇನ್ಸ್​​ಪೆಕ್ಟರ್​ (police sub inspector) ಅವರನ್ನು ಪೊಲೀಸ್ ಇಲಾಖೆಗೆ ನಕಲಿ ದಾಖಲೆಗಳು (fake documents) ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್​ (Bengaluru West Division DCP Girish) ಆದೇಶ ಹೊರಡಿಸಿದ್ದಾರೆ.

ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಕಾಶಿಲಿಂಗೇಗೌಡರನ್ನು ಸಸ್ಪೆಂಡ್ ಮಾಡಲಾಗಿದೆ.

ಇದನ್ನು ಓದಿ : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ಈ ಕುರಿತು ವಿಧಾನಸೌಧ ಠಾಣೆಯಲ್ಲಿ‌ ನಕಲಿ ದಾಖಲೆ ನೀಡಿದ ಸಂಬಂಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಸಬ್​ಇನ್ಸ್​​ಪೆಕ್ಟರ್​ ಕಾಶಿಲಿಂಗೇಗೌಡ ಜಾಮೀನು‌ ಪಡೆದು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಪಿಎಸ್​ಐ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!

ಬೆಂಗಳೂರು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್. ಟಿ. ಚಂದ್ರಶೇಖರ್ (Police Department Administration Officer S. T. Chandrasekhar) ಅವರು, ಸಬ್​ಇನ್ಸ್​​ಪೆಕ್ಟರ್​ ಕಾಶಿಲಿಂಗೇಗೌಡ ವಿರುದ್ಧ ನಕಲಿ ಜನ್ಮ ದಿನಾಂಕ ಹೊಂದಿರುವ ದಾಖಲೆಯನ್ನು ನೀಡಿ ಕೆಲಸ ಪಡೆದುಕೊಂಡ ಆರೋಪದಡಿ ದೂರು ನೀಡಿದ್ದು, ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ‌ ಎಫ್​ಐಆರ್​ ದಾಖಲಿಸಲಾಗಿತ್ತು.

ಸರ್ಕಾರವು ತನ್ನ ನಿಯಮದಲ್ಲಿ, ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು (Candidate age should not exceed 30 years) ತಿಳಿಸಿದೆ.

ಇದನ್ನು ಓದಿ : ಅಪಘಾತಕ್ಕೀಡಾದ Truck ಚಾಲಕನಿಗೆ ಜನರು ಮಾಡಿದ್ದೇನು ಗೊತ್ತೇ.? ಈ ವಿಡಿಯೋ ನೋಡಿ.!

ಆದರೆ ಅಭ್ಯರ್ಥಿ ಅಲ್ಲದಿದ್ದರೂ ಕಾಶಿಲಿಂಗೇಗೌಡ ನಕಲಿ ಜನ್ಮದಿನಾಂಕ ಇರುವ ದಾಖಲೆ ನೀಡಿ ಸಬ್​ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ, ಬಳಿಕ ನೇಮಕಗೊಂಡಿದ್ದರು (appointed) ಎಂದು ದೂರು ನೀಡಲಾಗಿತ್ತು.

ಹಿಂದಿನ ಸುದ್ದಿ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ ದಂಪತಿ..!

ಜನಸ್ಪಂದನ ನ್ಯೂಸ್, ಬೆಂಗಳೂರು : ದಂಪತಿ ತಮ್ಮಿಬ್ಬರು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾವು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸದಾಶಿವ ನಗರದ (Sadashiva Nagar, Bangalore) ಆರ್. ಎಂ. ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ನಡೆದಿದೆ.

ಇದನ್ನು ಓದಿ : Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!

ಸಾವಿಗೀಡಾದವರು ಅನೂಪ್‌ (38), ಪತ್ನಿ ರಾಖಿ (35), ಮಕ್ಕಳಾದ ಅನುಪ್ರಿಯಾ (5) ಮತ್ತು ಪ್ರಿಯಾಂಶ್ (2) ಎಂದು ತಿಳಿದು ಬಂದಿದೆ.

ಅನೂಪ್‌ ಉತ್ತರ ಪ್ರದೇಶ (Uttar Pradesh) ಮೂಲದವರಾಗಿದ್ದು, ಇವರು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಕನ್ಸಲ್ಟೆಂಟ್‌ (Software consultant in a private company) ಆಗಿ ಕೆಲಸ ಮಾಡುತ್ತಿದ್ದರು.

ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!

ದಂಪತಿ ಮೊದಲು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ನಿಖರ ಕಾರಣ (exact reason) ತಿಳಿದು ಬಂದಿಲ್ಲ. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಇದರ ಜೊತೆಗೆ ಮೊದಲ ಮಗುವಿಗೆ ಮಾನಸಿಕ ತೊಂದರೆ (mental trouble) ಇತ್ತು ಎನ್ನಲಾಗಿದೆ.

ಇನ್ನೂ ಅನೂಪ್ ಮನೆಯಲ್ಲಿ ಮೂರು ಜನ ಕೆಲಸಗಾರರಿದ್ದರು. ಇಬ್ಬರು ಕೆಲಸಗಾರರು ಅಡುಗೆ ಕೆಲಸಕ್ಕೆಂದು, ಒಬ್ಬರು ಮಗು ನೋಡಿಕೊಳ್ಳಲು ಇದ್ದರು. ಮೂವರಿಗೂ ತಿಂಗಳಿಗೆ 15 ಸಾವಿರ ರೂ. ಸಂಬಳ (salary) ನೀಡುತ್ತಿದ್ದ ಟೆಕ್ಕಿ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ- ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?

ಇನ್ನೂ ಬೆಳಗ್ಗೆ 11 ಗಂಟೆಗೆ ಪಾಂಡಿಚೇರಿಗೆ ಹೋಗಲಿದ್ದೇವೆ. ಬೇಗ ಕೆಲಸಕ್ಕೆ ಬನ್ನಿ ಎಂದು ಅನೂಪ್ ಕೆಲಸದವರಿಗೆ ಹೇಳಿದ್ದರು. ಹೀಗಾಗಿ ಬೆಳಗ್ಗೆ ಕೆಲಸದವರು ಮನೆಗೆ ಬಂದಿದ್ದಾರೆ. ಈ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ 10 ಗಂಟೆಯವರೆಗೂ ದಂಪತಿ ಸಂತೋಷವಾಗಿಯೇ ಇದ್ದರು ಎಂದು ಕೆಲಸದವರು ತಿಳಿಸಿದ್ದಾರೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!