ಜನಸ್ಪಂದನ ನ್ಯೂಸ್, ಬೆಳಗಾವಿ : ಘಟಪ್ರಭಾ ನದಿಯಲ್ಲಿ (Ghataprabha River) ಕಾರು ಸಮೇತವಾಗಿ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆನಕನಹೊಳಿ (Benakanaholi in Hukkeri Taluk of Belagavi District) ಸಮೀಪ ನಡೆದಿದೆ.
ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ನಿವಾಸಿ ಕಿರಣ ಲಕ್ಷ್ಮಣ ನಾವಲಗಿ (45) ಎಂಬುವವರು ಕಾರು ಸಮೇತ ನದಿಗೆ ಬಿದ್ದು (The car fell into the river) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಡಿ.30 ರಂದು ಪೂಜೆಗಾಗಿ ಹೂವು ತರಲು ಲಕ್ಷ್ಮಣ ಮನೆಯಿಂದ ಹೊರ ಹೋಗಿದ್ದವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು (missing) ಎನ್ನಲಾಗಿದೆ. ಬುಧವಾರ ನದಿಯಲ್ಲಿ ಕಾರು ಕಾಣಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಇದನ್ನು ಓದಿ : ಮನೆಯ ಟೆರಸ್ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!
ಇನ್ನು ನದಿಯಿಂದ ಕಾರು ಮತ್ತು ಶವ ಹೊರತೆಗೆಯಲಾಗಿದೆ ಎಂದು ಯಮಕನಮರಡಿ ಠಾಣೆ ಇನ್‌ಸ್ಪೆಕ್ಟರ್ ಜಾವೇದ್ ಮುಷಾಪುರಿ ತಿಳಿಸಿದರು.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ (Yamakanamaradi Police Station) ಪ್ರಕರಣ ದಾಖಲಾಗಿದೆ.
ಹಿಂದಿನ ಸುದ್ದಿ : ತನ್ನ ಮೂವರು ಮಕ್ಕಳನ್ನು ಕೊಂದವನಿಗೆ ಮರಣದಂಡನೆ ಶಿಕ್ಷೆ.!
ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನ್ಯಾಯಾಲಯವು (Mangalore Court) ಆರೋಪಿಯೋರ್ವನಿಗೆ ಮರಣ ದಂಡನೆ (death penalty) ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿ ಹಿತೇಶ್ ಶೆಟ್ಟಿಗಾರ್ ಎಂಬಾತ ತನ್ನ ಮೂವರು ಮಕ್ಕಳನ್ನು ಬಾವಿಯಲ್ಲಿ ದೂಡಿ ಕೊಂದಿದ್ದ, ಅಲ್ಲದೇ ಪತ್ನಿಯನ್ನು ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ (attempt to murder).
ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ- ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?
2022ರ ಜೂನ್ 23ರಂದು ಸಂಜೆ ವೇಳೆ ತಾಳಿಪಾಡಿ ಗ್ರಾಮದ ಪದ್ಮನೂರಿನಲ್ಲಿ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮೀತಾ (13), ಉದಯ ಕುಮಾರ (11), ದಕ್ಷೀತ್ (5) ಎಂಬ ಮಕ್ಕಳನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಅವರನ್ನು ಬಾವಿಗೆ ನೂಕಿ ಕೊಲೆಗೆ ಯತ್ನಿಸಿದ್ದ.
ಮಕ್ಕಳನ್ನು ಬಾವಿಗೆ ತಳ್ಳಿದ ವೇಳೆ ರಶ್ಮೀತಾ ಎಂಬ ಬಾಲಕಿ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿದ್ದಳು (The girl was holding the pump pipe attached to the well). ಇದನ್ನು ಕಂಡ ಪಾಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.
ಯಾವುದೇ ಕೆಲಸ ಮಾಡದೆ ಆರೋಪಿ ಹಿತೇಶ್ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದೇ ಸಿಟ್ಟಲ್ಲಿ ಆತ ತನ್ನ ಮೂವರು ಮಕ್ಕಳನ್ನು ಬಾವಿಗೆ ನೂಕಿ ಕೊಲೆಗೈದಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಮನೆಯ ಪಕ್ಕದ ಬಾವಿಗೆ ದೂಡಿದ್ದ. ಲಕ್ಷ್ಮಿಯ ಚೀರಾಟ ಕೇಳಿ ಸ್ಥಳಿಯ ವ್ಯಕ್ತಿಯೋರ್ವರು ಆಕೆಯನ್ನು ರಕ್ಷಿಸಿದ್ದರು.
ಇದನ್ನು ಓದಿ : ಖಾಲಿ ಇರುವ Anganwadi ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Mulki Police Station) ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ (Inspector of Police) ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು (charge sheet) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿಯು ಕೊಲೆ ಹಾಗೂ ಕೊಲೆ ಯತ್ನ ನಡೆಸಿರುವುದು ಸಾಬೀತಾದ (proven) ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ (3rd Additional District and Sessions Court Judge) ಸಂಧ್ಯಾ ಆರೋಪಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.