HomeGeneral NewsRave party : 7 ಯುವತಿಯರು ಸೇರಿ 30 ಜನ ಪೊಲೀಸ್‌ ವಶಕ್ಕೆ.!
spot_img
spot_img

Rave party : 7 ಯುವತಿಯರು ಸೇರಿ 30 ಜನ ಪೊಲೀಸ್‌ ವಶಕ್ಕೆ.!

ಜನಸ್ಪಂದನ ನ್ಯೂಸ್‌, ಚಿಕ್ಕಬಳ್ಳಾಪುರ : ದೇವನಹಳ್ಳಿ ಪೊಲೀಸರು ರೇವ್‌ ಪಾರ್ಟಿ (Rave party) ನಡೆಯುತ್ತಿದ್ದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್ ಹೌಸ್ ಮೇಲೆ ದೇವನಹಳ್ಳಿ ಪೋಲಿಸರು ದಾಳಿ ನಡಿಸಿದ್ದಾರೆ.

ಇದನ್ನು ಓದಿ : Job : ನೇರ ಸಂದರ್ಶನದ ಮೂಲಕ ರಾಜ್ಯದ ಸಿಲ್ಕ್ ಬೋರ್ಡ್‌ನಲ್ಲಿ ನೇಮಕಾತಿ.!
Rave Party :

ಕಳೆದ ರಾತ್ರಿ ರೇವ್ ಪಾರ್ಟಿಯಲ್ಲಿ ನಡೆಯುತ್ತಿದ್ದ ಫಾರ್ಮ್ ಹೌಸ್ ಮೇಲೆ ದೇವನಹಳ್ಳಿ ಪೋಲಿಸರು ದಾಳಿ ನಡೆಸಿದ್ದಾರೆ. ಈ ರೇವ್‌ ಪಾರ್ಟಿಯಲ್ಲಿ ಸುಮಾರು ಸುಮಾರು 30ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗಿಯಾಗಿದ್ದರು.

ಪಾರ್ಟಿಯಲ್ಲಿದ್ದ ಇಷ್ಟು ಯುವಕ-ಯುವತಿಯರು ಕುಡಿದ ಮತ್ತಿನಲ್ಲಿ ತೇಲಾಡಿದ್ದಾರೆ. ಪೊಲೀಸ್‌ ದಾಳಿ ವೇಳೆ ಮಾದಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ : Love Marriage : ಪ್ರೀತಿಸಿ ಮನೆ ಬಿಟ್ಟು ಹೋದ ಮಗಳು ; ಕೆರೆಗೆ ಹಾರಿದ 3 ಕುಟುಂಬ ಸದಸ್ಯರು.!

ಫಾರ್‌ ಹೌಸ್‌ ವೊಂದರಲ್ಲಿ ರೇವ್‌ ಪಾರ್ಟಿ ನಡೆಯುತ್ತಿದೆ ಎಂಬ ಸ್ಥಳೀಯರ ಮಾಹಿತಿ ಮೇರೆಗೆ ದೇವನಹಳ್ಳಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ 10 ಯುವತಿಯರು, 20 ಯುವಕರು ಈ ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ದೊರೆತಿದೆ.

ಈ ವೇಳೆ ಬರ್ತ್ ಡೇ ಪಾರ್ಟಿಯ ಹಿನ್ನಲೆಯಲ್ಲಿ ಈ ರೇವ್‌ ಪಾರ್ಟಿ ಆಯೋಜಿಸಲಾಗಿತ್ತೆಂದು ಹೇಳಲಾಗುತ್ತಿದ್ದು, ಪಾರ್ಟಿಯಲ್ಲಿ ರಾತ್ರಿ ಇಡೀ ಮಾದಕ ವಸ್ತು ಬಳಕೆ ಮಾಡಿರುವ ಸಂಶಯದ ಮೇಲೆ ಎಲ್ಲರನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

ಈ ರೇವ್‌ ಪಾರ್ಟಿಯಲ್ಲಿ ಪೆಡ್ಲರ್ ಕೂಡ ಇದ್ದಿರು ಮಾಹಿತಿ ಇದೆ. ಇನ್ನು ಈ ಎಲ್ಲಾ ಆರೋಪಿಗಳು ಐಟಿ ಸೆಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ ಬಳಿಕ 4 ಜನರನ್ನು ಬಂಧಿಸಿ ಉಳಿದವರನ್ನು ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ತಿಳಿಸಿದ್ದಾರೆ.

ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.! 

ಜನಸ್ಪಂದನ ನ್ಯೂಸ್‌,ನೌಕರಿ : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL) ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Video : ರೆಡ್ ಸಿಗ್ನಲ್ ಜಂಪ್ ; ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್‌.
NIACL ಹುದ್ದೆಗಳ ಕುರಿತು ಮಾಹಿತಿ :

ಇಲಾಖೆ ಹೆಸರು : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL).
ಹುದ್ದೆಗಳ ಸಂಖ್ಯೆ : 500
ಹುದ್ದೆಗಳ ಹೆಸರು : ಅಪ್ರೆಂಟಿಸ್/Apprentice
ಉದ್ಯೋಗ ಸ್ಥಳ : ಮುಂಬೈ (ಮಹಾರಾಷ್ಟ್ರ).
ಅಪ್ಲಿಕೇಶನ್ ಮೋಡ್ : Online ಮೋಡ್.

ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.9000/- ಸ್ಟೈಫಂಡ್ ನೀಡಲಾಗುವುದು.
ಇದನ್ನು ಓದಿ : Belagavi : ಇನ್ನೇರಡೇ ವರ್ಷದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೊಸ ಲುಕ್.!
ವಯೋಮಿತಿ :
  • 21–30 ವರ್ಷಗಳು (ಜೂನ್ 2, 1995 ಮತ್ತು ಜೂನ್ 1, 2004 ರ ನಡುವೆ ಜನಿಸಿದವರು/
    ದಿನಾಂಕ : ಜೂನ್ 1, 2025 ರಂತೆ)
ವಯೋಮಿತಿ ಸಡಿಲಿಕೆ :

• ಎಸ್ಸಿ/ಎಸ್ಟಿ ಅಭ್ಯರ್ಥಿಗಳು : 05 ವರ್ಷಗಳು.
• ಒಬಿಸಿ ಅಭ್ಯರ್ಥಿಗಳು : 03 ವರ್ಷಗಳು.

ವಿದ್ಯಾರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ (Degree) ಪಾಸ್ ಮಾಡಿರಬೇಕು.

ಇದನ್ನು ಓದಿ : Health : ಈ ಜ್ಯೂಸ್‌ನಲ್ಲಿದೆ ಬ್ಲಡ್ ಕ್ಯಾನ್ಸರ್ ಗುಣಪಡಿಸುವ ಶಕ್ತಿ.!
ಅರ್ಜಿ ಶುಲ್ಕ:

ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ : ರೂ. 944/-
SC / ST / ಮಹಿಳೆಯರು : ರೂ. 708/-
ಪಿಡಬ್ಲ್ಯೂಬಿಡಿ : ರೂ. 472/-
ಪಾವತಿ ವಿಧಾನ : ಆನ್‌ಲೈನ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ)

ಆಯ್ಕೆ ಪ್ರಕ್ರಿಯೆ :
  • ಲಿಖಿತ ಪರೀಕ್ಷೆ ಮತ್ತು
  • ಸಂದರ್ಶನ
ಇದನ್ನು ಓದಿ : Vedio : ಚಲಿಸುವ ಬೈಕ್‌ ಮೇಲೆಯೇ ಪತಿಯನ್ನು ಚಪ್ಪಲಿಯಿಂದ ಬಡೆದ ಪತ್ನಿ.!

ಅರ್ಜಿ ಸಲ್ಲಿಸುವುದು ಹೇಗೆ?

  • ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ link ನ್ನು ಕ್ಲಿಕ್ ಮಾಡಿ.
  • ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
  • ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು Form ನ್ನು ಸಲ್ಲಿಸಿ.
  • ಅಂತಿಮವಾಗಿ Print ತೆಗೆಯಲು ಮರೆಯಬೇಡಿ.
ಇದನ್ನು ಓದಿ : Marriage : ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಮದುವೆ ; ಕಾರಣವೇನು ಗೊತ್ತಾ.?
ಪ್ರಮುಖ ದಿನಾಂಕಗಳು :
  • ಅಧಿಸೂಚನೆ ಬಿಡುಗಡೆ : 22 ಮೇ 2025.
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 6 ಜೂನ್ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಜೂನ್ 2025 (ರಾತ್ರಿ 11:59).
  • ಲಿಖಿತ ಪರೀಕ್ಷೆಯ ದಿನಾಂಕ : ಪ್ರಕಟಿಸಲಾಗುವುದು.
ಪ್ರಮುಖ ಲಿಂಕ್‌ಗಳು :

• ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್: newindia.co.in
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.

ಇದನ್ನು ಓದಿ : Job : ನೇರ ಸಂದರ್ಶನದ ಮೂಲಕ ರಾಜ್ಯದ ಸಿಲ್ಕ್ ಬೋರ್ಡ್‌ನಲ್ಲಿ ನೇಮಕಾತಿ.!
ಪರೀಕ್ಷಾ ಪ್ಯಾಟರ್ನ್‌ :
SubjectQuestionsMarksDuration
General / Financial Awareness2525
General English2525
Quantitative & Reasoning Aptitude2525
Computer Knowledge2525
Total1001001 Hour

Disclaimer : The above given information is available On online, candidates should check it properly before applying. This is for information only̤

 

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments