Sunday, February 25, 2024
spot_img
spot_img
spot_img
spot_img
spot_img

3 ಮದುವೆ ; ನಾಲ್ವರು ಬಾಲಿವುಡ್ ನಟಿಯರ ಜೊತೆ Affair ಹೊಂದಿದ್ದರು ಈ ಮಾಜಿ ಪ್ರಧಾನಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಿವುಡ್ ನಟಿಯರ ಜೊತೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಫೇರ್‌ ಹೊಂದಿದ್ದರು.

ಇಮ್ರಾನ್ ಖಾನ್ ಮಾಡಿಕೊಂಡಿದ್ದ ಎಡವಟ್ಟು ಒಂದಾ? ಎರಡಾ? ಅದ್ರಲ್ಲೂ ಬಾಲಿವುಡ್ ನಟಿಯರು ಹಾಗೂ ಇಮ್ರಾನ್ ಖಾನ್ ಜೊತೆಗೆ ಸಂಬಂಧ ಇದೆ ಅಂತಾ ಹಲವರ ಹೆಸರು ಉಲ್ಲೇಖ ಆಗಿತ್ತು.

ಭಾರತದ ಯಾವ ಯಾವ ನಟಿಯರ ಜೊತೆಗೆ ಇಮ್ರಾನ್ ಖಾನ್‌ಗೆ ಲವ್ ಆಗಿತ್ತು? ಬನ್ನಿ ತಿಳಿಯೋಣ.

ಇದನ್ನು ಓದಿ : Raid : ಬೆಳ್ಳಂಬೆಳಿಗ್ಗೆ ಶಾಸಕರ ಮನೆ ಮೇಲೆ ಇಡಿ ದಾಳಿ.!

ರೇಖಾ ಜೊತೆ ಇಮ್ರಾನ್ ಅಫೇರ್? ಮೊದಲನೆಯದಾಗಿ ಬಾಲಿವುಡ್ ನಟಿ ರೇಖಾ ಜೊತೆಗೆ ಇಮ್ರಾನ್ ಖಾನ್‌ಗೆ ಸಂಬಂಧ ಇದ್ದು ಮದುವೆ ಆಗುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಒಂದು ಕಾಲಕ್ಕೆ ಪಾಕಿಸ್ತಾನ ಕ್ರಿಕೆಟಿಗ ಇಮ್ರಾನ್ ಖಾನ್ & ರೇಖಾ ನಡುವಿನ ಸಂಬಂಧದ ವದಂತಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.

ಅದ್ರಲ್ಲೂ 1985ರಲ್ಲಿ ಭಾರತದ ನಟಿ ರೇಖಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಇಮ್ರಾನ್ ಖಾನ್ ಮದುವೆ ಆಗೋದು ಫಿಕ್ಸ್ ಎಂದು ವರದಿಗಳು ಕೂಡ ಪ್ರಕಟ ಆಗಿದ್ದವು.

ಜೀನತ್ ಅಮಾನ್ : 
ಬಾಲಿವುಡ್ ನಟಿ ಜೀನತ್ ಅಮಾನ್ & ಇಮ್ರಾನ್ ಖಾನ್ ಪ್ರಣಯದಲ್ಲಿ ತೊಡಗಿದ್ದು, ಮದುವೆ ಆಗೋದು ಫಿಕ್ಸ್ ಎನ್ನಲಾಗಿತ್ತು. ಈ ವದಂತಿ ವ್ಯಾಪಕವಾಗಿ ಹರಡಿತ್ತು. 1979 ರ ನವೆಂಬರ್‌ನಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಿದ ವೇಳೆ ಈ ಊಹಾಪೋಹ ಮೊದಲು ಹುಟ್ಟಿಕೊಂಡಿತು.

ಇದನ್ನು ಓದಿ : ಮಾಜಿ ಶಾಸಕರ ಪುತ್ರ ಬಂಧನ.!

ಅವರ ಸಂಬಂಧದ ಕುರಿತು ವದಂತಿ ಶುರುವಾಗಿತ್ತು. ಮಾಧ್ಯಮ ವರದಿ ಹೊರತಾಗಿಯೂ ಇಮ್ರಾನ್ ಅಥವಾ ಜೀನತ್ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಲೇ ಇಲ್ಲ.

ಮೂನ್ ಮೂನ್ ಸೇನ್ :
ಮತ್ತೊಬ್ಬ ಭಾರತದ ನಟಿ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎನ್ನುವ ಸುದ್ದಿ ಹರಡಿತ್ತು. ಅಷ್ಟಕ್ಕೂ ಇಮ್ರಾನ್ ಖಾನ್ ಮತ್ತು ಬೆಂಗಾಲಿ ನಟಿ ಮೂನ್ ಮೂನ್ ಸೇನ್ ನಡುವಿನ ಸಂಬಂಧದ ಸುತ್ತ ಸಾಕಷ್ಟು ಹಲ್‌ಚಲ್ ಎದ್ದಿತ್ತು. ಹೀಗೆ ಇಮ್ರಾನ್ ಹಾಗೂ ಸೇನ್ ನಡುವಿನ ಆತ್ಮೀಯತೆ ಬಗ್ಗೆಯೂ ಚರ್ಚೆಯಾಗಿತ್ತು. ಇಷ್ಟಾದರೂ ಈ ಸುದ್ದಿ ಕೂಡ ಗಾಳಿಗೆ ತೇಲಿ ಹೋಗಿತ್ತು.

ಶಭಾನಾ ಅಝ್ಮಿ : 
ಈ ನಟಿಯೊಂದಿಗರ ಲವ್ವಿಡವ್ವಿ ಇದೆ ಎನ್ನುತ್ತಿತ್ತು ಕ್ರಿಕೆಟ್ ಜಗತ್ತು. ಹಾಗೇ ಬಾಲಿವುಡ್ ಅಂಗಳದಲ್ಲೂ ಇಬ್ಬರ ಲವ್ ಮ್ಯಾಟರ್ ಹರಡಿಕೊಂಡಿತ್ತು. ಆದರೆ ಎಂದಿಗೂ ಈ ಬಗ್ಗೆ ಇಮ್ರಾನ್ ಖಾನ್ ಅಥವಾ ಶಭಾನಾ ಅಝ್ಮಿ ಒಪ್ಪಿಕೊಂಡಿರಲಿಲ್ಲ.

ಇದನ್ನು ಓದಿ : ಕಾಲೇಜು ವಿದ್ಯಾರ್ಥಿನಿಗೆ PSI, ಕಾನ್ಸ್‌ಟೇಬಲ್ ಕಿರುಕುಳ ನೀಡಿದ ಕೇಸ್’ಗೆ ಬಿಗ್ ಟ್ವಿಸ್ಟ್.!

ಹೀಗಾಗಿ ಈ ಸುದ್ದಿ ಕೂಡ ಗಾಳಿ ಸುದ್ದಿ ಆಗೋಯಿತು. ಆದರೆ ಇಮ್ರಾನ್ ಖಾನ್ ಲವ್ವಿಡವ್ವಿ ವಿಚಾರವಾಗಿ ಸಖತ್ ಸದ್ದು ಮಾಡುತ್ತಿದ್ದರು. ಇದು ಭಾರತದ ಮಾಧ್ಯಮಗಳಲ್ಲಿ ಮಾತ್ರವೇ ಅಲ್ಲದೆ ಪಾಕಿಸ್ತಾನದ ಮಾಧ್ಯಗಳಲ್ಲಿ ಕೂಡ ದೊಡ್ಡ ಹಲ್ ಚಲ್ ಸೃಷ್ಟಿಸಿತ್ತು.

spot_img
- Advertisment -spot_img