ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯ ಮಹಡಿಯ ಮೇಲೆ ಇನ್ನೊಬ್ಬನೊಂದಿಗೆ ರೊಮ್ಯಾನ್ಸ್ ನಲ್ಲಿ ತೊಡಗಿದ್ದ ವೇಳೆ ಹೆಂಡತಿ ಪತಿಯ ಕೈಗೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.
ಯುವಕ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಕೈಗಳಿಂದ ಗುದ್ದಿ, ಕಾಲಿನಿಂದ ಒದ್ದು ಪಾಠ ಕಲಿಸಿದ್ದಾರೆ.
ಘಟನೆಯ ವಿಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾತ್ರಿ, ಯುವಕ ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಟೆರಸ್ ಮೇಲೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಮಹಿಳೆಯ ಗಂಡ ಟೆರಸ್‌ಗೆ ಬಂದಿದ್ದಾನೆ. ಪತ್ನಿಯೊಂದಿಗೆ ಇದ್ದ ಯುವಕನನ್ನು ಕಂಡು ಆಕ್ರೋಶಗೊಂಡ ಆತ, ರೆಡ್‌ಹ್ಯಾಂಡ್ ಆಗಿ ಇಬ್ಬರನ್ನೂ ಹಿಡಿದಿದ್ದಾನೆ.
ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ-ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?
ಕೂಡಲೇ ಮನೆಯಲ್ಲಿದ್ದವರಿಗೆ ಈ ವಿಚಾರ ತಿಳಿಸಿದಾಗ, ಇಡೀ ಮನೆಯವರು ಹಾಗೂ ಅಕ್ಕಪಕ್ಕದವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ನನ್ನಿಂದ ತಪ್ಪಾಗಿದೆ, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ, ಇಲ್ಲಿ ಬರೋದಿಲ್ಲ ಎಂದು ಆತ ಎಷ್ಟೇ ಕೇಳಿಕೊಂಡರೂ, ಗುಂಪು ಮಾತ್ರ ಕೋಲು -ಬೆಲ್ಟ್‌ಗಳಿಂದ ಆತನ ಮೇಲೆ ಹಲ್ಲೆ ಮಾಡುವುದನ್ನು ಮುಂದುವರಿಸಿದೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ :
अमरोहा में युवक को आशिकी करना पड़ा भारी
पति ने पत्नी के प्रेमी को रंगे हाथों पकड़ा
पति ने प्रेमी को लात घुसो से जमकर पीटा
पति व उसके परिजनों ने पत्नी के प्रेमी को जमीन गिरा गिराकर जमकर पीटा
पिटाई से बुरी तरह से लहुलुहान हुआ प्रेमी
मारपीट का लाइव विडियों वायरल
गजरौला थाना… pic.twitter.com/4YOX4F5aNH
— News1India (@News1IndiaTweet) December 31, 2024
ಹಿಂದಿನ ಸುದ್ದಿ : ಪಾರ್ಟಿ ಮಾಡಲು ಬಂದಿದ್ದ ಲವ್ವರ್‌ಗೆ ಚಾಕು ಇರಿದ ಪ್ರೇಯಸಿ.!
ಜನಸ್ಪಂದನ ನ್ಯೂಸ್, ಹಾಸನ : ಹಾಸನ (Hassan) ನಗರದ ಬಿ. ಎಂ. ರಸ್ತೆಯಲ್ಲಿರುವ ಹೋಟೆಲ್‌ವೊಂದರ ಗೇಟ್‌ನಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ (lover) ಚಾಕು ಇರಿದ ಆತಂಕಕಾರಿ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಎ. ಗುಡುಗನಹಳ್ಳಿ ಗ್ರಾಮದ ನಿವಾಸಿಯಾದ ಮನುಕುಮಾರ್ (25) ಎಂಬಾತ ತನ್ನ ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾಗಿದ್ದಾನೆ (He was stabbed with a knife) ಎಂದು ತಿಳಿದು ಬಂದಿದೆ.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ಮನುಕುಮಾರ್ ಹಾಸನದಲ್ಲಿ ಹಾರ್ಡ್‌ವೇರ್ ಮತ್ತು ಪ್ಲೈವುಡ್ ಅಂಗಡಿ ಇಟ್ಟುಕೊಂಡಿದ್ದನು. ಈತ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ನಡೆಸುತ್ತಿದ್ದರು. ಇಬ್ಬರು ಪರಸ್ಪರ ಲವ್ ಮಾಡುತ್ತಿದ್ದರು. ಆದರೆ ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು ಎನ್ನಲಾಗಿದೆ.
ನ್ಯೂ ಇಯರ್ ಸೆಲೆಬ್ರೇಶನ್ ಅಂತ ಮನುಕುಮಾರ್ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಆತನಿಗೆ ಭವಾನಿ ಪದೇಪದೇ (repeat) ಫೋನ್ ಮಾಡುತ್ತಿದ್ದಳು. ಅಲ್ಲದೇ ಹೋಟೆಲ್ ಬಳಿ ಬಂದು, ಅಲ್ಲಿಯೇ ಬಿದ್ದಿದ್ದ ಪಾಸ್ ಅನ್ನು ಕೊರಳಿಗೆ ಹಾಕಿಕೊಂಡು ಭವಾನಿ ಗೇಟ್ ಒಳಗೆ ಹೋದಳು (She went inside the gate). ಅಷ್ಟರಲ್ಲಿ ಗೇಟ್ ಬಳಿ ಬಂದ ಮನುಕುಮಾರ್ ಹಾಗೂ ಭವಾನಿ ನಡುವೆ ಗಲಾಟೆಯಾಗಿದೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಸ್ಥಳದಲ್ಲೇ ಇದ್ದ ಸ್ನೇಹಿತರು ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದರು. ಈ ವೇಳೆ ಭವಾನಿ ಏಕಾಏಕಿ ಚಾಕುವಿನಿಂದ ಮನುಕುಮಾರ್‌ಗೆ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಮನುಕುಮಾರ್ನನ್ನು ಜಿಲ್ಲಾಸ್ಪತ್ರೆಗೆ (district hospital) ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೆ. ಆರ್. ಪುರಂ ಪೊಲೀಸ್ ಠಾಣೆ (K. R. Puram police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ